ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕ್ಯಾಲೆಂಡರ್, ಡೈರಿ ಬಿಡುಗಡೆ
ಮೈಸೂರು

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕ್ಯಾಲೆಂಡರ್, ಡೈರಿ ಬಿಡುಗಡೆ

January 10, 2019

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2019ನೇ ಸಾಲಿನ ಡೈರಿ ಹಾಗೂ ಕ್ಯಾಲೆಂಡರ್ ಅನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.

ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಸಂಘದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭ ದಲ್ಲಿ ಸಿದ್ಧಾರ್ಥನಗರದ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ನೂತನ ವರ್ಷದ ದಿನಚರಿ ಪುಸ್ತಕವನ್ನು (ಡೈರಿ) ಉದ್ಯಮಿ ತರುಣ್‍ಗಿರಿ ಹಾಗೂ ಕ್ಯಾಲೆಂಡರ್ (ದಿನ ದರ್ಶಿಕೆ) ಅನ್ನು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ರಾಜೀವ್ ಬಿಡು ಗಡೆ ಮಾಡಿದರು.

ಬಳಿಕ ಮಾತನಾಡಿದ ತರುಣ್‍ಗಿರಿ, ಮೈಸೂರು ನಗರ ಸ್ವಚ್ಛತೆಗೆ ದೇಶದಲ್ಲೇ ಹೆಸರಾಗಿದೆ. ಇದು ಮೈಸೂರಿಗರಾದ ನಮ್ಮೆಲ್ಲರ ಹೆಮ್ಮೆಯಾಗಿದ್ದು, ನಗರದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಹೊಣೆ ಮೈಸೂರಿನ ನಾಗರಿಕರ ಮೇಲಿದೆ ಎಂದು ನುಡಿದರು.

ಹೆಚ್.ವಿ.ರಾಜೀವ್ ಮಾತನಾಡಿ, ರಾಜ್ಯದ ಮಾಧ್ಯಮ ಕ್ಷೇತ್ರದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ತನ್ನ ವಿಶಿ ಷ್ಟತೆ ಹಾಗೂ ವಿಭಿನ್ನತೆ ಮೂಲಕ ಮಾದರಿ ಸಂಘಟನೆಯಾಗಿ ಹೊರ ಹೊಮ್ಮಿದೆ. ರಾಜ್ಯದ ಉದ್ದಗಲಕ್ಕೂ ಆಗಾಗ್ಗೆ ಪ್ರವಾಸ ಕೈಗೊಂಡ ಸಂದರ್ಭ ದಲ್ಲಿ ಮೈಸೂರು ಮಾಧ್ಯಮ ವಲಯದ ಬಗ್ಗೆ ವ್ಯಕ್ತವಾದ ಶ್ಲಾಘನೀಯ ಮಾತು ಗಳನ್ನು ಕೇಳಿದ್ದೇನೆ. ಇಲ್ಲಿನ ಪತ್ರಿಕಾ ರಂಗದ ಕಾರ್ಯವೈಖರಿ ಹಾಗೂ ಕ್ರಿಯಾ ಶೀಲತೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ಪತ್ರಿಕಾ ವಲಯಕ್ಕೆ ಮೈಸೂರು ಮಿತ್ರ’ ಹಾಗೂಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ. ಗಣಪತಿ ಹಾಗೂ ಪತ್ರಿಕೋದ್ಯಮಿ ರಾಜ ಶೇಖರ ಕೋಟಿ ಅವರ ಕೊಡುಗೆ ಅಪಾರ ವಾಗಿದೆ. ಮಾಧ್ಯಮ ಕ್ಷೇತ್ರ ಸಮಾಜವನ್ನು ತಿದ್ದುವಂತಹ ಮಹತ್ತರ ಕೆಲಸ ಮಾಡ ಲಿದ್ದು, ಈ ಕ್ಷೇತ್ರದಲ್ಲಿ ದುಡಿಯುವ ಎಲ್ಲರ ಹಿತ ಕಾಯುವಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಸ್ವಾಸ್ಥ್ಯ ಸಮಾಜ ಕಟ್ಟುವ ಪತ್ರಿಕಾರಂಗ: ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತ ನಾಡಿ, ಸ್ವಾಸ್ಥ್ಯ ಸಮಾಜ ಕಟ್ಟುವಲ್ಲಿ ಪತ್ರಿಕಾರಂಗ ಮಹತ್ವದ ಪಾತ್ರ ನಿರ್ವ ಹಿಸುತ್ತದೆ. ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ ಒಂದೆಡೆ ಶ್ಲಾಘನೆ ವ್ಯಕ್ತವಾದರೆ, ಮತ್ತೊಂದೆಡೆ ಶಾಪ ಹಾಕು ವವರೂ ಇರುತ್ತಾರೆ. ಇಂತಹ ಸನ್ನಿವೇ ಶದ ನಡುವೆ ಸÀಮಚಿತ್ತದಿಂದ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಸ್ವಾಸ್ಥ್ಯ ಸಮಾಜ ಕಟ್ಟುವ ಕಾಯಕ ಮಾಡುತ್ತಾರೆ. ಇಂತಹವರ ಹಿತಕಾಯುವ ಸಂಘಕ್ಕೆ ಒಳಿತಾಗಲಿ ಎಂದು ಹಾರೈಸಿದರು.

ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ನಾವು ಎಷ್ಟು ಅರ್ಪಣೆ ಮಾಡಿದರೂ ಅದು ಕಡಿಮೆಯೇ. ಎಲ್ಲಾ ನದಿಗಳು ಅಂತಿಮ ವಾಗಿ ಸಮುದ್ರದತ್ತ ಮುಖ ಮಾಡುತ್ತೇವೆ. ಅದೇ ರೀತಿ ನಮ್ಮ ದೃಷ್ಟಿಯು ಆ ಭಗ ವಂತನ ಮೇಲಿರಬೇಕು. ಮನುಷ್ಯನ ಜೀವನದಲ್ಲಿ ಸುಖ-ದುಃಖಗಳು ಸರ್ವೇ ಸಾಮಾನ್ಯ. ಸಮುದ್ರದ ಅಲೆಗಳಂತೆ ಸುಖ-ದುಃಖ ನಮ್ಮ ಮೇಲೆ ಅಪ್ಪಳಿಸು ತ್ತವೆ. ದುಃಖದಲ್ಲಿ ಕುಗ್ಗದೇ, ಸುಖದಲ್ಲಿ ಹಿಗ್ಗದೇ ಸಮಚಿತ್ತದಿಂದ ಬದುಕು ನಡೆಸುವುದು ಮುಖ್ಯ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಮಾತ ನಾಡಿ, ಪ್ರತಿ ವರ್ಷ ಕ್ಯಾಲೆಂಡರ್ ಬಿಡು ಗಡೆ ಸಮಾರಂಭವನ್ನು ಸಾಧು-ಸಂತರ ಸಮ್ಮುಖದಲ್ಲಿ ಏರ್ಪಡಿಸುವ ಪರಿಪಾಠ ವನ್ನು ಸಂಘ ನಡೆಸಿಕೊಂಡು ಬರುತ್ತಿದೆ. ಇಂತಹದ್ದೇ ಧರ್ಮ ಎಂಬ ಚೌಕಟ್ಟಿಗೆ ಕಟ್ಟುಬೀಳದೇ ಯಾವುದೇ ಧರ್ಮದ ಧರ್ಮ ಗುರುಗಳನ್ನು ಆಯಾಯ ಸಂದರ್ಭದಲ್ಲಿನ ಲಭ್ಯತೆಗೆ ಅನುಗುಣ ವಾಗಿ ಆಹ್ವಾನಿಸಿ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾ ಗುತ್ತಿದೆ. ಎರಡು ದಶಕಗಳಿಂದ ಸಂಘದ ವಾರ್ಷಿಕ ಡೈರಿಯನ್ನು ಸಿದ್ಧಾರ್ಥ ಹೋಟೆಲ್ ಪ್ರಾಯೋಜಿಸುತ್ತಿದೆ. ಈ ಬಾರಿ ಸಮಯದ ಅಭಾವದಿಂದ ಛಾಯಾಚಿತ್ರ ಸಹಿತ ಕ್ಯಾಲೆಂಡರ್ ಹೊರತರಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು, ಉಪಾಧ್ಯಕ್ಷರಾದ ಎಂ.ಸುಬ್ರಹ್ಮಣ್ಯ (ನಗರ), ಮಂಜುಕೋಟೆ (ಗ್ರಾಮಾಂತರ), ಕಾರ್ಯದರ್ಶಿಗಳಾದ ಬಿ.ರಾಘವೇಂದ್ರ (ನಗರ), ಧರ್ಮಾಪುರ ನಾರಾಯಣ (ಗ್ರಾಮಾಂತರ) ಮತ್ತಿತರರು ಹಾಜರಿದ್ದರು.

Translate »