ಮೈಸೂರು ಹೋಟೆಲ್, ವಸತಿಗೃಹ, ರೆಸಾರ್ಟ್ ಮಾಲೀಕರ ಸಭೆ
ಮೈಸೂರು

ಮೈಸೂರು ಹೋಟೆಲ್, ವಸತಿಗೃಹ, ರೆಸಾರ್ಟ್ ಮಾಲೀಕರ ಸಭೆ

February 6, 2019

ಮೈಸೂರು: ಮೈಸೂ ರಿನ ಹೋಟೆಲ್, ವಸತಿ ಗೃಹ, ರೆಸಾರ್ಟ್, ಸರ್ವಿಸ್ ಅಪಾರ್ಟ್‍ಮೆಂಟ್‍ಗಳ ನೂರಕ್ಕೂ ಹೆಚ್ಚು ಮಾಲೀಕರು ಮಂಗಳವಾರ ಮೈಸೂರಿನ ಹೋಟೆಲ್ ಮಾಲೀಕರ ಸಂಘದ ಕಚೇರಿಯಲ್ಲಿ ಓಯೋ ಕಂಪನಿ ಯೊಂದಿಗಿನ ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿ ಹೊಸ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ನಿರ್ಣಯಿಸಿದರು.

ಮೈಸೂರು ಹೋಟೆಲ್ ಮಾಲೀಕರ ಸಂಘದ ಆಶ್ರಯದಲ್ಲಿ ಸಂಘದ ಕುತ್ತೆತ್ತೂರು ಸೀತಾರಾಮ ಭವನದಲ್ಲಿ ಅಧ್ಯಕ್ಷ ಸಿ.ನಾರಾ ಯಣಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ಈ ಕುರಿತು ಸಾಕಷ್ಟು ಚರ್ಚೆ ನಡೆಯಿತು. ಆನ್‍ಲೈನ್ ಟ್ರಾವೆಲ್ ಏಜೆನ್ಸಿಗಳಾದ ಮೇಕ್ ಮೈ ಟ್ರಿಪ್, ಯಾತ್ರಾ.ಕಾಂ, ಬುಕಿಂಗ್.ಕಾಂ, ಟ್ರಾವೆಲ್ ಗುರು, ಗೊಬಿಬೊ ಸೇರಿದಂತೆ ಹಲವು ಆನ್‍ಲೈನ್ ಹೋಟೆಲ್ ಬುಕಿಂಗ್ ಕಂಪನಿಗಳೊಂದಿಗೆ ಶೇ.15ರಿಂದ 18ರ ಕಮಿಷನ್ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದರು. ಇದಕ್ಕೆ ಕಂಪನಿಗಳು ಸಹ ಒಪ್ಪಿಗೆ ನೀಡಿವೆ ಎಂದು ಸಭೆಯಲ್ಲಿ ತಿಳಿಸಲಾ ಯಿತು. ಫೆ.9ರಂದು ಹೋಟೆಲ್ ಮಾಲೀ ಕರ ಸಂಘದ ಕಚೇರಿಯಲ್ಲಿ ಮತ್ತೆ ಸಭೆ ನಡೆಸಿ, ಕಂಪನಿಯ ಮುಖ್ಯಸ್ಥರ ಸಮ್ಮುಖ ದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ನಾರಾಯಣ ಗೌಡ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »