ನವದೆಹಲಿ, ಫೆ.9- ಜಿಎಸ್‍ಟಿ ವಂಚನೆ ತಪ್ಪಿಸಲು ಫೆಬ್ರವರಿ 15ರಿಂದ ಸರ್ಕಾರ ನಿಯಮವೊಂದನ್ನು ಜಾರಿಗೆ ತರುತ್ತಿದೆ. ಆಮದುದಾರರು ಮತ್ತು ರಫ್ತುದಾರರು ಫೆ.15ರಿಂದ ದಾಖಲೆಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಗುರುತಿನ ಸಂಖ್ಯೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಜಿಎಸ್‍ಟಿಯಿಂದ ಆದಾಯ ಸಂಗ್ರಹಣೆಯಲ್ಲಿನ ನಷ್ಟವನ್ನು ಮತ್ತು ತೆರಿಗೆ ವಂಚನೆಯನ್ನು ತಡೆಯಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ. ಇದರ ಅಡಿ ಯಲ್ಲಿ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಸುತ್ತೋಲೆ ಹೊರಡಿ ಸಿದೆ. ಜಿಎಸ್‍ಟಿಐಎನ್ ನೋಂದಣಿಯ ನಂತರವೂ ರಫ್ತುದಾರರು ಮತ್ತು ಆಮದುದಾರರು ಜಿಎಸ್‍ಟಿಐಎನ್ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಜಿಎಸ್‍ಟಿ ಅಡಿಯಲ್ಲಿ ನೋಂದಾಯಿಸ ಲಾದ ರಫ್ತುದಾರರು ಮತ್ತು ಆಮದುದಾರರು ಫೆ15ರಿಂದ ರಫ್ತು, ಆಮದು ದಾಖಲೆ ಗಳಲ್ಲಿ ಜಿಎಸ್‍ಟಿಎನ್ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ತೆರಿಗೆ ಅಧಿಕಾರಿಗಳಿಗೆ ಕಡಿಮೆ ಮೌಲ್ಯವನ್ನು ತೋರಿಸುವ ಮೂಲಕ ತೆರಿಗೆ ವಂಚನೆ ಮಾಡುವವರನ್ನು ಬಂಧಿಸಲು ಇದು ಸಾಧ್ಯವಾಗಲಿದೆ.