ಬಿಎಸ್‍ಪಿಯಿಂದ ‘ಆರ್ಥಿಕ್ ಸಹಯೋಗ ದಿವಸ್’
ಮೈಸೂರು

ಬಿಎಸ್‍ಪಿಯಿಂದ ‘ಆರ್ಥಿಕ್ ಸಹಯೋಗ ದಿವಸ್’

January 14, 2019

ಹುಣಸೂರು: ಮಾಯಾ ವತಿಯವರ ಹುಟ್ಟುಹಬ್ಬದ ಅಂಗವಾಗಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಸಂವಿಧಾನ ತಿಳಿಸಿ ದೇಶ ಉಳಿಸಿ ಜನಜಾಗೃತಿ ಜಾಥವನ್ನು“ಆರ್ಥಿಕ್ ಸಹಯೋಗ ದಿವಸ್” ಅಗಿ ನಡೆಸಿದರು.

“ಆರ್ಥಿಕ್ ಸಹಯೋಗ ದಿವಸ್” ಅಂಗ ವಾಗಿ ಇಂದು ಹುಣಸೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಪಕ್ಷದ ಆರ್ಥಿಕ ಸಹಯೋಗಕ್ಕೆ ಸಾರ್ವಜನಿಕರಿಂದ ಒಂದು ನೋಟು ಕೊಡಿ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಡಾ.ಮಹದೇವ್ ಮಾತನಾಡಿ ನವೆಂಬರ್ 26 ಸಂವಿಧಾನ ಅರ್ಪಿಸಿದ ದಿನದಿಂದ ಜನವರಿ 26 ಸಂವಿಧಾನ ಜಾರಿಯಾದ ದಿನದವರೆಗೆ ‘ಜನರಿಗಾಗಿ ಸಂವಿಧಾನ ತಿಳಿಸಿ, ದೇಶ ಉಳಿಸಿ’ ಸಂದೇಶದ ಅಡಿಯಲ್ಲಿ ಜಿಲ್ಲೆಯಾದ್ಯಂತ ಜನಜಾಗೃತಿ ಕಾರ್ಯ ಕ್ರಮ ನಡೆಸುತ್ತಿದ್ದು, ಜ.26ರಂದು ಮೈಸೂರಿ ನಲ್ಲಿ ಸಮಾವೇಶಗೊಳ್ಳಲಿದೆ ಎಂದರು.

ಭಾರತದಲ್ಲಿ ಶೇ.1ರಷ್ಟು ಬಲಿಷ್ಠ ಜನರ ಕೈಯಲ್ಲಿ ದೇಶದ ಶೇ58.04ರಷ್ಟು ಸಂಪತ್ತು ಸಂಗ್ರಹವಾಗಿದೆ. ಕೆಳವರ್ಗದ ಶೇ.50ರಷು ಜನರ ಬಳಿ ಕೇವಲ ಶೇ.2ರಷ್ಟು ಮಾತ್ರ ಆಸ್ತಿ ಇದೆ ಎಂದು ಅಂಕಿ ಅಂಶ ನೀಡಿದರು.

ನಂತರ ಪ್ರಸನ್ನಕುಮಾರ್ ಮಾತನಾಡಿ, 40 ವರ್ಷಗಳ ಹಿಂದೆ ರಾಷ್ಟ್ರ್ರಾದ್ಯಂತ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಸಿಗುತ್ತಿತ್ತು. ಈಗ ಶಿಕ್ಷಣವನ್ನು ಖಾಸಗೀ ಕರಣ ಮಾಡಿ ಶೇ. 85ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಬಡವರು, ಕೂಲಿ ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಾಗದಂತಹ ದುಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭ ದಲ್ಲಿ ಮಂಜುನಾಥ್, ಗಿರೀಶ್, ಮೂರ್ತಿ, ಶಿವಶಂಕರ್, ನೀಲರಾಜು, ಅನಿಲ್, ದೇವೇಂದ್ರ, ಮೊಬೈಲ್ ರಮೇಶ್, ವಿಶಾಲ್ ಮತ್ತಿತರರಿದ್ದರು.

Translate »