ಮೈಸೂರು:ನೆರೆ ಹಾವಳಿಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಒಳಿತಿಗಾಗಿ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸಿ.ಮಂಜುನಾಥ್ ಮಂಗಳವಾರ ತಿರುಪತಿಗೆ ಪಾದಯಾತ್ರೆ ಬೆಳೆಸಿದರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿ ನಿಂದ ಸಿ.ಮಂಜುನಾಥ್ ತಮ್ಮ ಪತ್ನಿ ರತ್ನಾರೊಂದಿಗೆ ಪಾದಯಾತ್ರೆ ಆರಂಭಿಸಿದರು. ಈ ವೇಳೆ ಮಾತ ನಾಡಿ, ಸತತ 25 ವರ್ಷಗಳಿಂದ ಪ್ರತಿವರ್ಷ ಒಂದೊಂದು ಸಾರ್ವಜನಿಕ ಸದುದ್ದೇಶಕ್ಕಾಗಿ ತಿರುಪತಿಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದೇನೆ. ಈ ವರ್ಷ ಪತ್ನಿ ಜೊತೆಗೂಡಿ ಪಾದಯಾತ್ರೆ ಮಾಡುತ್ತಿರುವುದು ವಿಶೇಷ ಎಂದರು.