ವಿಶ್ವೇಶ್ವರಯ್ಯ ನಾಲೆಗೆ ನಾಳೆಯಿಂದ ಕೆಆರ್‍ಎಸ್ ನೀರು ಬಂದ್
ಮೈಸೂರು

ವಿಶ್ವೇಶ್ವರಯ್ಯ ನಾಲೆಗೆ ನಾಳೆಯಿಂದ ಕೆಆರ್‍ಎಸ್ ನೀರು ಬಂದ್

May 7, 2019

ಮೈಸೂರು: ಬೇಸಿಗೆ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ ದಿನೇ ದಿನೆ ಕುಸಿಯುತ್ತಿದೆ.

ಇಂದಿನ ಜಲಾಶಯದ ನೀರಿನ ಮಟ್ಟ 84.21 ಅಡಿ ಇದ್ದು, ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಸರಬ ರಾಜು ಮಾಡಬೇಕಾಗಿರುವುದರಿಂದ ವಿಶ್ವೇಶ್ವರಯ್ಯ ನಾಲೆಗೆ ಹರಿಸುತ್ತಿರುವ ನೀರನ್ನು ಮೇ 8 ರಿಂದ ಸ್ಥಗಿತಗೊಳಿಸ ಲಾಗುವುದು ಎಂದು ಕಾವೇರಿ ನೀರಾವರಿ ನಿಗಮ (ANN) ನಿಯಮಿತದ ಸೂಪರಿಂಟೆಂಡಿಂಗ್ ಇಂಜಿ ನಿಯರ್ ರವೀಂದ್ರ ತಿಳಿಸಿದ್ದಾರೆ. ಕೃಷ್ಣರಾಜ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಿದ್ದು ಕನಿಷ್ಠ ನೀರಿನ ಮಟ್ಟ 74.76 ಅಡಿಗೆ ತಲುಪಿದಾಗ ಡೆಡ್ ಸ್ಟೋರೇಜ್ ಎಂದು ಪರಿಗಣಿಸಲಾಗುತ್ತದೆ. ಮೈಸೂರು, ಬೆಂಗಳೂರು ನಗರ ಸೇರಿದಂತೆ 47 ಪಟ್ಟಣಗಳು ಮತ್ತು 625 ಹಳ್ಳಿಗಳು ಕುಡಿ ಯಲು ಕೆಆರ್‍ಎಸ್‍ನ ಕಾವೇರಿ ನೀರನ್ನೇ ಅವಲಂಬಿಸಿ ರುವುದರಿಂದ ನಿಗಮವು ವ್ಯವಸಾಯ ಉದ್ದೇಶಕ್ಕೆ ಪೂರೈ ಸುತ್ತಿರುವುದನ್ನು ನಿಲ್ಲಿಸಿ ಕುಡಿಯುವ ಉದ್ದೇಶಕ್ಕೆ ಮೀಸಲಿ ಡುವುದು ವಾಡಿಕೆ. ಅದರಂತೆ ಈ ಬಾರಿ ಬೇಸಿಗೆ ಬಿಸಿಲಿನ ತೀವ್ರತೆ ಹೆಚ್ಚಾಗಿರುವ ಕಾರಣ, ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತ ಕಬ್ಬಿನ ಬೆಳೆಗೆ ವಿಶ್ವೇಶ್ವರಯ್ಯ ನಾಲೆ ಮೂಲಕ ಹರಿಸುತ್ತಿರುವ ನೀರನ್ನು ಮೇ 8ರಿಂದ ಸ್ಥಗಿತಗೊಳಿಸ ಲಾಗುವುದು. ಕಬ್ಬಿನ ಬೆಳೆ 1 ವರ್ಷದಾಗಿದ್ದು, ಕಳೆದ ಜೂನ್-ಜುಲೈ ಮಾಹೆಯಲ್ಲಿ
ಮಾಡಿರುವ ಬಿತ್ತನೆಯು ಈಗ ಕಟಾವು ಹಂತಕ್ಕೆ ಬಂದಿರುವುದರಿಂದ ಸರ್ಕಾರದ ನಿರ್ದೇಶನದಂತೆ ಹಾಗೂ ಮುಂದಿನ ಆದೇಶದವರೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸ ಲಾಗುವುದು ಎಂದು ಅವರು ತಿಳಿಸಿದರು. ಈ ಪ್ರಾಂತ್ಯದಲ್ಲಿ ಕುಡಿಯಲು ತಿಂಗಳಿಗೆ 3 ಟಿಎಂಸಿ ನೀರು ಬೇಕಾಗುತ್ತದೆಯಾದ್ದರಿಂದ ಮುಂದಿನ 2 ತಿಂಗಳವರೆಗೆ 7 ಟಿಎಂಸಿ ನೀರಿನ ಅಗತ್ಯವಿದೆ. ಅದಕ್ಕಾಗಿ ಕುಡಿಯುವ ಉದ್ದೇಶವನ್ನೊರತುಪಡಿಸಿ ಇನ್ನಾವುದೇ ಉದ್ದೇಶಕ್ಕೂ ಜಲಾಶಯದಿಂದ ನೀರು ಬಿಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವರಾಯ, ಚಿಕ್ಕದೇವರಾಯ, ವಿರಿಜಾ, ರಾಮಸ್ವಾಮಿ ಅಯ್ಯಂಗಾರ್, ಮಾದವಮಂತ್ರಿ ಸೇರಿದಂತೆ ಈ ಬೇಸಿಗೆಯಲ್ಲಿ ಎಲ್ಲಾ 8 ನಾಲೆಗಳಿಗೆ ನೀರು ಹರಿಸಲಾಗುವುದಿಲ್ಲ. ಮುಂದಿನ ಎರಡು ತಿಂಗಳ ಅವಧಿಗೆ ಕುಡಿಯುವ ನೀರಿನ ಲಭ್ಯತೆ ನೋಡಿಕೊಂಡು ಸರ್ಕಾರ ನಾಲೆಗಳಿಗೆ ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಂಡರೆ ಅದರಂತೆ ಕ್ರಮ ವಹಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಆರ್‍ಎಸ್ ಜಲಾಶಯದಲ್ಲಿ ಸದ್ಯ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ(KSNDMC) ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಮೈಸೂರು, ಮಂಡ್ಯ ಹಾಗೂ ಬೆಂಗಳೂರುಗಳಿಗೆ ಕುಡಿಯಲು ನೀರು ಪೂರೈಸಿದ ನಂತರ ಉಳಿದರೆ ಅಥವಾ ಮಳೆ ಬಂದು ನೀರಿನ ಸಂಗ್ರಹವಾಗುತ್ತಿದೆ ಎಂದು ಕಂಡು ಬಂದರೆ ಮಾತ್ರ ಜಮೀನುಗಳಲ್ಲಿ ಬೆಳೆ ಬೆಳೆಯಲು ನೀರು ಹರಿಸಬಹುದೆಂದೂ ಕೇಂದ್ರವು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈಗಾಗಲೇ ಮಂಡ್ಯ ಜಿಲ್ಲೆಯಾದ್ಯಂತ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಬೋರ್‍ವೆಲ್‍ಗಳೂ ಬತ್ತಿ ಹೋಗುತ್ತಿರುವುದರಿಂದ ಜನರು ಪರದಾಡುತ್ತಿದ್ದಾರೆ. ಅದೇ ರೀತಿ ಮೈಸೂರಲ್ಲಿ ಹಲವೆಡೆ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

Translate »