ಮೈಸೂರು, ಮಾ.4-ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾ ಲಯವು ದಶಮಾನೋತ್ಸವದ ಸಂಭ್ರಮಾ ಚರಣೆಯನ್ನು ಸಂಗೀತ, ನೃತ್ಯ, ನಾಟಕ ಹೀಗೆ ನಾನಾ ಪ್ರದರ್ಶಕ ಕಲೆಗಳ ಉತ್ಸವ ಗಳÀ ಮೂಲಕ ಆಚರಿಸುತ್ತಿದೆ.
ಇದೇ ಸಂದರ್ಭದಲ್ಲಿ ಪಂ. ಪುಟ್ಟರಾಜು ಗವಾಯಿಗಳು ಹಾಗೂ ಗಂಗೂಬಾಯಿ ಹಾನಗಲ್ ಅವರ ಜನ್ಮೋತ್ಸವದ ಪ್ರಯುಕ್ತ ಮಂಗಳವಾರ ಆರಂಭವಾದ ಕಲಾ ಪ್ರತಿ ಭೋತ್ಸವದಲ್ಲಿ ವಿವಿಧ ವಿಶ್ವ ವಿದ್ಯಾಲಯ, ಕಾಲೇಜುಗಳಿಂದ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ ಸಾಂಸ್ಕøತಿಕ ಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಇಂದು ವಿಶ್ವವಿದ್ಯಾಲಯದ ಆವರಣ ದಲ್ಲಿ ಸಿದ್ಧಗೊಳಿಸಿದ್ದ ವಿವಿಧ ವೇದಿಕೆ ಗಳಲ್ಲಿ ಭರತನಾಟ್ಯ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಕರ್ನಾಟಕ ಶಾಸ್ತ್ರೀಯ ಸಂಗೀತ, ತಬಲ, ನಾಟಕಗಳಿಗೆ ಸಂಬಂಧಿಸಿದಂತೆ ಏಕವ್ಯಕ್ತಿ ಕಲಾ ಸ್ಪರ್ಧೆಗಳ ಪ್ರದರ್ಶನವನ್ನು ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯದ ನಾನಾ ಕಡೆಗಳಿಂದ ಹಿರಿಯ ಕಲಾವಿ ದರೂ ತೀರ್ಪುಗಾರರಾಗಿ ಆಗಮಿಸಿದ್ದರು. ಮೈಸೂರಿನ ಅನೇಕ ಕಲಾಸಕ್ತರೂ ಕಾರ್ಯ ಕ್ರಮ ವೀಕ್ಷಣೆಯಲ್ಲಿ ಪಾಲ್ಗೊಂಡು ರಸಾನುಭವ ಪಡೆದರು.
ಈ ಕಲಾಪ್ರತಿಭೋತ್ಸವದ ಕಡೆಯ ದಿನವಾದ ನಾಳೆ ಸಮೂಹ ಸ್ಪರ್ಧೆಗಳು ನಡೆಯಲಿದ್ದು ಜೊತೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮವು ನಡೆಯ ಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರರಾದ ಡಾ. ಹಂಸಲೇಖ, ನಟರಾದ ಬಿ. ಸುರೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.