ಮೈಸೂರು ಮಂಜುನಾಥ್ ರಾಗ ಸಂಯೋಜನೆಯಲ್ಲಿ ಸಿದ್ಧವಾಗಿದೆ `ರಾಷ್ಟ್ರೀಯ ಯೋಗ ಗೀತೆ’
ಮೈಸೂರು

ಮೈಸೂರು ಮಂಜುನಾಥ್ ರಾಗ ಸಂಯೋಜನೆಯಲ್ಲಿ ಸಿದ್ಧವಾಗಿದೆ `ರಾಷ್ಟ್ರೀಯ ಯೋಗ ಗೀತೆ’

June 20, 2019

ಮೈಸೂರು: ವಿಶ್ವ ಯೋಗ ದಿನಾಚರಣೆಗೆ ಮೈಸೂರು ದೊಡ್ಡ ಉಡುಗೊರೆ ನೀಡಲು ಮುಂದಾ ಗಿದೆ. ಅದಕ್ಕಾಗಿ ಮೈಸೂರಿನ ಖ್ಯಾತ ವಯೋಲಿನ್ ವಿದ್ವಾಂಸರಾದ ಮೈಸೂರು ಮಂಜುನಾಥ್ ಅವರು ಹೊಸರಾಗದಲ್ಲಿ `ರಾಷ್ಟ್ರೀಯ ಯೋಗ ಗೀತೆ’ ಸಂಯೋಜನೆ ಮಾಡಿದ್ದು, ವಿಶ್ವಯೋಗ ದಿನಾಚರಣೆ ಯಂದು ವಿಶ್ವದಾದ್ಯಂತ ಲೋಕಾರ್ಪಣೆಗೊಳ್ಳಲಿದೆ.

ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಗೀತೆಗಳಿಲ್ಲ. ಹೊಸ ರಾಗದಲ್ಲಿ ಗೀತೆ ರಚನೆ ಮಾಡಬೇಕೆಂದು ಸೆಂಟರ್ ಫಾರ್ ಸಾಫ್ಟ್ ಪವರ್, ಇಂಡಿಯಾ ಫೌಂಡೇಷನ್ ಮತ್ತು ಬೆಂಗಳೂರಿನ ವ್ಯಾಸ ವಿವಿ ಸಿಬ್ಬಂದಿ ಮೈಸೂರು ಮಂಜುನಾಥ್ ರೊಂದಿಗೆ ಚರ್ಚಿಸಿದ್ದಾರೆ. ನಂತರದಲ್ಲಿ ಮಂಜುನಾಥ್ ಅವರಿಗೆ ಹೊಸ ಬಗೆಯ ರಾಗ ಹೊಳೆದಿದ್ದು, ಅದಕ್ಕೆ `ಭರತ’ ಎಂದು ಹೆಸರಿಸಿದ್ದಾರೆ. ನಂತರದಲ್ಲಿ ಈ ಗೀತೆ ರಚಿಸಲು ವಿಶ್ವದ ಅಗ್ರಗಣ್ಯ ಸಂಗೀತಗಾರರನ್ನು ಕರೆಸಬೇಕೆಂದು ಎಲ್ಲರೂ ತೀರ್ಮಾನಿಸಿ, ಅದರಂತೆ ಬಾಂಬೆ ಜಯಶ್ರೀ, ಖ್ಯಾತ ಗಾಯಕ ವಿಜಯಪ್ರಕಾಶ್, ಗುಂಡೇಚಾ ಸಹೋದ ರರು, ಪಂಡಿತ್ ರೋಣು ಮಜುಂದಾರ್, ಜಪಾನಿನ ಕೆಕೊ ಶಿಜಿನ್‍ಶಾ, ಹಾಲೆಂಡ್‍ನ ನೆಡ್ ಮ್ಯಾಕ್‍ಗೋವೆನ್, ಇಟಲಿಯ ಪುಲ್‍ವಿಯೋ, ಪ್ರಸಿದ್ಧ ಮೃದಂಗವಾದಕ ಬಿ.ಸಿ.ಮಂಜುನಾಥ್, ಘಟಂವಾದಕ ಗಿರಿಧರ್ ಉಡುಪ ಸೇರಿದಂತೆ 20 ಮಂದಿ ಜನಪ್ರಿಯ ಸಂಗೀತಗಾರರನ್ನು ಕರೆಸಿದ್ದಾರೆ. ಅವರೆಲ್ಲರ ಸಹಕಾರದಿಂದ 2 ವಾರದಲ್ಲಿ `ಜಯಂತಿ ಯೋಗ ವಿದ್ಯೆ, ಯೋಗ ವಿದ್ಯೆಗೆ ನಮ್ಮ ನಮಸ್ಕಾರ’ ರಾಷ್ಟ್ರೀಯ ಯೋಗ ಗೀತೆ ರಚಿಸಿದ್ದು, ವಿಶ್ವ ಯೋಗ ದಿನಾಚರಣೆ ಯಂದು ಮೈಸೂರು ಸೇರಿದಂತೆ ರಾಷ್ಟ್ರವ್ಯಾಪ್ತಿ ಬಿಡುಗಡೆಯಾಗಲಿದೆ.

ಸಂಸ್ಕøತ ಪಂಡಿತ ಶತಾವಧಾನಿ ಗಣೇಶ್ ಅವರು ಗೀತ ರಚನೆ ಮಾಡಿದ್ದು, ಖ್ಯಾತ ಗಾಯಕರಾದ ಬಾಂಬೆ ಜಯಶ್ರೀ, ವಿಜಯಪ್ರಕಾಶ್, ಗುಂಡೇಚ ಸಹೋದರರು(ದೃಪುದ್‍ಶೈಲಿ) ಸಂಜೀವ್‍ಅಭಯಂಕರ್ ಅವರು ಗೀತೆಗೆ ಧ್ವನಿಗೂಡಿಸಿದ್ದು, ವಿದ್ವಾನ್ ಮೈಸೂರು ಮಂಜುನಾಥ್ ಸಂಗೀತ ನಿರ್ದೇಶನ ಮತ್ತು ಸಂಯೋಜನೆ ಮಾಡಿದ್ದಾರೆ.

Translate »