ಮೈಸೂರು, ಬೆಂಗಳೂರು, ಕರಾವಳಿ ಉಗ್ರರ ಸುರಕ್ಷಿತ ತಾಣ
ಮೈಸೂರು

ಮೈಸೂರು, ಬೆಂಗಳೂರು, ಕರಾವಳಿ ಉಗ್ರರ ಸುರಕ್ಷಿತ ತಾಣ

October 19, 2019

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು, ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಪ್ರದೇಶ ಉಗ್ರವಾದಿಗಳ ಸುರಕ್ಷಿತ ಅಡಗುತಾಣವಾಗಿದ್ದು, ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ರಾಜ್ಯ ಸರ್ಕಾರಕ್ಕೆ ನೀಡಿದ ಮಾಹಿತಿ ಆಧರಿಸಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಎನ್‍ಐಎ ಮಾಹಿತಿಯನ್ನು ಗಂಭೀರ ವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಭಯೋತ್ಪಾದನಾ ನಿಗ್ರಹ ದಳ (ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್-ಎಟಿಎಸ್) ರಚನೆಗೆ ನಿರ್ಧರಿಸಿದೆ. ಕರ್ನಾಟಕಕ್ಕೆ ಭಯೋತ್ಪಾ ದಕರು ನುಸುಳಿದ್ದಾರೆ ಎಂಬ ಎನ್‍ಐಎ ಮಾಹಿತಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಖಚಿತಪಡಿಸಿದ್ದಾರೆ. ಇಂದು ಮೈಸೂರಿ ನಲ್ಲಿ ಸುದ್ದಿಗಾರ ರೊಂದಿಗೆ ಮಾತ ನಾಡಿದ ಅವರು, ಬೆಂಗಳೂರು, ಮೈಸೂರು ಮತ್ತು ಕರಾವಳಿ ಭಾಗಗ ಳಲ್ಲಿ ಕಟ್ಟೆಚ್ಚರ ವಹಿ ಸುವಂತೆ ಎನ್‍ಐಎ ತಿಳಿಸಿರುವ ಹಿನ್ನೆಲೆ ಯಲ್ಲಿ ಈ ಪ್ರದೇಶಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ ಪಾಕಿಸ್ತಾನ ಪ್ರಾಯೋ ಜಿತ ಉಗ್ರವಾದಿಗಳು ಭಾರತದಲ್ಲಿ ದುಷ್ಕøತ್ಯ ವೆಸಗಲು ವ್ಯವಸ್ಥಿತ ಸಂಚು ರೂಪಿಸಿ ದ್ದಾರೆ. ಈಗಾಗಲೇ ಭಾರತಕ್ಕೆ ನೂರಾರು ಭಯೋತ್ಪಾದಕರು ನುಸುಳಿದ್ದಾರೆ ಎಂದು ಎನ್‍ಐಎ ಮಾಹಿತಿ ನೀಡಿದೆ. ಕರ್ನಾಟಕ ವನ್ನು ಸ್ಲೀಪರ್‍ಸೆಲ್ (ಕಾರ್ಯತಂತ್ರ ರೂಪಿಸುವುದಕ್ಕಷ್ಟೇ ನೆಲೆ ಕಂಡುಕೊಳ್ಳು ವುದು) ಆಗಿ ಉಗ್ರವಾದಿಗಳು ಬಳಸಿಕೊಂಡಿ ರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘ ಟನೆಯು ಈಗಾಗಲೇ ದಕ್ಷಿಣ ಕನ್ನಡ ಬೆಂಗ ಳೂರು, ಮೈಸೂರು ಹಾಗೂ ಚಿಕ್ಕಮಗ ಳೂರು ಭಾಗದಲ್ಲಿ ಸುರಕ್ಷಿತ ನೆಲೆಯನ್ನು ಕಂಡುಕೊಂಡಿದೆ. ಅಲ್ಲದೇ ರಾಜ್ಯದ ಇತರೆಡೆಗೂ ತನ್ನ
ಜಾಲವನ್ನು ವಿಸ್ತರಿಸಲು ಜೆಎಂಬಿ ಪ್ರಯತ್ನಿಸುತ್ತಿದೆ ಎಂಬ ಮಾಹಿತಿಯನ್ನು ಎನ್‍ಐಎ ರಾಜ್ಯ ಗೃಹ ಇಲಾಖೆಗೆ ನೀಡಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಅಕ್ರಮ ವಲಸಿಗರು ನೆಲೆಸಿದ್ದಾರೆ. ಅವರ ಸಹಕಾರದಿಂದ ಜೆಎಂಬಿ ಉಗ್ರ ಸಂಘಟನೆಯೂ ಕರ್ನಾಟಕದಲ್ಲಿ ನೆಲೆಯೂರಿದೆ. ಸುಮಾರು 125 ಜೆಎಂಬಿ ಉಗ್ರರು ರಾಜ್ಯದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಅವರ ನೆಲೆಗಳ ಬಗ್ಗೆ ರಹಸ್ಯ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ.

ಉಗ್ರರು ನಿಷೇಧಿತ ಸ್ಯಾಟಲೈಟ್ ಫೋನ್‍ಗಳನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿಯನ್ನು ಈಗಾಗಲೇ ಎನ್‍ಐಎ ಸಂಗ್ರಹಿಸಿದೆ. ಸ್ಯಾಟಲೈಟ್ ಫೋನ್‍ಗಳ ಕಾರ್ಯ ನಿರ್ವಹಣೆ ಪತ್ತೆ ಹಚ್ಚಲು ಇಸ್ರೋ ಸ್ಥಾಪಿಸಿರುವ ಲೊಕೇಶನ್ ಬೇಸ್ ಸಿಸ್ಟಮ್ (ಎಲ್‍ಬಿಎಸ್)ನಿಂದ ಎನ್‍ಐಎಗೆ ಉಗ್ರವಾದಿ ಗಳ ಚಲನವಲನದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಉಗ್ರವಾದಿಗಳು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಿಂದ 7 ಕಿ.ಮೀ. ದೂರದ ಕಿಕ್ಕೇರಿ ಬಳಿ ಹಾಗೂ ಹೊಳೆನರಸೀಪುರದಿಂದ ದಕ್ಷಿಣಪೂರ್ವಾಭಿಮುಖವಾಗಿ 15 ಕಿ.ಮೀ. ಅಂತರದಲ್ಲಿ ಸ್ಯಾಟಲೈಟ್ ಫೋನ್ ಬಳಸಿರುವುದು ಈಗಾಗಲೇ ಪತ್ತೆಯಾಗಿದೆ. ಕಳೆದ ಸೆ.7 ರಂದು ಬೆಳಿಗ್ಗೆ 10.38ರಲ್ಲಿ ಉಡುಪಿಯಿಂದ 88 ಕಿ.ಮೀ. ಅಂತರದ ಸಮುದ್ರದಲ್ಲಿ ಹಾಗೂ ಅದೇ ದಿನ ಸಂಜೆ 5 ಗಂಟೆಗೆ ಕಾರವಾರದ ಸಮುದ್ರ ತೀರದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ. ಸೆ.9ರಂದು ಭಟ್ಕಳದಲ್ಲಿ ಹಾಗೂ ಸೆ.10ರಂದು ಮಂಗಳೂರಿನಲ್ಲಿ ಸ್ಯಾಟಲೈಟ್ ಫೋನ್‍ಗಳು ಕಾರ್ಯನಿರ್ವಹಿಸುವುದನ್ನು ಇಸ್ರೋದ ಎಲ್‍ಬಿಎಸ್ ಪತ್ತೆ ಹಚ್ಚಿದೆ.

ಈ ಹಿನ್ನೆಲೆಯಲ್ಲಿ ಕರಾವಳಿ ಭಾಗ ಹಾಗೂ ಮೈಸೂರು ಮತ್ತು ಬೆಂಗಳೂರಿನ ನಡುವೆ ಉಗ್ರವಾದಿಗಳು ನೆಲೆಯೂರಿರಬಹುದು ಎಂದು ಅಂದಾಜಿಸಲಾಗಿದೆ. ಮೈಸೂರು ಮತ್ತು ಬೆಂಗಳೂರು ಮಧ್ಯ ಉಗ್ರರು ನೆಲೆಯೂರಿರಬಹುದು ಎಂಬುದಕ್ಕೆ ಮಂಡ್ಯ ಜಿಲ್ಲೆಯ ಕಿಕ್ಕೇರಿ ಬಳಿ ಸ್ಯಾಟಲೈಟ್ ಫೋನ್ ಕಾರ್ಯನಿರ್ವಹಿಸಿರುವುದು ಪುಷ್ಠಿ ನೀಡುತ್ತದೆ. ಈ ಉಗ್ರರು ಮೈಸೂರು ಅಥವಾ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ತಮ್ಮ ಅಡಗುತಾಣ ಪತ್ತೆಯಾಗದಿರಲಿ ಎಂಬ ಕಾರಣಕ್ಕಾಗಿ ಮಂಡ್ಯ ಜಿಲ್ಲೆಯ ಕಿಕ್ಕೇರಿ ಭಾಗದಲ್ಲಿ ಸಂಚರಿಸುತ್ತಾ ಸ್ಯಾಟಲೈಟ್ ಫೋನ್ ಬಳಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಈ ಭಾಗದಿಂದ ಕರಾವಳಿ ಭಾಗಕ್ಕೆ ಸಂಚರಿಸುವ ವೇಳೆ ಹೊಳೆನರಸೀಪುರದಿಂದ ದಕ್ಷಿಣಪೂರ್ವಾಭಿಮುಖವಾಗಿ 15 ಕಿ.ಮೀ. ಅಂತರದಲ್ಲಿ ಸ್ಯಾಟಲೈಟ್ ಫೋನನ್ನು ಉಗ್ರರು ಬಳಸಿರಬಹುದು ಎಂದು ಹೇಳಲಾಗಿದೆ. ರಾಜ್ಯದಲ್ಲಿ ಅಡಗಿರುವ ಉಗ್ರರು ಕರ್ನಾಟಕವನ್ನು ಕೇವಲ ಸ್ಲೀಪರ್ ಸೆಲ್ ಆಗಿ ಬಳಸುತ್ತಿದ್ದಾರೆಯೇ ಅಥವಾ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ದುಷ್ಕøತ್ಯ ವೆಸಗಲು ಸಂಚು ರೂಪಿಸುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಎನ್‍ಐಎ ಮಾಹಿತಿ ಕಲೆ ಹಾಕುತ್ತಿದೆ. ಅದೇ ರೀತಿ ರಾಜ್ಯದ ಗುಪ್ತಚರ ಇಲಾಖೆಯು ಸಹ ಕಾರ್ಯಪ್ರವೃತ್ತವಾಗಿದೆ. ಅಲ್ಲದೇ, ಸೈಬರ್ ಕ್ರೈಂ ವಿಭಾಗದಲ್ಲಿ ನಿಪುಣರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ ಉಗ್ರವಾದಿಗಳ ಚಲನವಲನದ ಬಗ್ಗೆ ವೈಜ್ಞಾನಿಕ ತನಿಖೆಯನ್ನು ಕೈಗೊಂಡಿದ್ದಾರೆ.

Translate »