ಮೈಸೂರು ವಿವಿ ನೌಕರರ ವೇದಿಕೆಯಿಂದ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ
ಮೈಸೂರು

ಮೈಸೂರು ವಿವಿ ನೌಕರರ ವೇದಿಕೆಯಿಂದ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ

October 3, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ವತಿಯಿಂದ ಮಂಗಳವಾರ ಮೈಸೂರು ನ್ಯಾಯಾಲಯದ ಮುಂಭಾಗದ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ 150ನೇ ಗಾಂಧಿ ಜಯಂತಿ ಆಚರಿಸಲಾಯಿತು. ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನಿತಾ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚ್ಯವಿದ್ಯಾ ಸಂಶೋಧಾಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಮಹಾತ್ಮ ಗಾಂಧಿಯವರ ಚಿಂತನೆಗಳು ದೇಶದ ಅಭಿವೃದ್ಧಿ, ಶಾಂತಿ ಸೌಹಾರ್ಧತೆ, ಧರ್ಮಗಳನ್ನು ಬೆಸೆಯುವಂತದ್ದಾಗಿತ್ತು. ಹೀಗಾಗಿ ಅವರು 19ನೇ ಶತಮಾನದ ಶಾಂತಿ ಧೂತ ಎನಿಸಿದರು. ಗ್ರಾಮದಿಂದ ದೇಶದ ಉದ್ಧಾರವಾಗುವ ಹಿನ್ನೆಲೆಯಲ್ಲಿ ನಗರಗಳ ವೈಭವಕ್ಕಿಂತ ಗ್ರಾಮಗಳ ವೈಭವ ಅಗತ್ಯ ಎಂದಿದ್ದರು ಗ್ರಾಮೀನ ಬದುಕು ಹಸನಾದರೆ ಇಡೀ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಅವರ ಕಲ್ಪನೆಯಾಗಿತ್ತು. ಗುಲಾಮಗಿರಿ ಬಿಟ್ಟು ಸ್ವಾವಲಂಬನೆಯಿಂದ ಕೂಡಿರಬೇಕು ಎಂದಿದ್ದರು. ಸ್ವಚ್ಛತೆಗೆ ಅವರು ಅಧ್ಯತೆ ನೀಡಿದ್ದರು ಎಂದು ಹೇಳಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಗಾಂಧಿ ಜಯಂತಿಯನ್ನು ಕೇವಲ ಆಚರಿಸಿದರೆ ಸಾಲದು. ಅವರ ಬದುಕು, ಜೀವನ ಅರಿತು ಅವರ ಆದರ್ಶಗಳನ್ನು ಯುವಜನರು ರೂಡಿಸಿಕೊಳ್ಳಬೇಕು. ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಮೂಲಕ ಶಾಂತಿ ಸಂದೇಶ ಸಾರಿದ ಗಾಂಧಿಯವರನ್ನು ನಾವು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ಅಧ್ಯಕ್ಷ ಆರ್.ವಾಸುದೇವ, ಲಕ್ಷ್ಮೀಪುರಂ ಪೊಲೀಸ್ ನಿರೀಕ್ಷಕ ರಘು, ಮೈಸೂರು ವಕೀಲರ ಸಂಘದ ಅಧ್ಯಕ್ಷ ರಾಮಮೂರ್ತಿ, ವಕೀಲ ಉಮೇಶ್, ಮೈಸೂರು ವಿವಿ ತೋಟಗಾರಿಕಾ ವಿಭಾಗದ ನಿರ್ದೇಶಕ ಮುಜಾವರ್, ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಬಿ.ಜಗದೀಶ್. ವೇದಿಕೆ ಪದಾಧಿಕಾರಿಗಳಾದ ಭಾಸ್ಕರ್, ವಿನೋದ್, ವಿಷಕಂಠೇಗೌಡ, ಮಹೇಶ್‍ಬಾಬು ರೆಡ್ಡಿ, ವಿವೇಕ್, ಮಂಜೇಶ್ ಇನ್ನಿತರರು ಇದ್ದರು.

Translate »