ಬಾಯಲ್ಲಿ ನೀರೂರಿಸುವ ತಿಂಡಿ-ತಿನಿಸು
ಮೈಸೂರು

ಬಾಯಲ್ಲಿ ನೀರೂರಿಸುವ ತಿಂಡಿ-ತಿನಿಸು

January 13, 2019

ಮೈಸೂರು: ಬಹುರಾಷ್ಟ್ರೀಯ ನಾಟಕೋತ್ಸವದಲ್ಲಿ ನಾಟಕಗಳಿಗಿಂತ ಹೆಚ್ಚಾಗಿ ಬಾಯಲ್ಲಿ ನೀರುಣಿಸುವ ಬಗೆ ಬಗೆಯ ಸಿಹಿ, ಇತರೆ ತಿಂಡಿ ತಿನಿಸು ಖಾದ್ಯ ಪ್ರಿಯರನ್ನು ಆಕರ್ಷಿಸುತ್ತಿವೆ.

ಮೈಸೂರಿನ ರಂಗಾಯಣದ ಆವರಣದಲ್ಲಿ ತೆರೆದಿರುವ ಮಳಿಗೆಗಳಲ್ಲಿ 9 ಆಹಾರ ಮಳಿಗೆಗಳಿದ್ದು, ದಾಳಿಂಬೆ, ಅವರೇಕಾಳು ಚುರುಮುರಿ, ದತ್ತ ಸ್ಪೆಷಲ್ ಕೊಬ್ಬರಿ ಮಿಠಾಯಿ, ಹೋಳಿಗೆ, ಜೋಳದ ರೊಟ್ಟಿ, ಗಿರ್ಮಿಟ್ಟು, ಬೆಣ್ಣೆದೋಸೆ ಮತ್ತಿ ತರೆ ತಿನಿಸುಗಳು ಜನರ ಬಾಯಲ್ಲಿ ನೀರುಣಿಸಲಿವೆ.

ರಾಮಣ್ಣ ಅಂಡ್ ಸನ್ಸ್ ಚುರು ಮುರಿ ಕಾರ್ನರ್ ಮಳಿಗೆ ಮಾಲೀಕ ಪರ ಮೇಶ ಅವರು ತಯಾರಿಸುವ ದಾಳಿಂಬೆ ಚುರುಮುರಿ, ಅವರೇ ಕಾಳು ಚುರುಮುರಿ, ದತ್ತ ಸ್ಪೆಷಲ್ ಕೊಬ್ಬರಿ ಮಿಠಾಯಿ, ಜೈನ್ ಸ್ಪೆಷಲ್, ಬೇಬಿ ಕಾರ್ನ್ ಮಸಾಲೆ, ದತ್ತ ಸ್ಪೆಷಲ್ ಮಾವಿನಕಾಯಿ, ಮಸಾಲೆ ನಿಪ್ಪಿಟ್ಟು ಮಸಾಲೆಗೆ ಬೇಡಿಕೆಯಿದ್ದು, ಬಹುತೇಕ ಜನರು ಖಾದ್ಯಗಳನ್ನು ಸವಿಯಲು ಮುಗಿ ಬೀಳುತ್ತಿದ್ದಾರೆ. ಹಾಗೆಯೇ ಬಾಗಲಕೋಟೆ ಸ್ಪೆಷಲ್ ಮಳಿಗೆಯಲ್ಲಿ ಜೋಳದ ರೊಟ್ಟಿ ಎಣ್ಣೆಕಾಯಿ ಪಲ್ಯ, ಹೋಳಿಗೆ, ಗಿರ್ಮಿಟ್ಟು, ಮಿರ್ಚಿಬಜ್ಜಿ, ಸಬ್ಬಕ್ಕಿ ವಡೆ, ದಾವಣಗೆರೆ ಬೆಣ್ಣೆ ದೋಸೆ. ಕರಾವಳಿ ಸ್ಪೆಷಲ್ ಮಳಿಗೆ ಯಲ್ಲಿ ಮಂಗಳೂರು ಬನ್ಸ್, ಮಂಗಳೂರು ದೋಸೆ, ನೀರ್‍ದೋಸೆ, ಕೊಟ್ಟೆಇಡ್ಲಿ. ಮೇಲು ಕೋಟೆ ಪುಳಿಯೋಗರೆ ಮಳಿಗೆಯಲ್ಲಿ ಪುಳಿಯೋಗರೆ, ಸಕ್ಕರೆ ಪೊಂಗಲ್, ಖಾರ ಪೊಂಗಲ್, ಮೊಸರನ್ನ. ಭುವಿ ನ್ಯಾಚುರಲ್ಸ್ ಸಿರಿಧಾನ್ಯ ಆಹಾರ ಪದಾರ್ಥ ಮಳಿಗೆಯಲ್ಲಿ ನವಣೆ ದೋಸೆ, ಕಷಾಯ, ನವಣೆ ಪಾಯಸ, ಕಜ್ಜಾಯ, ನವಣೆ ಚಕ್ಕಲಿ, ಸಿರಿಧಾನ್ಯ ಲಡ್ಡು ಹಾಗೂ ಹಾಲು ಬಾಯಿ ಮನೆ ಮಳಿಗೆ ಯಲ್ಲಿ ಸಾಂಬರ್, ರಸಂ, ವಾಂಗೀಬಾತ್ ಪುಡಿ, ಪುಳಿಯೊಗರೆ ಗೊಜ್ಜು, ಚಟ್ನಿ ಪುಡಿ, ಉಪ್ಪಿನಕಾಯಿ ಪದಾರ್ಥಗಳು, ಖಾರ, ಸಿಹಿ ತಿಂಡಿಗಳು ದೊರೆಯಲಿವೆ.

Translate »