ನಂಜನಗೂಡು ಪತ್ರಕರ್ತರ ಸಂಘದ ದಿನದರ್ಶಿ ಬಿಡುಗಡೆ
ಮೈಸೂರು

ನಂಜನಗೂಡು ಪತ್ರಕರ್ತರ ಸಂಘದ ದಿನದರ್ಶಿ ಬಿಡುಗಡೆ

January 14, 2019

ನಂಜನಗೂಡು: ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾಗಿದ್ದು, ಶಿಕ್ಷಕರು ವಿದ್ಯಾ ರ್ಥಿಗಳನ್ನು ತಿದ್ದಿತೀಡಿ ಸರಿಹಾದಿಗೆ ತರುವಂತೆ ವ್ಯವಸ್ಥೆಯಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಲು ಪತ್ರಕರ್ತರು ಮುಂದಾಗಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಆರ್.ಸೋಮಸುಂದರ್ ಹೇಳಿದರು. ಅವರು ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘ ದಿಂದ ಹೊರತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವನ್ನು ನಾಲ್ಕನೇ ಅಂಗ ಎಂದು ಪರಿಗಣಿಸಲಾಗಿದ್ದು ವ್ಯವಸ್ಥೆಯಲ್ಲಿ ಕಂಡು ಬರುವ ಲೋಪದೋಷಗಳನ್ನು ಸರಿಪಡಿ ಸಲು ಚುನಾಯಿತ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿ ಯನ್ನು ಮುಲಾಜಿಲ್ಲದೆ ಪ್ರಶ್ನಿಸುವ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಿರುವ ಮಾಧ್ಯಮದ ಪ್ರಯತ್ನಕ್ಕೆ ಎಲ್ಲರೂ ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ತಹಶೀಲ್ದಾರ್ ದಯಾ ನಂದ್ ಮಾತನಾಡಿ ಉದ್ಯೋಗ ಹೆಸರಿನಲ್ಲಿ ಪತ್ರಕರ್ತ ವೃತ್ತಿಯನ್ನು ಪರಿಗಣಿಸುವುದು ಸರಿಯಲ್ಲ ಏಕೆಂದರೆ ಪತ್ರಕರ್ತ ವೃತ್ತಿ ಹೊಟ್ಟೆಪಾಡಿಗಾಗಿ ನಿರ್ವಹಿಸುವ ಕೆಲಸ ವಲ್ಲ ಹೀಗಾಗಿ ಬದಲಾದ ಕಾಲಘಟ್ಟದಲ್ಲೂ ಸಿದ್ಧಾಂತದ ಕಟ್ಟುಪಾಡು ಮತ್ತು ಸಮಾಜ ಮುಖಿ ಚಿಂತನೆಯೊಂದಿಗೆ ಹೆಚ್ಚಿನ ಸಂಖ್ಯೆಯ ಜನರು ಪತ್ರಕರ್ತ ವೃತ್ತಿಯನ್ನ ವಲಂಭಿಸುವ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ಸಮಾಜಸೇವೆಯ ರೂಪದಲ್ಲಿ ಕೆಲಸ ನಿರ್ವಹಸಿದ್ದಾರೆ. ಆದರೂ ಸಹಾ ಅಧ್ಯಯನ ಶೀಲತೆಯನ್ನು ಹೊಂದಿರದ ಮತ್ತು ನಮ್ಮ ಸುತ್ತಲಿನ ವಿದ್ಯಮಾನಗಳ ಅರಿವಿಲ್ಲದ ಪತ್ರಕರ್ತ ಸವಕಲು ನಾಣ್ಯವಾಗುತ್ತಾನೆ.

ಸರಕಾರದ ಸವಲತ್ತುಗಳು ಜನರಿಗೆ ತಲುಪಬೇಕಾದಲ್ಲಿ ಹಾಗೂ ನಾನಾ ಯೋಜನೆಗಳ ಪರಿ ಣಾಮಕಾರಿ ಅನುಷ್ಟಾನಕ್ಕಾಗಿ ಮಾಧ್ಯಮ ಗಳ ಕಣ್ಗಾವಲು ಅತ್ಯಾವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಪತ್ರಕರ್ತರು ವೃತ್ತಿಪರ ಅಧ್ಯಯನ ಶೀಲತೆಯನ್ನು ರೂಢಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೇವಣ್ಣ, ತಾಲೂಕು ಪತ್ರ ಕರ್ತರ ಸಂಘದ ಅಧ್ಯಕ್ಷ ಮೋಹನ್, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಟಿ.ಕೋಡಿನರ ಸೀಪುರ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಡಳಿತ ಮಂಡಳಿ ನಿರ್ದೇಶಕ ನಂಜನಗೂಡು ಮಧು, ಉಪಾಧ್ಯಕ್ಷ ಪಿ.ಮಹ ದೇವಪ್ರಸಾದ್, ಖಚಾಂಚಿ ಜಿ.ಪ್ರಸಾದ್, ಕಾರ್ಯದರ್ಶಿ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.

Translate »