`ಬೆತ್ತಲಾದ ಚಂದ್ರ’ ಕೃತಿ ಮುಟ್ಟುಗೋಲು ಒತ್ತಾಯಕ್ಕೆ ಸರ್ಕಾರ ಮಣಿಯದಿರಲಿ: ಮೈಸೂರು ಚಿಂತಕರು
ಮೈಸೂರು

`ಬೆತ್ತಲಾದ ಚಂದ್ರ’ ಕೃತಿ ಮುಟ್ಟುಗೋಲು ಒತ್ತಾಯಕ್ಕೆ ಸರ್ಕಾರ ಮಣಿಯದಿರಲಿ: ಮೈಸೂರು ಚಿಂತಕರು

February 7, 2020

ಮೈಸೂರು,ಫೆ.6(ಪಿಎಂ)-ಕಲಬುರಗಿಯಲ್ಲಿ ನಡೆದಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ನಡೆಯಲಿರುವ ಬಂಡಾಯ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಲು ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಹೆಚ್.ಟಿ.ಪೋತೆ ಅವರಿಗೆ ಅವಕಾಶ ಕಲ್ಪಿಸದಂತೆ ಪಟ್ಟ ಭದ್ರ ಹಿತಾಸಕ್ತಿಗಳು ಸರ್ಕಾರಕ್ಕೆ ಪತ್ರ ಬರೆದಿರುವುದು ಖಂಡನೀಯ. ಸರ್ಕಾರ ಇಂತಹ ಪತ್ರಗಳಿಗೆ ಮನ್ನಣೆ ನೀಡಬಾರದು ಎಂದು ಮೈಸೂರಿನ ಚಿಂತಕರು ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಚಿಂತಕ ಪ್ರೊ. ಬಿ.ಪಿ.ಮಹೇಶ್ ಚಂದ್ರ ಗುರು, ಬೇಡ ಜಂಗಮ ಹಾಗೂ ಬುಡುಗ ಜಂಗಮ ಹೆಸರಿನಲ್ಲಿ ಲಿಂಗಾ ಯತ ಜಂಗಮ ಸಮುದಾಯದ ಕೆಲವರು ಪರಿ ಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಹೀಗೆ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಿರುವ ಕುರಿತು ಹೆಚ್.ಟಿ.ಪೋತೆ `ಬೆತ್ತಲಾದ ಚಂದ್ರ’ ಎಂಬ ಪುಸ್ತಕ ಬರೆದಿದ್ದಾರೆ. ಈ ಕಾರಣಕ್ಕೆ ರಾಯಚೂರು ಜಿಲ್ಲೆಯ ಬೇಡ ಜಂಗಮ (ಲಿಂಗಾಯತ ಜಂಗಮ) ಸಂಘ ಟನೆಯೊಂದು ಪೋತೆ ಅವರಿಗೆ ಬಂಡಾಯ ಸಾಹಿತ್ಯ ಗೋಷ್ಠಿ ಅಧ್ಯಕ್ಷತೆ ವಹಿಸಲು ಅವಕಾಶ ನೀಡಬಾರದು ಎಂದು ಸರ್ಕಾರಕ್ಕೆ ಪತ್ರ ಬರೆದಿರು ವುದು ಖಂಡನಾರ್ಹ ಎಂದು ಕಿಡಿಕಾರಿದರು.

ಪೋತೆ ಅವರು ರಚಿಸಿದ `ಬೆತ್ತಲಾದ ಚಂದ್ರ’ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೆಲವರು ಒತ್ತಾಯಿಸಿದ್ದಾರೆ. ಆದರೆ ಪೋತೆ ಅವರು ತಮ್ಮ ಪುಸ್ತಕದಲ್ಲಿ ವಾಸ್ತವಾಂಶವನ್ನೇ ಬರೆದಿದ್ದಾರೆ. ಅಲ್ಲದೇ, `ಬೆತ್ತಲಾದ ಚಂದ್ರ’ ಕೃತಿಯು ಕಲಬುರಗಿ ವಿವಿಯ ಬಿಎ ತೃತೀಯ ಸೆಮಿಸ್ಟರ್‍ಗೆ ಪಠ್ಯವಾಗಿದ್ದು, ಯಾವುದೇ ಕಾರಣಕ್ಕೂ ಪುಸ್ತಕ ಮುಟ್ಟಗೋಲು ಹಾಕಿಕೊಳ್ಳಬಾರದು ಎಂದು ಆಗ್ರಹಿಸಿದರು.

ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಲಿಂಗಾ ಯತ ಜಂಗಮರು ಸಸ್ಯಹಾರಿಗಳು. ಆದರೆ ಬೇಡ ಹಾಗೂ ಬುಡುಗ ಜಂಗಮರು ಮಾಂಸಾಹಾರಿಗಳು. ಎರಡೂ ಜನಾಂಗ ಸಂಬಂಧವನ್ನೂ ಬೆಳೆಸುವುದಿಲ್ಲ. ಹೆಸರಿನಲ್ಲಿ ರುವ ಸಮನ್ವಯತೆಯನ್ನು ದುರ್ಬಳಕೆ ಮಾಡಿಕೊಂಡು ಕೆಲ ಲಿಂಗಾಯತ ಜಂಗಮರು ಮೀಸಲಾತಿ ಸೌಲಭ್ಯ ಪಡೆದಿದ್ದಾರೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿ ದರು. ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ದಲಿತ ವೇಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತ ರಾಜು, ಮುಖಂಡ ಚಿಕ್ಕ ಅನ್ನದಾನಿ ಗೋಷ್ಠಿಯಲ್ಲಿದ್ದರು.

Translate »