ಪ್ರಥಮ ದರ್ಜೆ ಕಾಲೇಜು 5808 ಉಪನ್ಯಾಸಕರ ನೇಮಕ
ಮೈಸೂರು

ಪ್ರಥಮ ದರ್ಜೆ ಕಾಲೇಜು 5808 ಉಪನ್ಯಾಸಕರ ನೇಮಕ

May 7, 2019

ಬೆಂಗಳೂರು,: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿ ಖಾಲಿ ಇರುವ 708 ಪ್ರಾಂಶುಪಾಲರ ಹುದ್ದೆ ಸೇರಿದಂತೆ 5,808 ಉಪನ್ಯಾಸಕರ ನೇಮ ಕಕ್ಕೆ ರಾಜ್ಯ ಸರ್ಕಾರ ಮಹ ತ್ವದ ನಿರ್ಧಾರ ಕೈಗೊಂಡಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಹೊಸದಾಗಿ ಸರ್ಕಾರಿ ಪದವಿ ಕಾಲೇಜು ಗಳನ್ನು ಆರಂಭಿಸಲಾ ಗಿದ್ದು, ಹಳೆ ಕಾಲೇಜು ಗಳೂ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಉಪನ್ಯಾಸ ಕರ ಕೊರತೆ ಇದೆ. ವಿದ್ಯಾರ್ಥಿ ಗಳ ಸಂಖ್ಯೆಗೆ ಅನುಗುಣ ವಾಗಿ ಸಂಬಂಧಪಟ್ಟ ವಿಷಯಗಳಿಗೆ ಬೋಧಿ ಸಲು ಉಪನ್ಯಾಸಕರಿಲ್ಲದೆ, ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿ ಪಾಠ-ಪ್ರವಚನ ಮಾಡುವ ಪರಿಸ್ಥಿತಿ ಇದೆ. ಉಪನ್ಯಾಸಕರ ಕೊರತೆ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿತ್ತು. ಇದರ ಜೊತೆಗೆ ವಿದ್ಯಾರ್ಥಿಗಳ ವ್ಯಾಸಂಗದ ಮೇಲೂ ಪರಿಣಾಮ ಬೀರುತ್ತಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಖಾಲಿ ಹುದ್ದೆಗಳ ಜೊತೆಗೆ ಹೊಸದಾಗಿ ಹುದ್ದೆಗಳನ್ನು ಸೃಜಿಸಿ ನೇಮಕ ಮಾಡುವ ತೀರ್ಮಾನಕ್ಕೆ ಬಂದಿದೆ.

ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಅಧ್ಯಕ್ಷತೆಯಲ್ಲಿ ಇಂದಿಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಹಣಕಾಸು ಇಲಾಖೆ, ಖಾಲಿ ಹುದ್ದೆಗಳ ಭರ್ತಿಗೆ ಸಮ್ಮತಿಸಿತು. ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 396 ಪ್ರಾಶುಪಾಲರ ಹುದ್ದೆಗಳ ಜೊತೆಗೆ ಹೊಸದಾಗಿ 312 ಹುದ್ದೆಗಳನ್ನು ಸೃಜಿಸಿ ನೇಮಕ ಮಾಡಿಕೊಳ್ಳಲು ಹಣಕಾಸು ಇಲಾಖೆ ಅನುಮತಿ ನೀಡಿದೆ. ಇದರ ಜೊತೆಗೆ ಖಾಲಿ ಇರುವ 1,600 ಉಪನ್ಯಾಸಕರ ಹುದ್ದೆ ಸೇರಿದಂತೆ ವಿವಿಧ ವಿಷಯಗಳಿಗೆ ಹೊಸದಾಗಿ 3,500 ಹುದ್ದೆಗಳನ್ನು ಸೃಜಿಸಿ ನೇಮಕಾತಿ ಮಾಡಲು ಸಮ್ಮತಿಸಿದೆ. ಹಣಕಾಸು ಇಲಾಖೆ ನೀಡಿರುವ ಅನುಮತಿ ಹಿನ್ನೆಲೆಯಲ್ಲಿ ಸಿಇಟಿ ಮೂಲಕ ಹುದ್ದೆಗಳ ಭರ್ತಿ ತೀರ್ಮಾನಕ್ಕೆ ಇಲಾಖೆ ಬಂದಿದೆ.

ಅತಿಥಿ ಉಪನ್ಯಾಸಕರ ಗೌರವ ಧನ 5000ರೂ. ಹೆಚ್ಚಳ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಟ್ಟು 12,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಇವರ ಗೌರವಧನ ಪ್ರಮಾಣವನ್ನು ಮಾಸಿಕ 5,000 ರೂ.ಗೆ ಹೆಚ್ಚಳ ಮಾಡಲು ಸಭೆ ತೀರ್ಮಾನ ಕೈಗೊಂಡಿದೆ.ಅತಿಥಿ ಉಪನ್ಯಾಸಕರಲ್ಲಿ 2 ಶ್ರೇಣಿಗಳಿದ್ದು ಮೊದಲನೇ ಶ್ರೇಣಿ ಅತಿಥಿ ಉಪನ್ಯಾಸಕರು 11,500 ರೂ. ಗೌರವಧನ ಪಡೆಯುತ್ತಿದ್ದಾರೆ, ಎರಡನೇ ಶ್ರೇಣಿ ಅತಿಥಿ ಉಪನ್ಯಾಸಕರು 13,500 ರೂ. ಗೌರವಧನ ಪಡೆಯುತ್ತಿದ್ದಾರೆ. ಮಾಸಿಕ 5,000 ರೂ. ಹೆಚ್ಚಳ ಮಾಡುವುದರಿಂದ ಮೊದಲನೇ ಶ್ರೇಣಿ ಅತಿಥಿ ಉಪನ್ಯಾಸಕರು 16,500 ರೂ. ಗೌರವಧನ ಪಡೆಯಲಿದ್ದು, ಎರಡನೇ ಶ್ರೇಣಿ ಅತಿಥಿ ಉಪನ್ಯಾಸಕರು 18,500 ರೂ. ಗೌರವ ಧನ ಪಡೆಯಲಿದ್ದಾರೆ. ಹೊಸದಾಗಿ ಉಪ ನ್ಯಾಸಕರ ನೇಮಕ ಸಂದರ್ಭದಲ್ಲಿ ಶೇಕಡಾ 50ರಷ್ಟು ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ ಅತಿಥಿ ಉಪನ್ಯಾಸಕರಿಗೆ ನೀಡಲು ಇಂದಿನ ಸಭೆ ತೀರ್ಮಾನ ಮಾಡಿದೆ.

Translate »