ನಗರಪಾಲಿಕೆ ಯಡವಟ್ಟು:  ಧಾರವಾಡದ ಮಹಿಳೆಗೆ ಕಿರಿಕಿರಿ!!
ಮೈಸೂರು

ನಗರಪಾಲಿಕೆ ಯಡವಟ್ಟು:  ಧಾರವಾಡದ ಮಹಿಳೆಗೆ ಕಿರಿಕಿರಿ!!

August 31, 2018

ಮೈಸೂರು:  ಮೈಸೂರು ನಗರಪಾಲಿಕೆ ಚುನಾವಣೆ, ಉತ್ತರ ಕರ್ನಾಟಕದ ಮಹಿಳೆ ಯೊಬ್ಬರ ನೆಮ್ಮದಿ ಕೆಡಿಸಿದೆ. ಹೌದು, ನಗರ ಪಾಲಿಕೆ ಮಾಡಿರುವ ಸಣ್ಣ ರಾಂಗ್(ತಪ್ಪು)ನಿಂದ ಧಾರ ವಾಡ ಮೂಲದ ಮಹಿಳೆಯೊಬ್ಬರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಗರಪಾಲಿಕೆ ಚುನಾವಣೆ ಹಿನ್ನೆಲೆ ಯಲ್ಲಿ 15 ದಿನಗಳ ಹಿಂದೆ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಅವರ ಹೆಸರು, ಅಧಿಕಾರ ವ್ಯಾಪ್ತಿ, ಕಚೇರಿ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ಪ್ರಕಟಿಸಲಾಗಿತ್ತು. ನೀತಿ ಸಂಹಿತೆ ಉಲ್ಲಂಘನೆ ದೂರುಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ತಿಳಿಸುವಂತೆ ಸೂಚಿಸಲಾಗಿತ್ತು. ಆದರೆ 48, 60, 63, 64 ಹಾಗೂ 65ನೇ ವಾರ್ಡ್ ವ್ಯಾಪ್ತಿಯ ಚುನಾವಣಾಧಿಕಾರಿ ಪಿ.ಶಿವಣ್ಣ ಅವರ ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ನೀಡಲಾಗಿದೆ. ಪಾಲಿಕೆ ಪ್ರಕಟಣೆಯಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆ ಧಾರವಾಡ ಮೂಲದ ಮಹಿಳೆಯೊಬ್ಬರದ್ದು. ಅನೇಕ ಸಾರ್ವಜನಿಕರು, ಮಾಧ್ಯಮದವರು ಆ ನಂಬರ್‍ಗೆ ಕರೆ ಮಾಡಿ, ಶಿವಣ್ಣ ಅವರನ್ನು ಕೇಳಿದ್ದಾರೆ. ಕರೆ ಮಾಡಿದವರಿಗೆಲ್ಲಾ ರಾಂಗ್ ನಂಬರ್ ಎಂದು ಹೇಳಿ ಹೇಳಿ ಬೇಸತ್ತು ಹೋಗಿದ್ದಾರೆ. ಚುನಾವಣಾಧಿಕಾರಿ ಪಿ.ಶಿವಣ್ಣ ಅವರ ನಿಖರ ಮೊ. ಸಂಖ್ಯೆ 9448439392.

Translate »