ಮೇಲ್ವರ್ಗದ ಶೇ.10 ಮೀಸಲಾತಿಗೆ ಕಾಂಗ್ರೆಸ್ ಸ್ವಾಗತ
ಮೈಸೂರು

ಮೇಲ್ವರ್ಗದ ಶೇ.10 ಮೀಸಲಾತಿಗೆ ಕಾಂಗ್ರೆಸ್ ಸ್ವಾಗತ

January 10, 2019

ಮೈಸೂರು: ಕಾಂಗ್ರೆಸ್ ಎಂದಿಗೂ ಸಾಮಾಜಿಕ ನ್ಯಾಯದ ಪರವಿದೆ. ಕೇಂದ್ರ ಸರ್ಕಾರ ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗಾಗಿ ಶೇ.10 ರಷ್ಟು ಮೀಸಲಾತಿ ತಂದಿರುವುದನ್ನು ಸ್ವಾಗತಿ ಸುತ್ತೇವೆ. ಆದರೆ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷ, ಎಂಟು ತಿಂಗಳ ನಂತರ ಮೇಲ್ವರ್ಗದ ಮೀಸಲಾತಿ ಪ್ರಸ್ತಾಪ ಮಾಡಿರುವುದು ಚುನಾವಣಾ ಸ್ಟಂಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದ ಬಳಿ ಬುಧವಾರ ಮಧ್ಯಾಹ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಂದಿಗೂ ಮೀಸಲಾತಿಯನ್ನು ವಿರೋಧಿಸುವುದಿಲ್ಲ. ನಾವು ಸದಾ ಸಾಮಾ ಜಿಕ ನ್ಯಾಯದ ಪರ ಚಿಂತನೆ ಮಾಡುತ್ತೇವೆ. ಈ ಹಿಂದೆ ಪಿ.ವಿ.ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವುದಕ್ಕೆ ಪ್ರಯತ್ನಿಸಿದ್ದರು. ಆದರೆ ಅದು ನ್ಯಾಯಾ ಲಯದಲ್ಲಿ ಮಾನ್ಯವಾಗಲಿಲ್ಲ. ಅದರಿಂದ ಅಂದು ಮಾಡಿದ್ದ ಯತ್ನ ವಿಫಲವಾಯಿತು. ಈಗ ಕೇಂದ್ರ ಸರ್ಕಾರ ಮೀಸಲಾತಿ ಕಲ್ಪಿಸಿ ರುವುದಕ್ಕೆ ಸಂಸತ್‍ನಲ್ಲಿ ನಾವು ಬೆಂಬಲ ನೀಡಿದ್ದೇವೆ ಎಂದು ಹೇಳಿದರು.

ಮೀಸಲಾತಿ ವಿಧೇಯಕವನ್ನು ಲೋಕ ಸಭೆ ಅಂಗೀಕರಿಸಿದ್ದು, ರಾಜ್ಯಸಭೆಯ ಒಪ್ಪಿಗೆಯನ್ನೂ ಪಡೆಯಲಿದೆ. ಸಂಸತ್‍ನಲ್ಲಿ ಈ ವಿಧೇಯಕಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ ಎಂದರು. ಈ ಹಿಂದೆ ಬಿಜೆಪಿಯ ವರು ಬೇರೆಯವರ ಮೀಸಲಾತಿಗೆ ಮಾತ್ರ ವಿರೋಧ ಮಾಡುತ್ತಿದ್ದರು ಎಂದು ಟೀಕಿಸಿದರು.

ಬಂದ್: ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಕೆಲವು ಬಂಡವಾಳ ಶಾಹಿಗಳಿಗೆ ಅನುಗುಣವಾಗಿ ಮಾರ್ಪಾಡು ಮಾಡುತ್ತಿದೆ. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿವೆ. ಬಂದ್ ಹಿಂದೆ ಕಾಂಗ್ರೆಸ್ ಕೈವಾಡವಿಲ್ಲ. ಬಂದ್ ವಿಫಲವಾಗಿಲ್ಲ. ಯಾವಾಗಲೂ ರಾಷ್ಟ್ರೀಯ ಬಂದ್ ನಡೆದಾಗ ಅಂಗಡಿ ಮುಂಗಟ್ಟುಗಳು ಪೂರ್ಣ ಪ್ರಮಾಣದಲ್ಲಿ ಮುಚ್ಚುವುದಿಲ್ಲ ಎಂದರು.

ಮುಂದಿನ ವಾರ ಸಮನ್ವಯ ಸಮಿತಿ ಸಭೆ: ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಕುರಿತಂತೆ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಶಾಸಕ ಡಾ.ಸುಧಾಕರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ರುವುದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎಲ್ಲವನ್ನು ಹಾದಿ ಬೀದಿಯಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇನೆ. ಮುಂದಿನ ವಾರ ಸಮ ನ್ವಯ ಸಮಿತಿ ಸಭೆ ಕರೆಯುತ್ತೇನೆ. ಆ ಸಭೆಯಲ್ಲಿ ಡಾ.ಸುಧಾಕರ್ ಜೊತೆ ಮಾತ ನಾಡುತ್ತೇನೆ. ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರೂ ಸಮಾಧಾನದಿಂದ ಇರಲು ಸಾಧ್ಯ ವಾಗುವುದಿಲ್ಲ. ವ್ಯವಸ್ಥೆಗೆ ಹೊಂದಿಕೊಳ್ಳ ಬೇಕು ಎಂದರು.

ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್‍ನೊಂದಿಗೆ ಮೈತ್ರಿ ಹಾಗೂ ಯಾವ ಯಾವ ಕ್ಷೇತ್ರವನ್ನು ಬಿಟ್ಟು ಕೊಡುವುದಕ್ಕೆ ಸಂಬಂಧಿಸಿದಂತೆ ಸಮ ನ್ವಯ ಸಮಿತಿಯಲ್ಲಿ ಚರ್ಚಿಸಲಾಗುತ್ತದೆ. ಅವರು ಯಾವ ಕ್ಷೇತ್ರದಲ್ಲಿ ಗೆಲ್ಲಬಹುದು, ನಾವು ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.

ಸಚಿವ ಪುಟ್ಟರಂಗಶೆಟ್ಟಿ ಕಚೇರಿ ಸಿಬ್ಬಂದಿ 25 ಲಕ್ಷ ರೂ. ಹಣದೊಂದಿಗೆ ವಿಧಾನ ಸೌಧದ ಬಳಿ ಸಿಕ್ಕಿಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿ ಸಚಿವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿರುವುದಕ್ಕೆ ಪ್ರತಿಕ್ರಿಯಿ ಸಿದ ಸಿದ್ದರಾಮಯ್ಯ, ಈ ಪ್ರಕರಣ ಎಸಿಬಿಯಲ್ಲಿ ವಿಚಾರಣೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡು, ವರದಿ ಕೊಟ್ಟ ನಂತರ ಈ ಪ್ರಕರಣದ ಬಗ್ಗೆ ಮಾತನಾಡು ತ್ತೇನೆ ಎಂದರು.

Translate »