ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ  ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ತಹಸೀಲ್ದಾರ್
ಮೈಸೂರು

ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ತಹಸೀಲ್ದಾರ್

January 14, 2019

ಪಿರಿಯಾಪಟ್ಟಣ: ಕಳೆದ ಆರು ತಿಂಗಳಿಂದ ಪತಿ ನಾಪತ್ತೆ ಯಾದ ಕಾರಣ ಕಂಗಾಲಾಗಿ ದಯಾಮರಣ ಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ತಾಲೂಕಿನ ರಾವಂದೂರು ಮಹಿಳೆಯ ಮನೆಗೆ ಇಂದು ತಾಲೂಕು ತಹಸೀಲ್ದಾರ್ ಕುಂಜಿ ಮಹಮ್ಮದ್ ಭೇಟಿ ನೀಡಿ ಧೈರ್ಯ ತುಂಬಿದರು.

ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ನನ್ನ ಪತಿಗೆ ವಂಚನೆ ಮಾಡಿರುವ ವ್ಯಕ್ತಿಯ ನಡುವಿನ ಹೊಂದಾಣಿಕೆಯೇ ನನ್ನ ಮತ್ತು ನನ್ನ ಮಕ್ಕಳ ದುಸ್ಥಿತಿಗೆ ಕಾರಣ ಎಂದು ತಹಸೀಲ್ದಾರ್ ಮುಂದೆ ನೊಂದ ಮಹಿಳೆ ಸುನೀತ ಕಣ್ಣೀರಿಟ್ಟರು.

ತಾಲೂಕಿನ ರಾವಂದೂರು ಗ್ರಾಮದ ನಾಪತ್ತೆಯಾಗಿರುವ ಸುಖಲಾಲ್ ಪತ್ನಿ ಸುನೀತ ಮಕ್ಕಳೊಂದಿಗೆ ರಾಷ್ಟ್ರಪತಿಗೆ ದಯಾ ಮರಣ ಕೋರಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿದ ತಹಸೀಲ್ದಾರ್ ಮುಂದೆ ಆಕೆ ತನ್ನ ಅಳಲು ತೋಡಿಕೊಂಡಳು.

ಭೋಗನಹಳ್ಳಿಯ ವ್ಯಕ್ತಿಯೋರ್ವ ನನ್ನ ಪತಿ ಸುಖಲಾಲ್‍ಗೆ ಮೋಸ ಮಾಡಿ ಮನೆ ಸೇರಿದಂತೆ ಇತರ ಆಸ್ತಿಯನ್ನು ಖರೀದಿಸಿ ಹಣ ನೀಡದೆ ವಂಚನೆ ಮಾಡಿದ್ದು, ಪತಿ ಸುಖಲಾಲ್‍ನನ್ನು ಅವರೇ ಕೊಲೆ ಮಾಡಿ ದ್ದಾರೆ ಎಂಬ ಸಂಶಯ ವ್ಯಕ್ತಪಡಿಸಿದರು.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೂ ಕೂಡ ಆ ವ್ಯಕ್ತಿಯ ಆಮಿಷಕ್ಕೆ ಒಳಗಾದ ಪೊಲೀಸ್ ಅಧಿ ಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ, ಇದರಿಂದ ನನ್ನ ಕುಟುಂಬ ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣ ವಾಗಿದೆ, ಆದ್ದರಿಂದ ದಯಾಮರಣ ಕೇಳಿ ದ್ದೇನೆ ಎಂದು ಸುನೀತ ತಹಸೀಲ್ದಾರ್‍ಗೆ ವಿವರಿಸಿದರು.
ತಹಸೀಲ್ದಾರ್ ಕುಂಜಿ ಮಹಮದ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಹೋರಾಟ ಮಾಡುವ, ಸ್ವತಂತ್ರವಾಗಿ ಬದುಕುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ, ಅದರಂತೆ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ರೀತಿಯ ನಿರ್ಧಾರ ಗಳು ಸಂವಿಧಾನ ಬಾಹಿರ. ಆದ್ದರಿಂದ ಕಾನೂನಿನ ಪ್ರಕಾರ ನಿಮಗೆ ನೆರವು ನೀಡಲು ಸಿದ್ದರಿದ್ದೇವೆ. ಅಲ್ಲದೆ ಪೊಲೀಸ ರಿಂದ ತನಿಖೆ ವಿಳಂಬವಾಗುತ್ತಿದ್ದರೆ ಅಥವಾ ಅನ್ಯಾಯವಾಗಿದ್ದರೆ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಿ ನಿಮಗೆ ನ್ಯಾಯ ದೊರಕಿಸಿಕೊಡಲು ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಗ್ರಾಮದಲ್ಲಿ ನಿಮ್ಮ ವಿರುದ್ದ ದಬ್ಬಾಳಿಕೆ ಅಥವಾ ಮನೆ ಖಾಲಿ ಮಾಡಲು ಕಿರುಕುಳ ನೀಡಲು ಯಾರಾದರೂ ಮುಂದಾದಲ್ಲಿ ನಮ್ಮ ಗಮನಕ್ಕೆ ತಂದ ಕೂಡಲೇ ಕಾನೂನು ಕ್ರಮ ಕೈಗೊಂಡು ಸೂಕ್ತ ರಕ್ಷಣೆ ಒದಗಿಸಲು ಬದ್ದರಿರುವುದಾಗಿ ತಹಸೀಲ್ದಾರ್ ತಿಳಿಸಿ ದರು. ಅಷ್ಟೇ ಅಲ್ಲದೆ ಆಹಾರದ ಕೊರತೆ, ಅನಾರೋಗ್ಯದ ಚಿಕಿತ್ಸೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಆಯಾ ಇಲಾಖೆಯಿಂದ ನೆರವು ನೀಡಲು ಅವ ಕಾಶವಿದ್ದು, ಇದನ್ನು ದೊರಕಿಸಿಕೊಡು ವುದಾಗಿ ಕುಂಜಿ ಮಹಮದ್ ಭರವಸೆ ನೀಡಿದರು.

ಮಾಧ್ಯಮಗಳಲ್ಲಿ ನೊಂದ ಮಹಿಳೆಯ ದಯಾಮರಣ ಸುದ್ದಿ ಪ್ರಸಾರವಾಗುತ್ತಿ ದ್ದಂತೆ ಆಗಮಿಸಿದ ಸಮಾಜ ಸೇವಕ ಯಜಮಾನ್ ಪಿ.ಕೆ.ನಾಗಪ್ಪ ಅವರು ಸುನೀತ ಮತ್ತು ಮಕ್ಕಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಸುನೀತರ ಕುಟುಂಬಕ್ಕೆ ಆಗಿರುವ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸಾರ್ವಜನಿಕ ವಾಗಿ ಯಾವುದೇ ಹೋರಾಟಕ್ಕೂ ಕೂಡ ಸಹಕಾರ ನೀಡುವುದಾಗಿ ಜೈನ ಸಮು ದಾಯದ ಮುಖಂಡ ನೇಮಿಚಂದ್ ಜೈನ್ ಮತ್ತು ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ಕಾಂತರಾಜು ಭರವಸೆ ನೀಡಿದರಲ್ಲದೆ ನೊಂದ ಮಹಿಳೆಗೆ ಕಿರು ಕುಳ ನೀಡುತ್ತಿರುವವನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಗಿರವಿ ಹೆಸರಿ ನಲ್ಲಿ ನಡೆಯುತ್ತಿರುವ ಮರುಗಿರವಿಯ ಅಕ್ರಮದ ಬಗ್ಗೆ ಹಾಗೂ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಉನ್ನತ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆ ಯಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಸಣ್ಣರಾಮಪ್ಪ, ರಾಜಸ್ವ ನಿರೀಕ್ಷಕ ಮಹೇಶ್, ಅಂಗನವಾಡಿ ಶಿಕ್ಷಕಿ ರಾಜಮಣಿ, ಮುಖಂಡರಾದ ಬೋರಲಾಲ್, ಪ್ರಕಾಶ್, ಹುಕುಂಸಿಂಗ್, ಭೋಜರಾಜು, ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.

Translate »