ಗ್ರಾಪಂ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮೈಸೂರು ತಾಪಂ ನಿರ್ಧಾರ
ಮೈಸೂರು

ಗ್ರಾಪಂ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮೈಸೂರು ತಾಪಂ ನಿರ್ಧಾರ

March 2, 2019

ಮೈಸೂರು: ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಕಡೆಗಳಲ್ಲಿ ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಲು ತಾಲೂಕು ಪಂಚಾಯತಿ ಚಿಂತಿಸಿದ್ದು, ಶೀಘ್ರವೇ ಚಾಮುಂಡಿಬೆಟ್ಟ ಮತ್ತು ಹೊಸಹುಂಡಿಯಲ್ಲಿ ಆರಂಭವಾಗಲಿದೆ.

ಮೈಸೂರು ತಾಲೂಕು ಪಂಚಾಯತ್ ತನ್ನ ವ್ಯಾಪ್ತಿಗೆ ಬರುವ ರಿಂಗ್‍ರಸ್ತೆ ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿಯ ಜತೆಗೆ ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದೆ. ಸ್ವಚ್ಛ ನಗರಿ ಬಿರುದು ಪಡೆದಿರುವ ಮೈಸೂರು ನಗರ ವನ್ನು ಮಾತ್ರ ಸ್ವಚ್ಛವಾಗಿಟ್ಟುಕೊಂಡು ಹೊರವಲ ಯವವನ್ನು ನಿರ್ಲಕ್ಷಿಸಿದೆ ಎಂದು ಹೊಸ ಬಡಾ ವಣೆ ನಿವಾಸಿಗಳಿಂದ ವ್ಯಾಪಕ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ತಾಲೂಕು ಪಂಚಾ ಯತಿಯು 17 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ಧೇಶಿಸಲಾಗಿದೆ. ಒಂದು ವೇಳೆ 17 ಗ್ರಾಪಂಗಳಲ್ಲಿ ಘಟಕ ಸ್ಥಾಪಿಸಲು ಸಾಧ್ಯವಾಗದಿದ್ದಲ್ಲಿ ಚಾಮುಂಡಿಬೆಟ್ಟ, ಬೋಗಾದಿ, ಶ್ರೀರಾಂಪುರ, ಆಲನಹಳ್ಳಿ, ಹಿನಕಲ್, ಕೂರ್ಗಳ್ಳಿ, ಸಿದ್ದಲಿಂಗಪುರ, ಹಂಚ್ಯಾ, ಹೊಸಹುಂಡಿಯಲ್ಲಿ ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದ್ದು, ಶೀಘ್ರದಲ್ಲೇ ಚಾಮುಂಡಿಬೆಟ್ಟ ಮತ್ತು ಹೊಸ ಹುಂಡಿಯಲ್ಲಿ ಆರಂಭವಾಗಲಿದೆ. ಇದರಿಂದ ನಗರದ ಹೊರಭಾಗದಲ್ಲಿ ಕಗ್ಗಂಟಾದ ಕಸದ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಇದಕ್ಕಾಗಿ ಈಗಾಗಲೇ ಸರ್ಕಾರಿ ಜಮೀನು ಗುರುತಿಸಲಾಗಿದೆ. ಸಮೀಕ್ಷೆ ಕೂಡ ಪೂರ್ಣಗೊಂಡಿದ್ದು, ವರದಿಯನ್ನು ತಾಲೂಕು ತಹಸೀಲ್ದಾರ್ ಮತ್ತು ಜಿಪಂಗೂ ಕಳುಹಿಸಲಾಗಿದೆ. ಜಿಲ್ಲಾ ಪಂಚಾಯತಿಯು ತಾಲೂಕು ಪಂಚಾಯತಿಗೆ ಭೂಮಿ ಹಸ್ತಾಂತರಿಸಿದ ನಂತರ ಕಾಮಗಾರಿ ಆರಂಭವಾಗಲಿದೆ. ಈ ಘಟಕಗಳು ಆರಂಭವಾದಲ್ಲಿ ಒಣ-ಹಸಿ ಕಸ ವಿಂಗಡಣೆಗೆ ಹೆಚ್ಚು ಒತ್ತು ನೀಡಲಾಗುತ್ತದೆ.

ಚಾಮುಂಡಿಬೆಟ್ಟದ ತ್ಯಾಜ್ಯ ಮಾತ್ರ: ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವುದರಿಂದ ಬೆಟ್ಟಕ್ಕೆ ಪ್ರತ್ಯೇಕ ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸ ಲಾಗುತ್ತಿದೆ. ಬೆಟ್ಟದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮಾತ್ರ ಸಂ
ಸ್ಕರಿಸಲಾಗುವುದು ಎಂದು ತಾಪಂ ಇ.ಓ ಸಿ.ಲಿಂಗರಾಜಯ್ಯ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »