ಹಾಸನ: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಮಾರ್ಗ ದರ್ಶನದಂತೆ ಮಂಡ್ಯ ಲೋಕಸಭಾ ಕ್ಷೇತ್ರ ಅಭ್ಯರ್ಥಿ ನಿಖಿಲ್ ತಾಯಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಬುಧ ವಾರ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳೇಕೋಟೆಯಲ್ಲಿನ ಬೆಟ್ಟದ ರಂಗನಾಥಸ್ವಾಮಿ ಹಾಗೂ ಹರದನಹಳ್ಳಿ ದೇವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ನಿಖಿಲ್ ಮಾತನಾಡಿ, ಫಲಿತಾಂಶದ ಬಗ್ಗೆ ಯಾವುದೇ ಆತಂಕ, ಭಯ ಇಲ್ಲ. ಮಂಡ್ಯದ ಜನರು ಬೆಂಬಲಿಸುವುದು ನಿಶ್ಚಿತ. ನನ್ನ ಪರವಾಗಿ 6 ಮತ್ತು ನನ್ನ ಎದುರಾಳಿ ಪರವಾಗಿ 4 ಸಮೀಕ್ಷೆಗಳ ವರದಿ ಬಂದಿವೆ. ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತ ನಾಡಿ, ನಿಖಿಲ್ ಗೆಲ್ಲುವುದು ನೂರಕ್ಕೆ ನೂರು ಖಚಿತ. ಅಲ್ಲದೇ ಹಾಸನ, ತುಮ ಕೂರಿನಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು. ಲೋಕಸಭಾ ಚುನಾ ವಣೆಯ ಫಲಿ ತಾಂಶ ಪ್ರಕಟ ಗೊಂಡ ಕೂಡಲೇ ರಾಜ್ಯ ಸರ್ಕಾರ ಬೀಳು ತ್ತದೆ ಎಂಬ ಬಿಜೆಪಿ ನಾಯಕರ ಹೇಳಿ ಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುತ್ತಾರೆ. ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸರ್ಕಾರ ಬೀಳುತ್ತದೆ ಎಂದು ಹಗಲು ಗನಸು ಕಾಣುತ್ತಿದ್ದಾರೆ. ಅವರ ಪ್ರಯತ್ನ ವ್ಯರ್ಥ ವಾಗಲಿದೆ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಯಾರು ಬೀಳಿಸಲು ಸಾಧ್ಯವಿಲ್ಲ ಎಂದರು.
ಶೃಂಗೇರಿ ಶಾರದಾಂಬೆ ಆಶೀರ್ವಾದ ನನ್ನ ಮೇಲಿದೆ, ಗೆಲ್ಲುವ ವಿಶ್ವಾಸವಿದೆ: ನಿಖಿಲ್
ನಾನು ಯಾವುದೇ ಸಮೀಕ್ಷೆಗಳನ್ನು ನಂಬುವುದಿಲ್ಲ, ನಾಳೆಯ ಫಲಿತಾಂಶ ನನ್ನ ಪರವಾಗಿ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಮಂಡ್ಯ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಲ್ಕು ಸಂಸ್ಥೆಗಳು ನನ್ನ ಪರವಾಗಿ ಹಾಗೂ ಆರು ಸಂಸ್ಥೆಗಳು ವಿರೋಧವಾಗಿ ಸಮೀಕ್ಷೆ ನಡೆಸಿದೆ. ಆದರೆ ನಾನು ಯಾವು ದನ್ನೂ ಸ್ವೀಕರಿಸುವುದಿಲ್ಲ. ಶೃಂಗೇರಿ ಶಾರದಾಂಬೆಯ ಆಶೀರ್ವಾದ ನನ್ನ ಮೇಲಿದೆ, ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಮಾಡಲು ಬಂದಿದ್ದೇನೆ ಎಂದರು.
ನಾನು ಯಾವುದೇ ಸಮೀಕ್ಷೆಗಳನ್ನು ಪರಿಗಣಿಸುವುದಿಲ್ಲ, 2004ರಲ್ಲಿ ಎರಡು ಸೀಟ್ ಜೆಡಿಎಸ್‍ಗೆ ಬರುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು, ಆಗ 58 ಸ್ಥಾನಗಳನ್ನು ಜೆಡಿಎಸ್ ಪಡೆದಿತ್ತು ಎಂದು ನೆನಪಿಸಿದರು.
ಇನ್ನು ನಿಖಿಲ್ ಕುಮಾರಸ್ವಾಮಿ ಜೊತೆ ಅವರ ತಾಯಿ ಅನಿತಾ ಕುಮಾರಸ್ವಾಮಿ ಕೂಡ ವಿಶೇಷ ಪೂಜೆಯಲ್ಲಿ ಭಾಗಿ ಯಾಗಿದ್ದರು. ಶಾರದಾಂಬೆ ದರ್ಶನದ ಬಳಿಕ ನಿಖಿಲ್ ಮತ್ತು ಅನಿತಾ ಕುಮಾರಸ್ವಾಮಿ ಶೃಂಗೇರಿಯಿಂದ ನೇರ ವಾಗಿ ಧರ್ಮಸ್ಥಳಕ್ಕೆ ತೆರಳಿದರು.