ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ವಕೀಲರಿಂದ ಅಶ್ರುತರ್ಪಣ
ಮೈಸೂರು

ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ವಕೀಲರಿಂದ ಅಶ್ರುತರ್ಪಣ

January 22, 2019

ನಂಜನಗೂಡು: ಲಿಂಗೈಕ್ಯರಾದ ಡಾ.ಶಿವಕುಮಾರ ಶ್ರೀಗಳಿಗೆ ನಂಜನಗೂಡು ತಾಲೂಕಿನ ವಕೀಲರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ನ್ಯಾಯಾಲಯದ ಆವರಣದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು. ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷ ಗಿರಿರಾಜ್ ಮಾತನಾಡಿ, ಶ್ರೀಗಳು 111 ವಸಂತಗಳಲ್ಲಿ ಜ್ಞಾನ, ಅನ್ನ, ಅಕ್ಷರ ದಾಸೋಹವನ್ನು ನೆರವೇರಿಸಿ ಅರ್ಥಪೂರ್ಣವಾಗಿ ಸಾಥರ್Àಕತೆ ಮೆರೆದು ಶಿವೈಕ್ಯರಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳನ್ನು, ಭಕ್ತಿಗಳಿಂದ ಆರಾಧಿಸುವ ಭಕ್ತರನ್ನು ಅಗಲಿದ್ದಾರೆ. ಇವರ ಜೀವನ ಅವರ ಆದರ್ಶ-ತತ್ವ ಮತ್ತು ಭಕ್ತಕೋಟಿಗೆ ಅನುಕರಣೀಯ ಎಂದರು.

ನಂತರ ಕಾರ್ಯದರ್ಶಿ ಹೆಜ್ಜಿಗೆ ನಾಗೇಂದ್ರ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಪ್ರಕಾಶ್,ಮಾಜಿ ಅಧ್ಯಕ್ಷರಾದ ರಾಚಪ್ಪ, ಸಿದ್ದರಾಜು, ಮಹೇಶ್ ಬಾಬು, ಶಂಕರ್, ನಾರಾಯಣ್ ಸ್ವಾಮಿ, ಮಹೇಶ್, ವೆಂಕಟೇಶ್, ಕೆಂಪಲಿಂಗಸ್ವಾಮಿ, ಕೆಂಪರಾಜು ಮುಂತಾದವರಿದ್ದರು.

Translate »