ಮೈಸೂರು: ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಹದಿಹರೆಯದವರ ಸಮಸ್ಯೆಗಳು, ಸವಾಲುಗಳು ಮತ್ತು ಇನ್ನಿತರ ವಿಚಾರಗಳು ನಿರ್ಲಕ್ಷಿಸಲ್ಪಟ್ಟವ ರೆಂಬ ಅಭಿಪ್ರಾಯ ಮೈಸೂರು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಹದಿಹರೆಯದವರನ್ನು ಕುರಿತ `ಅಭಿವೃದ್ಧಿ ವರದಿಗಾರಿಕೆ’ ಕಾರ್ಯಾ ಗಾರದಲ್ಲಿ ವ್ಯಕ್ತವಾಯಿತು.
ಯುನಿಸೆಫ್, ಮೈಸೂರು ವಿವಿ ಪತ್ರಿಕೋ ದ್ಯಮ ವಿಭಾಗ ಜಂಟಿಯಾಗಿ ಆಯೋಜಿ ಸಿದ್ದ ಕಾರ್ಯಾಗಾರದಲ್ಲಿ ಮೈಸೂರು, ಮಂಡ್ಯ, ಕೊಡಗು ಇನ್ನಿತರ ಜಿಲ್ಲೆಗಳ 25ಕ್ಕೂ ಹೆಚ್ಚು ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಹದಿಹರೆಯದ ಮಕ್ಕಳ ಬಗ್ಗೆ ವರದಿ ಮಾಡುವಾಗ ಅನು ಸರಿಸಬೇಕಾದ ಮಾರ್ಗಸೂಚಿ ಬಗ್ಗೆ ಶಿಬಿರಾ ರ್ಥಿಗಳಿಗೆ ತಿಳುವಳಿಕೆ ನೀಡಲಾಯಿತು. ನೇರ ಸುದ್ದಿ, ಸಂದರ್ಶನ, ಸುದ್ದಿ ವಿಶ್ಲೇಷಣೆ, ಸಾಂದರ್ಭಿಕ ವರದಿ, ಫೀಚರ್ ವರದಿ ಗಳನ್ನು ಬರೆಯುವಾಗ ಮನಸ್ಸಿನಲ್ಲಿಡಬೇ ಕಾದ ಅಂಶಗಳ ಬಗ್ಗೆಯೂ ತಿಳಿಸಲಾಯಿತು.
ಹದಿಹರೆಯದವರನ್ನು ಕುರಿತು ವರದಿ ಮಾಡುವಾಗ ವರದಿಗಾರರು ಬಹಳ ಎಚ್ಚ ರಿಕೆ ವಹಿಸಬೇಕು. ಹದಿಹರೆಯದವರನ್ನು ಅಪಾಯಕ್ಕೆ ತಳ್ಳುವಂತಹ ವರದಿ, ಚಿತ್ರಗಳ ಪ್ರಕಟಣೆ ಬೇಡ. ಹದಿಹರೆಯದವರು ಮತ್ತು ಮಕ್ಕಳಿಗೆ ಹಾನಿಯಾಗುವಂತಹ ಅಭಿ ಪ್ರಾಯಗಳನ್ನು ವ್ಯಕ್ತಪಡಿಸಬಾರದು ಎಂಬಿ ತ್ಯಾದಿ ವಿಚಾರಗಳ ಬಗ್ಗೆಯೂ ತಿಳಿಸಿ ಕೊಡಲಾಯಿತು.
ಹದಿಹರೆಯದ ಹೆಣ್ಣಿನ ಸಮಸ್ಯೆಗಳು ಬಹಳ ಗಂಭೀರವಾಗಿದ್ದು ಅವುಗಳನ್ನು ಸೂಕ್ಷ್ಮ ವಾಗಿ ಆಲಿಸಬೇಕು. ಇಂತಹ ಹೆಣ್ಣು ಮಕ್ಕಳು ಬಾಲ್ಯವಿವಾಹ, ಶೌಚಾಲಯ ಸಮಸ್ಯೆ, ಮಾನವ ಸಾಗಾಣೆ, ರಕ್ತಹೀನತೆ, ಲೈಂಗಿಕ ಶೋಷಣೆ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಲ್‍ಜಿಬಿಟಿಕ್ಯೂ, ವಲಸೆ, ನಿರಾಶ್ರಿತ ಮಕ್ಕಳು, ಹಿಂದುಳಿದ ವರ್ಗದ ಹಿನ್ನೆಲೆ ಮೊದಲಾದ ವಿಚಾರಗಳನ್ನು ಹದಿ ಹರೆಯದವರ ಸಮಸ್ಯೆ ವಿಶ್ಲೇಷಿಸುವಾಗ ಗಮನಿಸಬೇಕಾಗುತ್ತದೆ ಎಂದು ಸಂಪ ನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗ ಳೂರಿನ ಚೈಲ್ಡ್‍ರೈಟ್ಸ್ ಟ್ರಸ್ಟ್‍ನ ಕಾರ್ಯ ನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮ ತಿಳಿಸಿದರು.
ಹದಿಹರೆಯದ ಮಕ್ಕಳ ರಕ್ಷಣೆ ಸವಾಲು: ಮುಖ್ಯ ಅತಿಥಿಯಾಗಿದ್ದ ಯುನಿಸೆಫ್‍ನ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ಮುಖ್ಯ ಕ್ಷೇತ್ರಾಧಿಕಾರಿ ಮೈತಲ್ ರಸ್ದಿಯಾ ಮಾತನಾಡಿ, ಭಾರತದಲ್ಲಿ ಹದಿಹರೆಯದ ಮಕ್ಕಳ ರಕ್ಷಣೆ ಸವಾಲಾಗಿ ಪರಿಣಮಿಸಿದೆ. ಅವರ ಬಗ್ಗೆ ಸಕಾರಾತ್ಮಕ ವರದಿಗಳು ಹೆಚ್ಚಾಗಿ ಪ್ರಕಟವಾಗಬೇಕಿದೆ. ವಿಶ್ವಸಂಸ್ಥೆಯ ಯುನಿ ಸೆಫ್ ಮಕ್ಕಳ ಅಭಿವೃದ್ಧಿ ಮತ್ತು ಮಕ್ಕಳ ಸಬಲೀಕರಣಕ್ಕೆ ಹೆಚ್ಚು ಗಮನ ನೀಡುತ್ತಿದ್ದು, ಇದೀಗ ಕಿಶೋ ರಾವಸ್ಥೆಯ ಲ್ಲಿರುವ ಮಕ್ಕಳನ್ನು ಸಬಲೀಕರಣಗೊಳಿಸ ಬೇಕಿದೆ. ಈ ನಿಟ್ಟಿನಲ್ಲಿ ಯುನಿಸೆಫ್ ಹಲ ವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಮಾನವ ಹಕ್ಕುಗಳನ್ನು ರಕ್ಷಿಸಬೇಕಿದೆ. ಅದರಲ್ಲೂ ಪ್ರಮುಖವಾಗಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದರು.
ಮೈಸೂರು ವಿವಿ ಕುಲಸಚಿವ ಪ್ರೊ. ಆರ್.ರಾಜಣ್ಣ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಹವ್ಯಾಸಿ ಪತ್ರಕರ್ತರಾದ ಪ್ರೀತಿ ನಾಗರಾಜ್, ಯುನಿ ಸೆಫ್‍ನ ಸಂವಹನ ತಜ್ಞ ಪ್ರಸೂನ್ ಸೇನ್, ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯ ಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಎಸ್.ಸಪ್ನ ಇನ್ನಿತರರಿದ್ದರು.