ನಗರದ ಸರ್ವತೋಮುಖ ಅಭಿವೃಧ್ಧಿಗೆ ಪ್ರಮುಖರ ಸಲಹೆ
ನಂಜನಗೂಡು: ನಂಜನ ಗೂಡು ನಗರಸಭೆಯ 2019-2020 ಸಾಲಿನ ಆಯ-ವ್ಯಯವನ್ನು ಮಂಡಿಸುವ ಹಿನ್ನೆಲೆಯಲ್ಲಿ ನಗರಸಭಾ ಅಧ್ಯಕ್ಷೆ ಪುಷ್ಪÀ್ಪ ಲತಾ ಕಮಲೇಶ್ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.
ಮಾಜಿ ಪುರಸಭಾ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ನಗರದ ಪ್ರಮುಖ ವೃತ್ತ ಗಳಿಗೆ ಮಾಜಿ ಸಚಿವ ಡಿ.ಟಿ.ಜಯಕುಮಾರ್, ದಿ.ಎಂ.ಮಹದೇವು, ಪಿ.ವೆಂಕಟರಮಣ ಅವರು ಹೆಸರು ನಾಮಫಲಕ ಮಾಡಬೇಕು ಎಂದರು.
ಮಾಜಿ ಅಧ್ಯಕ್ಷ ಶ್ರೀಧರ್ ಮಾತನಾಡಿ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಮತ್ತು ನಗರಸಭೆಯವರು ಸೇರಿ ವಿದ್ಪುತ್ ಚಿತಾಗಾರ ನಿರ್ಮಾಣ ಮಾಡಲು ಉದ್ದೇ ಶಿಸಿರುವುದು ಸರಿಯಷ್ಟೆ. ಶೀಘ್ರದಲ್ಲಿಯೇ ಅದು ಕಾರ್ಯಗತವಾಗಬೇಕು, ಸ್ಮಶಾನಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದರು.
ಜವಳಿ ವರ್ತಕರ ಸಂಘದ ಅಧ್ಯಕ್ಷ ಜಿ.ಎಸ್.ಗೋವಿಂದರಾಜು ಮಾತನಾಡಿ, 4ನೇ ತಿರುವಿನಿಂದ 11ನೇ ತಿರುವಿನ ತನಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಮತ್ತು ಅಂಗಡಿ ಬೀದಿಯ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭಾ ಸದಸ್ಯ ಪಿ.ಡಿ.ಮನೋಹರ್ ಮಾತನಾಡಿ, ಹೊಸ ಬಡಾವಣೆಗಳ ಅಭಿವೃದ್ಧಿಗೆ ಅದ್ಯತೆ ನೀಡಬೇಕು ಮತ್ತು ಪ್ರಮುಖ ಪಾರ್ಕ್‍ಗಳನ್ನು ನಗರ ಸಭೆ ಯವರು ನಿರ್ವಹಣೆ ಮಾಡಲು ಗಮನ ಹರಿಸಬೇಕು ಎಂದರು.
ನಗರಸಭಾ ಸದಸ್ಯ ಗಿರೀಶ್ ಮಾತನಾಡಿ, ಅನೇಕ ಮಹಿಳೆಯರು ಕಾರ್ಖಾನೆಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಅವರ ಜೀವನ ಮಟ್ಟ ಸುಧಾರಿಸಲು ನಗರಸಭೆಯಿಂದ 30 ಲಕ್ಷ ರೂ. ಮೀಸಲಿರಿಸಿ ಹೊಲಿಗೆ ಯಂತ್ರ ವನ್ನು ನೀಡಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಪಿ.ಮಹದೇವಪ್ರಸಾದ್ ಮಾತನಾಡಿ, ನ್ಯಾಯಾಧೀಶರಿಗೆ ಕಟ್ಟಿರುವ ಕ್ವಾಟ್ರ್ರಸ್ ಸುತ್ತ ಪರಿಸರ ಹದೆಗಟ್ಟಿದ್ದು, ಸರಿಪಡಿಸಬೇಕು ಮತ್ತು ಶಂಕರಪುರ, ಶ್ರೀರಾಂಪುರ, ನೀಲಕಂಠನಗರ ಬಡಾ ವಣೆಗಳಿಗೆ ಬೀದಿದೀಪ ಮತ್ತು ಶೌಚಾ ಲಯವನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದರು.
ಚಂದ್ರು ಮಾತನಾಡಿ, ಹುಲ್ಲಹಳ್ಳಿ ವೃತ್ತÀದಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕು. ದೀಪದ ವ್ಯವಸ್ಥೆ ಮಾಡಬೇಕೆಂದರು.
ನಗರಸಭೆಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ನಗರಸಭಾ ನೌಕÀರಿಗೆ ವಸತಿ ಗೃಹಗಳನ್ನು ನಿರ್ಮಿಸುವಂತೆ ಮನವಿ ಮಾಡಿದರು.
ಇನ್ನು ಅನೇಕ ಮುಖಂಡರು ಮತ್ತು ಗಣ್ಯರ ಸಲಹೆ-ಸೂಚನೆಯನ್ನು ಆಲಿಸಿದ ನಗರಸಭಾ ಅಧ್ಯಕ್ಷೆ ಪುಷ್ಪಲತಾ ಮಾತನಾಡಿ ನಿಮ್ಮ ಸಲಹೆಯನ್ನು ಅಧಿ ಕಾರಿಗಳೊಂದಿಗೆ ಚರ್ಚಿಸಿ ಆಯ-ವ್ಯಯ ದಲ್ಲಿ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಎಂ. ಪ್ರದೀಪ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಆರ್. ರಾಮ ಕೃಷ್ಣ, ಪೌರಾಯುಕ್ತರಾದ ವಿಜಯ್, ಇಂಜಿನಿಯರ್ ಭಾಸ್ಕರ್, ಉಪಸ್ಥಿತರಿದ್ದರು.