ಉದ್ಯಾನವನ, ಸ್ವಾಮಿ ವಿವೇಕಾನಂದ ಪತ್ರಿಮೆ ಸ್ಥಾಪನೆಗೆ ಗುದ್ದಲಿ ಪೂಜೆ
ಮೈಸೂರು

ಉದ್ಯಾನವನ, ಸ್ವಾಮಿ ವಿವೇಕಾನಂದ ಪತ್ರಿಮೆ ಸ್ಥಾಪನೆಗೆ ಗುದ್ದಲಿ ಪೂಜೆ

January 14, 2019

ಸರಗೂರು: ಪಟ್ಟಣದ ಕೆರೆಯ ಬಳಿ ನೂತನವಾಗಿ ಉದ್ಯಾನವನ ನಿರ್ಮಿಸಿ, ಅಲ್ಲಿಯೇ ಸ್ವಾಮಿ ವಿವೇಕಾನಂದರ ಪ್ರತಿಮೆ ಪ್ರತಿಷ್ಟಾಪಿಸುವ ಕಾಮಗಾರಿಗೆ ಸಂಸದ ಧ್ರುವ ನಾರಾಯಣ್ ಗುದ್ದಲಿ ಪೂಜೆಯ ನೆರ ವೇರಿಸಿದರು. ಈ ಸಂದರ್ಭದಲ್ಲಿ ಪಡವಲು ವಿರಕ್ತ ಮಠದ ಮಹದೇವಸ್ವಾಮಿ, ಶಾಸಕ ಅನಿಲ್ ಚಿಕ್ಕಮಾದು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಯೋಗೀಶ್, ಮತ್ತು ಸ್ವಾಮಿ ವಿವೇಕಾನಂದ ಸಂಸ್ಥೆಯ ಸಂಸ್ಥಾಪಕರಾದ ಡಾ.ಆರ್.ಬಾಲಸುಬ್ರಹ್ಮಣ್ಯಂ ಹಾಜರಿದ್ದರು.

ಉದ್ಯಾನ ಹಾಗೂ ವಿವೇಕಾನಂದರ ಪ್ರತಿ ಮೆಯ ಪ್ರತಿಷ್ಠಾಪನೆಗೆ ಶ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಕಾರ್ಯಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು. ಪಟ್ಟಣ ಪಂಚಾಯಿತಿ ಮತ್ತು ಸರಗೂರಿನ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ಉದ್ಯಾನವನ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದೆ. ಒಂದು ಸಂಸ್ಥೆಯಾಗಿ ಕೆರೆಗಳ ಅಭಿವೃದ್ಧಿಗೆ ಸ್ವಾಮಿ ವಿವೇಕಾನಂದ ಸಂಸ್ಥೆಯು ಶ್ರಮಿಸುತ್ತಿರುವುದು ಒಳ್ಳೆಯ ವಿಚಾರ ಎಂದು ಸಂಸದರು ನುಡಿದರು.

ಉದ್ಯಾನವನ ನಿಜಕ್ಕೂ ಪಟ್ಟಣಕ್ಕೆ ಶೋಭೆ ತರಲಿದೆ. ಈ ಕಾರ್ಯ ಆದಷ್ಟು ಬೇಗ ನೆರ ವೇರಲಿ. ಭಾರತದ ಸಂಸ್ಕøತಿಯನ್ನು ವಿಶ್ವಕ್ಕೆ ಸಾರಿದ, ಯುವ ಸಮಾಜಕ್ಕೆ ಸ್ಪೂರ್ತಿಯಾಗಿ ರುವ ದಾರ್ಶನಿಕ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಈ ಉದ್ಯಾನದಲ್ಲಿ ಸ್ಥಾಪಿಸು ತ್ತಿರುವುದರಿಂದ ನಮ್ಮ ಯುವ ಜನತೆಗೂ ಸ್ಪೂರ್ತಿ ದೊರೆಯುತ್ತದೆ ಎಂದು ವಿಶೇಷ ಅತಿಥಿ ಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರಗೂರಿನ ಪಡವಲು ವಿರಕ್ತ ಮಠದ ಮಹ ದೇವಸ್ವಾಮೀಜಿ ಅಭಿಪ್ರಾಯ ಪಟ್ಟರು.

ಸ್ವಾಮಿ ವಿವೇಕಾನಂದರ ಸಂದೇಶಗಳು ಪ್ರಸ್ತುತವಾಗಿವೆ ಎಂದು ಸ್ವಾಮಿ ವಿವೇಕಾನಂದ ಸಂಸ್ಥೆಯ ಸಂಸ್ಥಾಪಕ ಡಾ.ಆರ್. ಬಾಲ ಸುಬ್ರಹ್ಮಣ್ಯಂ ಹೇಳಿದರು. ವಿವೇಕಾನಂದರು ಕೇವಲ ಒಂದು ಧರ್ಮ, ಸಮುದಾಯ, ಜಾತಿಗೆ ಸೇರಿದವರಲ್ಲ. ಅವರು ಎಲ್ಲರಿಗೂ ಸೇರಿದವರು ಎಂಬಂತೆ ಈ ಪ್ರತಿಮೆಯೂ ಯಾರೊಬ್ಬರ ಸ್ವತ್ತಾಗಬಾರದು. ಸಾರ್ವಜನಿಕರ ಸ್ವತ್ತಾಗಬೇಕು ಎಂದರು.

ಇಂದು ಈ ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲಾ ಸಂಘ ಸಂಸ್ಥೆಗಳೂ ಹಾಗೂ ಸಮು ದಾಯದ ಎಲ್ಲಾ ಜನರು ಸೇರಿರುವುದು ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆಗೆ ಒಂದು ಅರ್ಥವನ್ನು ತಂದುಕೊಟ್ಟಿದೆ. ಉದ್ಯಾ ನವನ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದ ಸಂಸ್ಥೆಯಿಂದ 25 ಲಕ್ಷ ರೂ. ದೇಣಿಗೆಯಾಗಿ ನೀಡಲಾಗುತ್ತದೆ ಎಂದು ಪ್ರಕಟಿಸಿದರು.
ನಾವು ಇರುವ ಕಡೆಗೆ ಗುರಿ ಬರುವುದಿಲ್ಲ, ನಾವು ಗುರಿಯನ್ನು ಮುಟ್ಟುವತ್ತ ಹೊರಡ ಬೇಕು ಎಂಬ ವಿವೇಕಾನಂದರ ಮಾತಿನಂತೆ ಯುವಜನತೆ ನಡೆಯಬೇಕಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಉದ್ಯಾನವನ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕೆನರಾ ಬ್ಯಾಂಕಿನ ವಿಭಾಗೀಯ ಮುಖ್ಯಸ್ಥ ರಾದ ಮುರುಳಿಧರ್, ಉದ್ಯಾನದ ಸುತ್ತ ಸುರಕ್ಷತಾ ಬೇಲಿಯನ್ನು ಹಾಕಿಸಲು ಸಹಾಯ ಮಾಡುತ್ತೇವೆ ಎಂದು ಪ್ರಕಟಿಸಿದರು. ಸಾರ್ವಜನಿಕರಲ್ಲಿ ದೇಣಿಗೆ ನೀಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷತೆ ಜ್ಯೋತಿ ಯೋಗೀಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪಟ್ಟಣ ಪಂಚಾಯಿತಿ ಉಪಾ ಧ್ಯಕ್ಷರಾದ ಮಂಜುಳ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮನಾಯಕ, ಸದಸ್ಯರಾದ ರತ್ನ ರಂಗನಾಥ್, ಪದ್ಮಾವತಿ ಗೋಪಾಲ್, ಭಾಗ್ಯಲಕ್ಷ್ಮಿ ಬಿಲ್ಲೇಶ್, ಮಂಜುಳ ನಾಗರಾಜು, ಮಧುಸೂದನ್, ಮಹಮದ್ ಉಸ್ಮಾನ್, ನಾಗೇಂದ್ರಪ್ಪ, ನಾಗಯ್ಯ, ರವಿಶೆಟ್ಟಿ, ಸರಗೂರಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರಗೂರಿನ ಎಲ್ಲಾ ಕೋಮಿನ ಪ್ರತಿನಿಧಿಗಳು, ತಾಲ್ಲೂಕಿನ ವಿವಿಧ ಕಾಲೇಜು ವಿದ್ಯಾರ್ಥಿ ಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Translate »