ನಮ್ಮೆಲ್ಲರ ಹೃದಯದಲ್ಲೂ ಸಿದ್ಧಗಂಗಾ ಶ್ರೀ ಶಾಶ್ವತತಿ
ಮೈಸೂರು

ನಮ್ಮೆಲ್ಲರ ಹೃದಯದಲ್ಲೂ ಸಿದ್ಧಗಂಗಾ ಶ್ರೀ ಶಾಶ್ವತತಿ

January 22, 2019

ಕಾಯಕ ಯೋಗಿಯಾಗಿ ತ್ರಿವಿಧ ದಾಸೋಹದ ಮೂಲಕ ನಾಡಿನಿಂದ ವಿಶ್ವವನ್ನು ವ್ಯಾಪಿಸಿ, ನಡೆದಾಡುವ ದೇವರಾಗಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಶಾರೀರಿಕವಾಗಿ ಅಗಲಿದ್ದರೂ ನಮ್ಮೆಲ್ಲರ ಹೃದಯದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಪುರಸಭಾ ಸದಸ್ಯ ಎಸ್.ಕೆ.ಕಿರಣ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಸೋಮ ವಾರ ಸಂಜೆ ನಡೆದ ಲಿಂಗೈಕ್ಯ ಡಾ.ಶಿವ ಕುಮಾರ ಸ್ವಾಮೀಜಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತ ನಾಡಿ, ಅನ್ನ, ಆಶ್ರಯ ಹಾಗೂ ಅಕ್ಷರ ಸೇವೆಯ ಮೂಲಕ ಲಕ್ಷಾಂತರ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿ, ಜಗಜ್ಯೋತಿ ಯಾಗಿರುವ ಸಿದ್ಧಂಗಾ ಶ್ರೀಗಳು ಎಲ್ಲರ ಮನಸ್ಸಿನಲ್ಲೂ ಪ್ರಜ್ವಲಿಸಲಿದ್ದಾರೆ ಎಂದು ಭಕ್ತಿಪೂರ್ವಕ ನುಡಿಗಳನ್ನಾಡಿದರು.

ಮುಖ್ಯಾಧಿಕಾರಿ ಅಶೋಕ ಮಾತನಾಡಿ, ಸಾಮಾಜಿಕ ಸೇವೆ ಹಾಗೂ ಲಕ್ಷಾಂತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಿದ್ಧಂಗಾ ಮಠವನ್ನು ಮೀಸಲಿಟ್ಟ ಡಾ.ಶಿವಕುಮಾರ ಸ್ವಾಮೀಜಿ ಅವರ ಆದರ್ಶ ಬದುಕು ಪ್ರತಿ ಯೊಬ್ಬರಿಗೂ ಮಾದರಿಯಾಗಲಿದೆ. ಶ್ರೀಗಳು ತ್ರಿವಿಧ ದಾಸೋಹದ ಮಠಗಳ ಧಾರ್ಮಿಕ ಪರಂಪರೆಯನ್ನು ಇಮ್ಮಡಿ ಗೊಳಿಸಿದರು. ಅವರಂತಹ ಮಹಾನ್ ಚೇತನಕ್ಕೆ ಪುರಸಭೆಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.

ಪುರಸಭೆ ಸದಸ್ಯರಾದ ಟಿ.ಎಂ.ನಂಜುಂಡ ಸ್ವಾಮಿ, ಬಾದಾಮಿ ಮಂಜು, ಸಿ.ಪ್ರಕಾಶ್, ಅಹಮ್ಮದ್ ಸಯೀದ್, ಎನ್.ಸೋಮು, ಎಲ್.ಮಂಜುನಾಥ್, ಎಸ್.ಮದನ್ ರಾಜ್, ಆರ್.ನಾಗರಾಜು, ಸಿದ್ದು, ಮಾಜಿ ಸದಸ್ಯರಾದ ಮಲ್ಲೇಶ, ರಾಘವೇಂದ್ರ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಗ್ರಾಪಂ ಮಾಜಿ ಸದಸ್ಯ ಹೇಮಂತ್ ಕುಮಾರ್, ಮುಖಂಡರಾದ ಪುಳ್ಳಾರಿ ಮಾದೇಶ್, ಎಂ.ರಾಜು, ಎ.ಎನ್.ರಂಗು ನಾಯಕ, ಬಿ.ಗೋಪಿ, ಶ್ರೀಕಂಠ, ಆರ್‍ಐ ಗಳಾದ ಪುಟ್ಟಸ್ವಾಮಿ, ರಾಣಿ ಹಾಗೂ ಸಿಬ್ಬಂದಿ ಹಾಜರಿದ್ದರು.

ಭಕ್ತಿಪೂರ್ವಕ ಶ್ರದ್ಧಾಂಜಲಿ: ಪಟ್ಟಣದ ಲಿಂಕ್ ರಸ್ತೆಯಲ್ಲಿಯೂ ಶಿವೈಕ್ಯರಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಸಹಕಾರಿಗಳು ಹಾಗೂ ವರ್ತಕರು ಭಕ್ತಿ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. ಎಂಡಿಸಿಸಿ ಬ್ಯಾಂಕ್‍ನ ಮೇಲ್ವಿಚಾರಕ ರಾಜಪ್ಪ, ಟಿಎಪಿಸಿಎಂಎಸ್‍ನ ಉಪಾಧ್ಯಕ್ಷ ಮಲ್ಲಣ್ಣ, ಕಸಬಾ ಪಿಎಸಿಸಿಎಸ್ ನಿರ್ದೇಶಕ ಅಂಗಡಿ ಎನ್.ಶೇಖರ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಎನ್.ಕಿರಣ, ಉಮೇಶ, ಮುಖಂಡರಾದ ಮಿನಿ ಮಹ ದೇವಸ್ವಾಮಿ, ಶೇಖರಣ್ಣ, ಬಿಲಿಗೆರೆಹುಂಡಿ ಮಹೇಶ, ಶಿವನಂಜು, ಮಹದೇವಸ್ವಾಮಿ, ನಾಗಣ್ಣ ಹಾಗೂ ಇನ್ನಿತರರಿದ್ದರು.

Translate »