ಜ.23ರಂದು ಬಹು ಬೇಡಿಕೆಯ ಮೈಸೂರು ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ
ಮೈಸೂರು

ಜ.23ರಂದು ಬಹು ಬೇಡಿಕೆಯ ಮೈಸೂರು ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ

January 21, 2020

ಮೈಸೂರು, ಜ. 20(ಆರ್‍ಕೆ)- ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ಮೇಟಗಳ್ಳಿ ಬಳಿ ಸಾಂಕ್ರಾ ಮಿಕ ರೋಗಗಳ ಆಸ್ಪತ್ರೆ ಆವರಣದಲ್ಲಿ ನಿರ್ಮಿ ಸಿರುವ ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ ಜನವರಿ 23ರಂದು ಉದ್ಘಾಟನೆಗೊಳ್ಳುತ್ತಿದೆ.

ಆಸ್ಪತ್ರೆ ಕಟ್ಟಡದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, 75.32 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 250 ಹಾಸಿಗೆ ಸಾಮ ಥ್ರ್ಯದ ಮೈಸೂರು ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು ಆರೋಗ್ಯ ಸಚಿವ ಶ್ರೀರಾಮುಲು, ಜ.23ರಂದು ಸಂಜೆ 4 ಗಂಟೆಗೆ ಉದ್ಘಾಟಿಸುವರು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್‍ಸಿಂಹ, ಮೇಯರ್ ತಸ್ನೀಂ, ಶಾಸಕರಾದ ಎಸ್.ಎ.ರಾಮದಾಸ್, ತನ್ವೀರ್‍ಸೇಠ್, ಜಿ.ಟಿ.ದೇವೇಗೌಡ ಸೇರಿದಂತೆ ಜನಪ್ರತಿನಿಧಿಗಳು ಆಸ್ಪತ್ರೆ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ 2017ರ ಜೂನ್ 29ರಂದು ಪ್ರಾರಂಭಿಸಿದ್ದ ಜಿಲ್ಲಾ ಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಈಗ ಪೂರ್ಣ ಗೊಂಡಿದ್ದು, ಬೇಸ್‍ಮೆಂಟ್, ನೆಲಮಹಡಿ, ಮೊದ ಲನೆ ಮಹಡಿ, 2ನೇ ಮಹಡಿ, 3ನೇ ಮಹಡಿ ಸೇರಿ ಒಟ್ಟು 20,969.30 ಚದರ ಮೀಟರ್ ವಿಸ್ತೀರ್ಣ ಹೊಂದಿದೆ ಎಂದು ನಾಗೇಂದ್ರ ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗ, ಹೊರ ರೋಗಿಗಳ ಚಿಕಿತ್ಸಾ ವಿಭಾಗ, ಮೂತ್ರ ಶಾಸ್ತ್ರ, ನರ ವಿಜ್ಞಾನ, ಕಿವಿ, ಮೂಗು, ಗಂಟಲು ವಿಭಾಗ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕೊಠಡಿ, ತೀವ್ರ ನಿಗಾ ಘಟಕ, ವಿಶೇಷ ವಾರ್ಡ್, ಸಾಮಾನ್ಯ ವಾರ್ಡ್, ಡಯಾಲಿಸಿಸ್ ಹಾಗೂ ದಂತ ವಿಭಾಗಗಳಲ್ಲದೆ, ರಕ್ತ ನಿಧಿ ಕೇಂದ್ರ, ಮೇಜರ್ ಓಟಿ, ಪ್ರಯೋಗಾಲಯ, ಅರೆ ವಿಶೇಷ ವಾರ್ಡ್, ಸುಟ್ಟ ಗಾಯದ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾಲಯಗಳು ಸೇರಿದಂತೆ ಹಲವು ಸೌಲಭ್ಯಗಳು ಬರುತ್ತಿವೆ ಎಂದು ವಿವರಿಸಿದರು.

3 ಬೋರ್‍ವೆಲ್‍ಗಳು, 3.50 ಲಕ್ಷ ಲೀಟರ್ ಸಾಮಥ್ರ್ಯದ ನೀರು ಸರಬರಾಜು ಟ್ಯಾಂಕ್, 4 ಲಿಫ್ಟ್ ಗಳು, ಕೇಂದ್ರೀಕೃತ ಆಕ್ಸಿಜನ್ ಪೈಪ್‍ಲೈನ್, ಅಗ್ನಿಶಾಮಕ ಉಪಕರಣಗಳು, ಎಸ್‍ಟಿಪಿ, ಉದ್ಯಾನವನ, 100 ಕಾರು ಹಾಗೂ 500 ದ್ವಿಚಕ್ರವಾಹನ ನಿಲುಗಡೆಗೆ ಸ್ಥಳಾವಕಾಶ, ಕಾಂಪೌಂಡ್, ಸೋಲಾರ್ ವಾಟರ್ ಹೀಟರ್‍ಗಳನ್ನು ನೂತನ ಕಟ್ಟಡದಲ್ಲಿ ಒದಗಿಸಲಾಗಿದೆ.

57 ಮಂದಿ ವೈದ್ಯರು, 15 ಮಂದಿ ಆಡಳಿತ ಸಿಬ್ಬಂದಿ, 26 ಮಂದಿ ಓಟಿ ಸಿಬ್ಬಂದಿ, 9 ರಕ್ತ ನಿಧಿ ಸಿಬ್ಬಂದಿ, 200 ಮಂದಿ ಅರೆ ವೈದ್ಯಕೀಯ ಸಿಬ್ಬಂದಿ ಸೇರಿ ಜಿಲ್ಲಾ ಆಸ್ಪ ತ್ರೆಗೆ ಒಟ್ಟು 307 ಸಿಬ್ಬಂದಿಯ ಅಗತ್ಯವಿದ್ದು, 2 ತಿಂಗ ಳೊಳಗಾಗಿ ಸರ್ಕಾರ ನೇಮಕಾತಿ ಮಾಡಲಿದೆ ಎಂದರು. ಒಂಟಿಕೊಪ್ಪಲಿನ ಶ್ರೀ ವೆಂಕಟರಮಣಸ್ವಾಮಿ ದೇವ ಸ್ಥಾನದಿಂದ ರಾಯಲ್‍ಇನ್ ಜಂಕ್ಷನ್‍ವರೆಗೆ 9 ಆಸ್ಪತ್ರೆ ಗಳು ಬಂದಿರುವುದರಿಂದ ಕೆಆರ್‍ಎಸ್ ರಸ್ತೆಯು `ಹೆಲ್ತ್ ಹಬ್’ ಆಗಿ ಪರಿವರ್ತನೆಯಾಗುತ್ತಿರುವ ಕಾರಣ, ಸುತ್ತಲಿನ ಎಲ್ಲಾ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಆಂಬುಲೆನ್ಸ್‍ಗಳು, ರೋಗಿಗಳನ್ನು ಕರೆ ತರುವ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿ ಕೊಡಲಾಗುವುದು ಎಂದು ನಾಗೇಂದ್ರ ನುಡಿದರು.

ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸುತ್ತಿ ರುವ ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸಲಕರಣೆ ಹಾಗೂ ಸಿಬ್ಬಂದಿ ಗಳನ್ನು ಒದಗಿಸಿ ಸಾರ್ವಜನಿಕರ ಸೇವೆಗೆ ಅರ್ಪಿಸ ಲಾಗುವುದು ಎಂದು ತಿಳಿಸಿದರು.

ಕಾರ್ಪೋರೇಟರ್‍ಗಳಾದ ಸುಬ್ಬಯ್ಯ, ವೇದಾ ವತಿ, ರಂಗಸ್ವಾಮಿ, ಪ್ರಮೀಳಾ ಭರತ್, ಮಾಜಿ ಕಾರ್ಪೊರೇಟರ್ ಆರ್.ದೇವರಾಜು, ಪ್ರಭಾರ ಜಿಲ್ಲಾ ಸರ್ಜನ್ ಡಾ.ಲಕ್ಷ್ಮಣ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ವೆಂಕಟೇಶ್, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »