ಮೈಸೂರು: ‘ಮಲೆ ಗಳಲ್ಲಿ ಮದುಮಗಳು’ ನಂತರ ಮತ್ತೊಮ್ಮೆ ಮೈಸೂರು ರಂಗಾಯಣ ಸುದೀರ್ಘ ಅವ ಧಿಯ ನಾಟಕವನ್ನು ರಂಗಾಸಕ್ತರಿಗೆ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದು, ಭೂಮಿಗೀತ ದಲ್ಲಿ ನ.14ರಿಂದ 18ರವರೆಗೆ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ರಂಗ ರೂಪಕ್ಕೆ ತರಲು ವೇದಿಕೆ ಸಿದ್ಧಗೊಳ್ಳುತ್ತಿದೆ.
ಕಳೆದ 3 ತಿಂಗಳಿಂದ ಸುಮಾರು 40 ಮಂದಿ ಹಿರಿಯ ಹಾಗೂ ಕಿರಿಯ ಕಲಾ ವಿದರು, 35 ಮಂದಿ ತಂತ್ರಜ್ಞರು `ಶ್ರೀ ರಾಮಾ ಯಣ ದರ್ಶನಂ’ ಮಹಾಕಾವ್ಯವನ್ನು ರಂಗದ ಮೇಲೆ ತರಲು ಶ್ರಮಿಸುತ್ತಿದ್ದಾರೆ. ರಂಗಾಯಣದ ಹಿರಿಯ ಕಲಾವಿದ ಜಗದೀಶ ಮನೆವಾರ್ತೆ ಹಾಗೂ ಕೃಷ್ಣಕುಮಾರ್ ನಾರ್ಣಕಜೆ ಅವರ ಮಹಾತ್ಕಾರ್ಯಕ್ಕೆ ಹಿರಿಯ ರಂಗಕರ್ಮಿ ಕೆ.ಜಿ.ಮಹಾಬಲೇಶ್ವರ ಸಾಥ್ ನೀಡಿ ಈ ಮಹಾನ್ ನಾಟಕವನ್ನು ನಿರ್ದೇಶಿಸಿದ್ದಾರೆ. 4 ದಿನಗಳ ಕಾಲ ಸಂಜೆ 6ಕ್ಕೆ ರಂಗಾಯಣ ಭೂಮಿಗೀತದಲ್ಲಿ ಪ್ರದ ರ್ಶನ ಆಯೋಜಿಸಲಾಗಿದೆ. ಈ ನಾಟಕ ವನ್ನು ನಾಲ್ಕೂವರೆ ಗಂಟೆ ಅವಧಿಯ ಪ್ರಯೋಗಾತ್ಮಕವಾಗಿ ಪ್ರದರ್ಶಿಸಲಾಗುತ್ತಿದೆ.
ಮೈಸೂರಿನ ರಂಗಾಯಣದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇ ಶಕ ಎನ್.ಆರ್.ವಿಶುಕುಮಾರ್ ಸುದ್ದಿಗೋಷ್ಠಿ ಯಲ್ಲಿ ವಿಷಯ ಪ್ರಸ್ತಾಪಿಸಿ, ಪ್ರಥಮ ಜ್ಞಾನ ಪೀಠ ಪ್ರಶಸ್ತಿ ಕನ್ನಡಕ್ಕೆ ಸಂದ 50 ವರ್ಷದ ಸ್ಮರಣಾರ್ಥವಾಗಿ ರಂಗರೂಪಕ್ಕೆ ಶ್ರೀ ರಾಮಾಯಣ ದರ್ಶನಂ ಮಹಾ ಕಾವ್ಯವನ್ನು ಮೈಸೂರಿನ ರಂಗಾಯಣ ಹಲವು ಸವಾಲು ಗಳನ್ನು ಮೆಟ್ಟಿ ರಂಗರೂಪಕ್ಕೆ ತಂದಿದೆ. ನ.14ರಿಂದ 18ವರೆಗೆ ರಂಗಾಯಣದ ಭೂಮಿಗೀತದಲ್ಲಿ ಹಾಗೂ ನ.23 ಮತ್ತು 24ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶನ ಕಾಣಲಿದೆ. ನ. 23 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟ ಕದ ರಂಗ ಪಯಣಕ್ಕೆ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವೆ ಡಾ. ಜಯ ಮಾಲಾ ಚಾಲನೆ ನೀಡಲಿದ್ದಾರೆ. ನಂತರ ನಾಡಿನಾದ್ಯಂತ ರಂಗ ಸಂಚಾರ ಮುಂದು ವರೆಯಲಿದ್ದು, ರಾಜ್ಯದ ವಿವಿಧ ಕಲಾಕ್ಷೇತ್ರ ಗಳಲ್ಲಿ 2019ರ ಜನವರಿವರೆಗೂ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಈ ನಾಟಕಕ್ಕೆ ಭಾರತೀಯ ರಂಗ ಶಿಕ್ಷಣ ಕೇಂದ್ರದ ಶಿಕ್ಷಕ ಉಮೇಶ್ ಸಾಯಿಯಾನ್ ಸಹ ನಿರ್ದೇಶನವಿದ್ದು, ಎಚ್.ಕೆ.ದ್ವಾರಕ ನಾಥ್ ವಿನ್ಯಾಸ ಹಾಗೂ ರವಿ ಮೂರೂರು ಸಂಗೀತ ನೀಡಿದ್ದಾರೆ. ಶ್ರೀನಿವಾಸ್ ಭಟ್ (ಚೀನೀ) ಸಂಗೀತ ನಿರ್ವಹಣೆ, ಪ್ರಮೋದ ಶಿಗ್ಗಾಂವ್, ಮಹೇಶ್ ಕಲ್ಲತ್ತಿ ಬೆಳಕು ನೀಡಲಿದ್ದಾರೆ ಎಂದರು.
ಇದೇ ವೇಳೆ ನಾಟಕದ ಪೆÇೀಸ್ಟರ್ ಬಿಡು ಗಡೆಗೊಳಿಸಿ ಮಾತನಾಡಿದ ಚಿಂತಕ ಡಾ. ಜಿ.ಎಚ್.ನಾಯಕ್, ಕರ್ನಾಟಕ ರಂಗಭೂಮಿ ಪ್ರಬುದ್ಧವಾಗಿದ್ದು, ಹಲವು ಮಹಾ ಕಾವ್ಯ ಗಳನ್ನು ರಂಗರೂಪಕ್ಕೆ ತರಲಾಗಿದೆ. ಮಲೆ ಗಳಲ್ಲಿ ಮದುಮಗಳು, ಕುಸುಮ ಬಾಲೆ ಯಂತಹ ನಾಟಕಗಳನ್ನು ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ರಂಗಾಯಣದ ಇತಿಹಾಸವನ್ನು ಅವಲೋಕಿಸಿದರೆ ಅದ್ಭುತ ವಾದ ಚರಿತ್ರೆಯನ್ನು ಬರೆಯಬಹುದಾಗಿದೆ. ತಮ್ಮ ಮಹಾಕಾವ್ಯಗಳು ರಂಗರೂಪ ಪಡೆದು ಕೊಳ್ಳುತ್ತವೆ ಎಂದು ಕುವೆಂಪು ಅವರೇ ಭಾವಿಸಿರಲಿಲ್ಲ. ಮೈಸೂರು ರಂಗಾಯಣ ಬಿ.ವಿ.ಕಾರಂತ ನೇತೃತ್ವದಲ್ಲಿ ರಂಗಭೂಮಿ ಯಲ್ಲಿ ಹೊಸ ಛಾಪು ಮೂಡಿಸಿದೆ. ಕಾರಂ ತರ ಶಿಷ್ಯ ಬಳಗ ಹಾಗೂ ರಂಗಾಯಣ ಆದಿ ಕಲಾವಿದರು ಇನ್ನೂ ಇಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನಾಟಕ ನಿರ್ದೇಶಕ ಕೆ.ಜಿ.ಮಹಾ ಬಲೇ ಶ್ವರ ಮಾತನಾಡಿ, ಇದುವರೆಗೆ ಪಂಪ, ರನ್ನ ಮತ್ತು ರಾಘವಾಂಕರ ಕೃತಿಗಳ ರಂಗರೂಪ ಕ್ಕಿಳಿಸಿ ನಿರ್ದೇಶನ ಮಾಡಿz್ದÉೀನೆ. ಇದೇ ಮೊದಲ ಬಾರಿ ಕುವೆಂಪು ಮಹಾಕಾವ್ಯವನ್ನು ನಾಟಕ, ರೂಪಕ್ಕಿಳಿಸುತ್ತಿದ್ದೇನೆ. ನಾಟಕದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಅಯೋಧ್ಯೆ ಸಂಸ್ಕøತಿಯನ್ನು ಯಕ್ಷಗಾನ ಹಾಗೂ ನಗಾರಿ, ಚಂಡೆ ಮಾದರಿ ಯಲ್ಲಿ ಪ್ರದರ್ಶಿಸಲಾಗುವುದು. ನಂತರ ಲಂಕಾ ಸಂಸ್ಕøತಿಯನ್ನು ನಾಗಾಲ್ಯಾಂಡ್ ಹಾಗೂ ಚಾವು ಮಾದರಿಯಲ್ಲಿ ತೋರಿಸಲಾಗು ತ್ತದೆ. ಅಲ್ಲದೆ, ಕಿಷ್ಕಿಂಧೆ ಸಂಸ್ಕøತಿಯನ್ನು ಮಿಳಾವ್ ಹಾಗೂ ತಮಟೆಯ ವಾದ್ಯಗಳೊಂ ದಿಗೆ ಆರಂಭಿಸುವ ಮೂಲಕ ಭಿನ್ನವಾದ ಸಂಸ್ಕøತಿಗಳ ಮೇಲೆ ಬೆಳಕು ಚೆಲ್ಲುವ ನೂತನ ಪ್ರಯೋಗ ಎಂದರು.
ಸುದ್ದಿಗೋಷ್ಠಿಯಲ್ಲಿ ರಂಗಾಯಣದ ನಿರ್ದೇ ಶಕಿ ಭಾಗೀರಥಿ ಬಾಯಿ ಕದಂ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಹಿರಿಯ ಕಲಾವಿದರಾದ ಜಗದೀಶ ಮನೆವಾರ್ತೆ, ಕೃಷ್ಣಕುಮಾರ್ ನಾರ್ಣಕಜೆ, ಪ್ರಶಾಂತ್ ಹಿರೇ ಮಠ್, ಹುಲಗಪ್ಪ ಕಟ್ಟಿಮನಿ ಇತರರಿದ್ದರು.