ಜೆಎಸ್‍ಎಸ್ ಮೆಡಿಕಲ್ ಕಾಲೇಜಲ್ಲಿ ರಾಷ್ಟ್ರಮಟ್ಟದ ಸಮ್ಮೇಳನ
ಮೈಸೂರು

ಜೆಎಸ್‍ಎಸ್ ಮೆಡಿಕಲ್ ಕಾಲೇಜಲ್ಲಿ ರಾಷ್ಟ್ರಮಟ್ಟದ ಸಮ್ಮೇಳನ

August 4, 2019

ಮೈಸೂರು,ಆ.3(ಎಂಟಿವೈ)- ಮೈಸೂ ರಿನ ಬನ್ನಿಮಂಟಪದಲ್ಲಿರುವ ಜೆಎಸ್‍ಎಸ್ ವೈದ್ಯಕೀಯ ವಿದ್ಯಾಲಯದ ರಾಜೇಂದ್ರ ಸಭಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ 12ನೇ ಇಂಡಿಯನ್ ಸೊಸೈಟಿ ಆಫ್ ಪ್ರಾಸ್‍ತೋಡಾಂಟಿಕ್ಸ್ ರೆಸ್ಟೋ ರೇಟಿವ್ ಅಂಡ್ ಪೆರಿಯೋಡಾಂಟಿಕ್ಸ್ ಸಮ್ಮೇಳನದಲ್ಲಿ 450ಕ್ಕೂ ಹೆಚ್ಚು ಮಂದಿ ವೈದ್ಯರು ಪಾಲ್ಗೊಂಡಿದ್ದಾರೆ.

ಸಮ್ಮೇಳನವನ್ನು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಉಪಾಧ್ಯಕ್ಷ ಹಾಗೂ ಶಾಸಕ ಡಾ.ವೈ.ಭರತ್ ಶೆಟ್ಟಿ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ಕಳೆದ 12 ವರ್ಷದಿಂದ ಇಂಡಿಯನ್ ಸೊಸೈಟಿ ಆಫ್ ಪ್ರಾಸ್‍ತೋಡಾಂಟಿಕ್ಸ್ ರೆಸ್ಟೋರೇಟಿವ್ ಅಂಡ್ ಪೆರಿಯೋಡಾ ಂಟಿಕ್ಸ್ ಸಂಸ್ಥೆ ಉತ್ಸಾಹದಿಂದ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರು ವುದು ಶ್ಲಾಘನೀಯ. ಸಂಸ್ಥೆ ಹುಟ್ಟು ಹಾಕಿದ ಸಂದರ್ಭದಲ್ಲಿ ಇದ್ದ ಉತ್ಸಾಹ ವನ್ನೂ ಉಳಿಸಿಕೊಂಡು ಬಂದಿರುವ ಈ ಸಂಸ್ಥೆಯಿಂದ ಸಂಶೋಧನೆಗೆ ಇನ್ನಷ್ಟು ಆದ್ಯತೆ ನೀಡಬೇಕು. ಸಮ್ಮೇಳನಗಳನ್ನು ನಡೆಸುವ ಮೂಲಕ ಹೊಸ ಹೊಸ ಆಲೋಚನೆಗಳು ಸೃಷ್ಟಿಯಾಗುತ್ತವೆ. ನೆನ್ನೆ ನಡೆದ ಘಟನೆಯನ್ನು ಇಂದು ಸುಳ್ಳಾಗಿ ಸಬಹುದು. ಇಂದು ನಡೆದದ್ದು ನಾಳೆ ಹುಸಿಯಾಗಿಸುವ ಅವಕಾಶ ನಮ್ಮಲ್ಲಿದೆ. ಈ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾದ ಸಂಶೋಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ 5 ವರ್ಷದ ಹಿಂದೆ ಇದ್ದ ಪದ್ಧತಿ ಇಂದು ಇಲ್ಲ. ಸುಧಾರಣೆಗಳು ಆಗುತ್ತಲೇ ಇವೆ. ಹೊಸ ಹೊಸ ಸಂಶೋಧನೆಗಳು ನಡೆ ಯುತ್ತಿವೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರ ನಡೆಸಲು ಸಮ್ಮೇ ಳನಗಳು ಅಡಿಗಲ್ಲಾಗಿ ಕಾರ್ಯನಿರ್ವ ಹಿಸಬೇಕು. ಒಮ್ಮೆ ಯಶಸ್ಸು ಸಾಧಿಸಿದರೆ ಸಾಧನೆಯ ಉತ್ತುಂಗಕ್ಕೇರಬಹುದು ಎಂದು ಅಭಿಪ್ರಾಯಪಟ್ಟರು.

ಜೆಎಸ್‍ಎಸ್ ವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರ್ ಮಠ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಸಂಸ್ಥೆಯ ಕುಲಸಚಿವ ಡಾ.ಬಿ.ಮಂಜುನಾಥ್, ನಿರ್ದೇಶಕ ಡಾ.ಪಿ.ಎ.ಕುಶಾಲಪ್ಪ, ಐಎಸ್‍ಪಿಆರ್‍ಪಿ ಅಧ್ಯಕ್ಷ ಡಾ.ಜಾರ್ಜ್ ಪಿ.ಜಾನ್, ಪದಾಧಿ ಕಾರಿಗಳಾದ ಡಾ.ಎಂ.ಎಸ್.ಪ್ರತಾಪ್, ಡಾ.ಹರೀಶ್ ಶೆಟ್ಟಿ, ಡಾ. ರಾಜೇಂದ್ರ ಕಶ್ಯಪ್, ಡಾ.ಎಲ್.ಕೃಷ್ಣ ಪ್ರಸಾದ್, ಡಾ.ಎಸ್.ಮಹಾಲಕ್ಷ್ಮೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭಾನುವಾರವೂ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಖ್ಯಾತ ದಂತ ಶಿಕ್ಷಣ ತಜ್ಞರು ಭಾಗವಹಿಸಲಿದ್ದು, ಅತ್ಯಾ ಧುನಿಕ ತಂತ್ರಜ್ಞಾನ, ಇತ್ತೀಚಿನ ಪ್ರವೃತ್ತಿಗಳು ಮತ್ತು ಆವಿಷ್ಕಾರಗಳ ಬಗ್ಗೆ ವಿಚಾರ ವಿನಿ ಮಯ ಮಾಡಿಕೊಳ್ಳಲಿದ್ದಾರೆ ಎಂದರು.

Translate »