ಕಾಲೇಜು ವಿದ್ಯಾರ್ಥಿನಿ ನಿಗೂಢ ಕಣ್ಮರೆ
ಕೊಡಗು

ಕಾಲೇಜು ವಿದ್ಯಾರ್ಥಿನಿ ನಿಗೂಢ ಕಣ್ಮರೆ

February 7, 2019
  • ಕಾಫಿ ತೋಟದ ಕೆರೆಯೊಂದರಲ್ಲಿ ಅಗ್ನಿ ಶಾಮಕದಳ ಸಿಬ್ಬಂದಿಗಳ ಹುಡುಕಾಟ
  • ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲು

ಸಿದ್ದಾಪುರ: ನಿಗೂಢವಾಗಿ ಕಾಲೇಜು ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಸಿದ್ದಾಪುರದ ಸಮೀಪದ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿ ರುವ ದಂಪತಿಯ ಪುತ್ರಿ ನೆಲ್ಯಹುದಿಕೇರಿಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಸೋಮವಾರ ಕಾಲೇಜಿನಿಂದ ಹಿಂತಿರುಗಿ ಮನೆಗೆ ಬರುವ ವೇಳೆ ಕಾಣೆಯಾಗಿದ್ದಳು.

ಬಸ್‍ವೊಂದರಲ್ಲಿ ಕಾಲೇಜಿನಿಂದ ಹಿಂತಿರುಗಿದ ಆಕೆ ಮನೆಗೆ ನಡೆದುಕೊಂಡು ಹೋಗುವ ಸಂದರ್ಭ ಕಾಫಿ ತೋಟದ ಕೆರೆಯೊಂದರ ಬಳಿ ತನ್ನ ಅಣ್ಣನೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಬಳಿಕ ಯುವತಿ ಕಾಣೆಯಾಗಿದ್ದಳು. ಯುವತಿಯ ಪೋಷಕರು, ಮೂರ್ನಾಲ್ಕು ದಿನಗಳು ಕಳೆದರೂ ಮಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಸಿದ್ದಾಪುರ ಪೊಲೀಸರು, ಮಡಿಕೇರಿಯ ಅಗ್ನಿಶಾಮಕದಳದ ಸಿಬ್ಬಂದಿಗಳ ಸಹಕಾರದಿಂದ ಯುವತಿ ನಾಪತ್ತೆಯಾಗುವ ಮುನ್ನ ಯುವತಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದ ತೋಟದ ಕೆರೆಯ ಬಳಿ ಇಂದು ಹುಡುಕಾಟ ನಡೆಸಿದರು. ಆದರೆ ವಿದ್ಯಾರ್ಥಿನಿ ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Translate »