ನಾಟಕ ಮನರಂಜನೆ ಮಾತ್ರವಲ್ಲ ತರಾವರಿ ವಸ್ತುಗಳ ಖರೀದಿಸುವ ಅವಕಾಶವೂ ಉಂಟು
ಮೈಸೂರು

ನಾಟಕ ಮನರಂಜನೆ ಮಾತ್ರವಲ್ಲ ತರಾವರಿ ವಸ್ತುಗಳ ಖರೀದಿಸುವ ಅವಕಾಶವೂ ಉಂಟು

January 13, 2019

ಮೈಸೂರು: ಒಂದೆಡೆ ಗ್ರಾಮೀಣ ಪ್ರದೇಶದ ಯುವಕರು, ಮಹಿಳಾ ರೈತರು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ತಮ್ಮ ಭೂಮಿ -ಬದುಕಿನ ಅಭಿವ್ಯಕ್ತಿ ಫೋಟೋಗಳು. ಕಾರಾಗೃಹವಾಸಿಗಳು ತಯಾರಿಸಿದ ಮ್ಯಾಟ್, ಬೆಡ್‍ಶೀಟ್, ಹೂವಿನ ಹಾರ, ಶರ್ಟ್‍ಗಳು. ಮತ್ತೊಂದೆಡೆ ನಾಲಗೆಗೆ ರುಚಿ ನೀಡುವ ನವಣೆದೋಸೆ, ಕಜ್ಜಾಯ, ನವಣೆ ಚಕ್ಕಲಿ, ದಾಳಿಂಬೆ, ಅವರೇಕಾಳು ಚುರುಮುರಿ, ಹೋಳಿಗೆ, ಜೋಳದ ರೊಟ್ಟಿಗಳು. ಮಣ್ಣಿ ನಿಂದ ತಯಾರಿಸಿದ ಮ್ಯಾಜಿಕ್ ದೀಪಗಳು. ಜ್ಞಾನ ಭಂಡಾರ, ಸಿದ್ಧ ಉಡುಪುಗಳು… ಇವೆಲ್ಲವೂ ಜನರನ್ನು ತನ್ನತ್ತ ಆಕರ್ಷಿಸುತ್ತಿವೆ.

ಇಂದಿನಿಂದ ಆರಂಭವಾದ ಬಹು ರೂಪಿ ರಾಷ್ಟ್ರೀಯ ನಾಟಕೋತ್ಸವ ಹಿನ್ನೆಲೆ ಯಲ್ಲಿ ಮೈಸೂರಿನ ರಂಗಾಯಣದ ಆವ ರಣದಲ್ಲಿ ಪುಸ್ತಕಮಳಿಗೆಗಳು, ಪೇಯಿಂ ಟಿಂಗ್, ವೆಸ್ಟ್ ಬೆಂಗಾಲ್‍ನ ಉಡುಪು ಗಳು, ಸಿದ್ಧ ಉಡುಪುಗಳ ಮಳಿಗೆ, ಮಣ್ಣಿ ನಿಂದ ತಯಾರಿಸಿದ ಪದಾರ್ಥಗಳ ಮಳಿಗೆ, ಹತ್ತಿ ಮತ್ತು ಕೈಮಗ್ಗದ ಉಡುಪು, ಗಿಡ ಮೂಲಿಕೆ ಔಷಧ, ಆಹಾರ, ಕಲಾ ಮೇಳ ಮಳಿಗೆ ಸೇರಿದಂತೆ 80ಕ್ಕೂ ಹೆಚ್ಚು ಮಳಿಗೆ ಗಳಿವೆ. ಮಣ್ಣು-ಕಣ್ಣು ಶೀರ್ಷಿಕೆಯಡಿ ಶಿವಮೊಗ್ಗ ಜಿಲ್ಲೆ ಶಿರಸಿಯ ವನಶ್ರೀ ಮತ್ತು ಚಾಮರಾಜನಗರದ ಪುನರ್ಚಿತ್ ಈ ಎರಡೂ ಸಂಸ್ಥೆಗಳು ಪಾಲುದಾರಿಕೆಯಲ್ಲಿ ಗ್ರಾಮೀಣ ಪ್ರದೇಶದ 19 ಮಂದಿ ಯುವ ಕರು ಹಾಗೂ ಮಹಿಳಾ ರೈತರಿಗೆ 7 ತಿಂಗಳು ಕ್ಯಾಮೆರಾ ಕೌಶಲ್ಯದ ತರಬೇತಿ, ಮಾರ್ಗದರ್ಶನ ನೀಡಿ, ಅವರ ಕ್ಯಾಮರಾ ಕೈಚಳದಲ್ಲಿ ಕ್ಲಿಕ್ಕಿಸಿದ ಪರಿಸರದ ಬೇರೆ-ಬೇರೆ ಮುಖಗಳು, ತಮ್ಮ ಜೀವನ, ಭೂಮಿ-ಬದುಕಿನ ಅಭಿವ್ಯಕ್ತಿ ಫೋಟೋ ಗಳನ್ನು ಅನಾವರಣಗೊಳಿಸಿದ್ದು, ವೀಕ್ಷಕ ರಿಂದ ಮೆಚ್ಚುಗೆ ವ್ಯಕ್ತವಾಯಿತು.

ಪುಸ್ತಕ ಮಳಿಗೆ: ನವಕರ್ನಾಟಕ ಪ್ರಕಾ ಶನ, ಚೇತನ ಬುಕ್‍ಹೌಸ್, ಶ್ರೀರಾಮ್ ಬುಕ್‍ಹೌಸ್, ವಿಸ್ಮಯ ಪ್ರಕಾಶನ, ಸಪ್ನ ಬುಕ್ ಹೌಸ್, ಅಭಿರುಚಿ ಪ್ರಕಾಶನ ಪುಸ್ತಕ ಮಳಿಗೆ ತೆರೆದಿದ್ದು, ಮಣಿಕಾಂತ್ ಬರೆದಿರುವ ನವಿಲುಗರಿ’, ರವಿ ಡಿ.ಚನ್ನಣ್ಣ ನವರ್-ನಮ್ಮೋಳಗೊಬ್ಬ’, ಡಾ. ಕೆ.ಎನ್.ಗಣೇಶಯ್ಯ ಅವರ ರಕ್ತಸಿಕ್ತ ರತ್ನ’, ಡಾ.ಶರಣು ಹುಲ್ಲೂರು ಅವರಅಂಬ ರೀಶ’, ಎಸ್.ಮಾಲತಿ ಅವರ ಹೊಸ ದಿಕ್ಕು’, ಅನುಪಮ ಮಂಗಳ ವೇಢೆ ಅವರಅನುಪಮ ಕಥನ ಪುಸ್ತಕ’, ಸರಸ್ವತಿ ಟಿ. ಸುಬ್ರಹ್ಮಣ್ಯ ಅವರ `ಕೈಲಾಸಂ ಕನ್ನಡ ನಾಟಕ ಮಂಜರಿ’ ಪುಸ್ತಕಗಳು ಸೇರಿದಂತೆ ಅನೇಕ ಪುಸ್ತಕಗಳು ಲಭ್ಯವಿವೆ.

ಕಾರಾಗೃಹವಾಸಿಗಳ ಉತ್ಪನ್ನಗಳು: ಕಾರಾ ಗೃಹ ಉತ್ಪನ್ನಗಳ ಮಾರಾಟ ಮಳಿಗೆಯಲ್ಲಿ ಮೈಸೂರು ಕೇಂದ್ರ ಕಾರಾಗೃಹ ವಾಸಿಗಳು ತಯಾರಿಸಿದ ಮ್ಯಾಟ್, ಬೆಡ್‍ಶೀಟ್, ಹೂವಿನ ಹಾರ, ಶರ್ಟ್‍ಗಳು, ಪಂಚೆ, ಕರವಸ್ತ್ರ, ಪಂಜಾ ಜಂಖಾನ. ಕಲಾ ಕೃಷಿ ಮಳಿಗೆಯಲ್ಲಿ ಮೈಸೂರು ಅರಮನೆ, ಚಿಕ್ಕ ಗಡಿಯಾರ, ದೊಡ್ಡಗಡಿಯಾರ, ಕುದುರೆ, ಲಕ್ಷ್ಮಿ, ಸರಸ್ವತಿ, ಶಂಕರಾಚಾರ್ಯರು, ಮೈಸೂರು ಒಡೆಯರರ ಚಿತ್ರಗಳು ಹಾಗೂ ಇನ್ನಿತರೆ ಮಳಿಗೆಗಳಲ್ಲಿ ಮಹಿಳೆಯರ ಡ್ರೆಸ್ ಮೆಟೀರಿಯಲ್‍ಗಳು, ಕುರ್ತ, ಶರ್ಟ್, ಬನಿಯನ್, ಲೇಡಿಸ್ ಟಾಪ್ಸ್, ದುಪ್ಪಟ್ಟ, ಖಾದಿ, ರೇಷ್ಮೆ ಸಿಲ್ಕ್ ಸೀರೆಗಳು, ಶರ್ಟ್‍ಗಳು, ಬಟ್ಟೆ ಬ್ಯಾಗ್, ಹೆಸರು ಮತ್ತು ಭಾವಚಿತ್ರವಿರುವ ಟೀ ಶರ್ಟ್‍ಗಳು.

ಮ್ಯಾಜಿಕ್ ದೀಪ: ಕುಂಭ ಕಲಾ ಕುಟೀರ ಮಳಿಗೆಯಲ್ಲಿ ಮಣ್ಣಿನ ದೀಪ, ತೋರಣ ಗಳು, ಕುಡಿಕೆಗಳು, ಪರಿಸರ ಸ್ನೇಹಿ ವಾಟರ್ ಬಾಟಲ್, ಮ್ಯಾಜಿಕ್ ದೀಪ ಗಳಿದ್ದು, ಮ್ಯಾಜಿಕ್ ದೀಪಕ್ಕೆ 50 ಎಂಎಲ್ ಎಣ್ಣೆ ಹಾಕಿದರೆ 24 ಗಂಟೆ ಉರಿಯುತ್ತದೆ. ಹಾಗೆಯೇ ಇದಕ್ಕೆ ಸ್ವಲ್ವ ಬೇವಿನ ಎಣ್ಣೆ ಹಾಕಿದರೆ ಸೊಳ್ಳೆಗಳನ್ನು ದೂರವಿರುಸು ತ್ತದೆ. ಹಾಗೆಯೇ ಬಿದಿರಿನಿಂದ ತಯಾ ರಿಸಿದ ಅಲಂಕಾರಿಕ ಬುಟ್ಟಿಗಳು, ಬಗೆ ಬಗೆಯ ಪೇಯಿಂಟಿಂಗ್‍ಗಳು ಮತ್ತು ಕುವೆಂಪು ಜೀವನ ದರ್ಶನ ಫೋಟೊ ಗಳು ಲಭ್ಯವಿವೆ.

ಗಾರುಡಿ ಬೊಂಬೆಗೆ ಮನಸೋತ ಪ್ರೇಕ್ಷಕರು: ನಾಟಕೋತ್ಸವ ಆರಂಭಕ್ಕೂ ಮುನ್ನ ಕೊಂಬುಕಹಳೆ, ಗಾರುಡಿ ಬೊಂಬೆ, ಸೋಮ ಕುಣಿತ, ಕರಡಿ ಕುಣಿತ ಸೇರಿದಂತೆ ಮತ್ತಿತರ ಕಲಾ ತಂಡಗಳ ಕುಣಿತಕ್ಕೆ ಪ್ರೇಕ್ಷಕರು ಮನಸೋತರು.

Translate »