ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದ ಸುತ್ತ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂ ಧಿಸಲಾಗಿದೆ. ನಗರದ ವಾಲ್ಮೀಕಿ ರಸ್ತೆಯಲ್ಲಿರುವ ಮಹಾ ರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಕಟ್ಟಡ ದಲ್ಲಿ ನಡೆಯುತ್ತಿರುವ ಮತ ಎಣಿಕೆ ಕೇಂದ್ರದ ಬಳಿ ಸಾರ್ವ ಜನಿಕರು, ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರು ಹಾಗೂ ಮತ ಎಣಿಕೆಯಲ್ಲಿ ತೊಡಗಿರುವ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತ ದೃಷ್ಟಿಯಿಂದ ಮತ ಎಣಿಕೆ ಕೇಂದ್ರದ ಸುತ್ತಲಿನ ರಸ್ತೆಗಳಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10ರ ವರೆಗೆ ವಾಹನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ನಗರ ಪೋಲಿಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರ್ಬಂಧಿತ ರಸ್ತೆಗಳು: ವಾಲ್ಮೀಕಿ ರಸ್ತೆಯಲ್ಲಿ ಹುಣ ಸೂರು ರಸ್ತೆ ಜಂಕ್ಷನ್‍ನಿಂದ ಉತ್ತರಕ್ಕೆ ಕಾಳಿದಾಸ ರಸ್ತೆ ಜಂಕ್ಷನ್‍ವರೆಗೆ, ಕಾಳಿದಾಸ ರಸ್ತೆ ಜಂಕ್ಷನ್‍ನಿಂದ ದಕ್ಷಿಣಕ್ಕೆ ಹುಣಸೂರು ರಸ್ತೆ ಜಂಕ್ಷನ್‍ವರೆಗೆ, ಆದಿಪಂಪ ರಸ್ತೆಯಲ್ಲಿ ಮಾತೃಮಂಡಳಿ ವೃತ್ತದಿಂದ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗೆ, ಕಾಳಿದಾಸ ರಸ್ತೆಯಲ್ಲಿ ವಾಲ್ಮೀಕಿ ರಸ್ತೆ ಜಂಕ್ಷನ್‍ನಿಂದ ಪಶ್ಷಿಮಕ್ಕೆ (ಹಳೆ ಒಂಟಿಕೊಪ್ಪಲ್) ಮಾತೃಮಂಡಳಿ ವೃತ್ತದವರೆಗೆ ಪೂರ್ವದಿಂದ ಪಶ್ಚಿಮಕ್ಕೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ, ಈ ಭಾಗದ ಪಶ್ಚಿಮದಿಂದ ಪೂರ್ವಕ್ಕೆ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಬಂಧಿಸಲಾಗಿದೆ. ಮೈಸೂರು -ಹುಣಸೂರು ರಸ್ತೆಯಲ್ಲಿ ಪಡುವಾರಹಳ್ಳಿ ಸಿಗ್ನಲ್ ಲೈಟ್ ಜಂಕ್ಷನ್‍ನಿಂದ ಪೂರ್ವಕ್ಕೆ ಕಲಾಮಂದಿರದ ಜಂಕ್ಷನ್‍ವ ರೆಗೆ ಜೋಡಿ ರಸ್ತೆಯ ಎರಡೂ ಪಥಗಳಲ್ಲಿ ಎಲ್ಲಾ ಮಾದ ರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.
ಮತ ಎಣಿಕೆಗೆ ಕೇಂದ್ರಕ್ಕೆ ಬರುವ ಪತ್ರಿಕಾ ಮಾಧ್ಯಮ ದವರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರು ಗಳು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ ಎಣಿಕಾ ಕೇಂದ್ರಕ್ಕೆ ಕೆಆರ್‍ಎಸ್ ರಸ್ತೆಯಿಂದ ವಾಲ್ಮೀಕಿ- ಆದಿಪಂಪ ರಸ್ತೆ ಜಂಕ್ಷನ್‍ನಲ್ಲಿ ಬಲಕ್ಕೆ ತಿರುಗಿ ಆದಿಪಂಪ ರಸ್ತೆ ಮೂಲಕ ನಾರಾಯಣ ಸ್ವಾಮಿ ಬ್ಲಾಕ್ ರಸ್ತೆಗೆ ಎಡ ತಿರುವು ಪಡೆದು ಪಡುವಾರ ಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮೈದಾನ ತಲುಪಿ ವಾಹನಗಳನ್ನು ನಿಲ್ಲಿಸಿ, ಮತ ಎಣಿಕೆ ಕೇಂದ್ರಕ್ಕೆ ಸಾಗಬೇಕು ಎಂದು ಸೂಚಿಸಲಾಗಿದೆ.
ವಾಹನ ನಿಲುಗಡೆ ಸ್ಥಳಗಳು: ಪತ್ರಿಕಾ ಮಾಧ್ಯಮ ದವರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸ ಬೇಕಾಗಿದೆ. ಸಾರ್ವಜನಿಕರ ವಾಹನಗಳು ಕಾಳಿದಾಸ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆಯಿಂದ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗೆ ರಸ್ತೆಯ ಎರಡು ಬದಿಯಲ್ಲಿ, ಆಕಾಶ ವಾಣಿ ವೃತ್ತದಿಂದ ಪಶ್ಚಿಮಕ್ಕೆ ಕಾಳಿದಾಸ ರಸ್ತೆ ಜಂಕ್ಷನ್‍ವರೆ ಗಿನ ರಸ್ತೆಯ 2 ಬದಿಯಲ್ಲಿ ಹಾಗೂ ಮಾನಸಗಂಗೋತ್ರಿ ಆವರಣದಲ್ಲಿರುವ ಮೈದಾನ, ಕಲಾಮಂದಿರದ ಆವರಣ ಮತ್ತು ಕುಕ್ಕರಹಳ್ಳಿ ಕೆರೆಯ ಪೂರ್ವಭಾಗದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಬೇಕೆಂದು ತಿಳಿಸಲಾಗಿದೆ.