ದಕ್ಷಿಣಕ್ಕಿಂತ ಉತ್ತರ ಕರ್ನಾಟಕ ಸುಭಿಕ್ಷ: ಡಾ.ಕೆ.ಅನ್ನದಾನಿ
ಮಂಡ್ಯ

ದಕ್ಷಿಣಕ್ಕಿಂತ ಉತ್ತರ ಕರ್ನಾಟಕ ಸುಭಿಕ್ಷ: ಡಾ.ಕೆ.ಅನ್ನದಾನಿ

July 17, 2018

ನಾಗಮಂಗಲ: ಮೂರ್ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ದಕ್ಷಿಣ ಕರ್ನಾಟಕಕ್ಕಿಂತ ಸುಭಿಕ್ಷವಾಗಿವೆ ಎಂದು ಶಾಸಕ ಡಾ.ಕೆ.ಅನ್ನದಾನಿ ಅಭಿಪ್ರಾಯಪಟ್ಟರು.

ಪಟ್ಟಣದ ಟಿ.ಬಿ.ಬಡಾವಣೆಯಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ. ಕೃಷ್ಣಪ್ಪ ಜಿಲ್ಲೆಯ ಶಾಸಕರುಗಳಿಗೆ ಏರ್ಪ ಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಆಲಮಟ್ಟಿ ಡ್ಯಾಂ ನಿರ್ಮಾಣದಿಂದಾಗಿ ಅಲ್ಲಿಯ ಹಲವು ಜಿಲ್ಲೆಗಳು ಮಂಡ್ಯ, ಮೈಸೂರು ಮತ್ತು ಬೆಂಗಳೂರಿಗಿಂತ ಸಾಕಷ್ಟು ಅಭಿವೃದ್ಧಿ ಹೊಂದಿವೆ. ವಿರೇಂದ್ರ ಪಾಟೀಲ್ ರಿಂದ ಹಿಡಿದು ಹಲವರು ಉತ್ತರ ಕರ್ನಾಟಕದ ಮಂದಿ ಮುಖ್ಯಮಂತ್ರಿಗಳಾ ಗಿದ್ದಾರೆ. ಅಲ್ಲಿಯ ಅಭಿವೃದ್ಧಿಗಾಗಿ ತೆಗೆದು ಕೊಂಡ ಸಾವಿರಾರು ಕೋಟಿ ಹಣ ಏನಾಯಿತು ಎಂದು ಪ್ರಶ್ನಿಸಿದ ಅವರು, ರಾಮನಗರ, ಕನಕಪುರ, ದೇವನಹಳ್ಳಿ, ನಾಗಮಂಗಲ ಸೇರಿದಂತೆ ದಕ್ಷಿಣದ ಹಲವು ನಗರಗಳಲ್ಲಿ ಕುಡಿಯುವ ನೀರಿಲ್ಲ. ಆದರೂ ಉತ್ತರ ಕರ್ನಾಟಕದ ಮಂದಿ ಗುಲ್ಲೇಬ್ಬಿ ಸುತ್ತಾರೆ ಎಂದು ಟೀಕಿಸಿದರು. ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಬೇಕು ಎಂಬುದು ನಿಜವಾದರೂ ಒಂದೊಂದು ಕಡೆಗೆ ಒಂದೊಂದು ನ್ಯಾಯವಿದೆ ಇದು ಸರಿಯಲ್ಲ ಎಂದರು.

ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕಾಲ್ಗುಣದಿಂದಾಗಿ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಎಲ್ಲಾ ಆಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ನದಿಗೆ ಬೀಡಲಾಗಿದೆ. ಆದ್ದರಿಂದ ನದಿ ಪಾತ್ರದ ಎಲ್ಲರೂ ಎಚ್ಚರಿಕೆ ಯಿಂದ ಇರಬೇಕು ಎಂದರು.

ಶಾಸಕ ಸುರೇಶ್‍ಗೌಡ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನಾಲೆಗಳ ಆಧುನೀಕರಣಕ್ಕೆ ಕ್ರಮ ವಹಿಸುತ್ತೇನೆ. ಮಂಡ್ಯ-ನಾಗ ಮಂಗಲ ರಸ್ತೆಯನ್ನು ರಾಜ್ಯ ಹೆದ್ದಾರಿ ಯನ್ನಾಗಿ ಪರಿವರ್ತಿಸಲು ಪ್ರಯತ್ನಿಸ ಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಯಿಂದ ತಾಲೂಕಿನ ಕೆರೆಕಟ್ಟೆಗಳ ಅಭಿವೃದ್ಧಿಗೆ 220 ಕೋಟಿಗಳ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಅತ್ಯಂತ ಹಿಂದುಳಿದ ದೇವಲಾಪುರ ಕೆರೆಗೆ ನೀರು ಹರಿಸುವುದು ಸೇರಿದಂತೆ, ತಾಲೂಕಿನ ಎಲ್ಲಾ ಕೆರೆಕಟ್ಟೆಗಳಿಗೆ ಹೇಮಾವತಿಯಿಂದ ನೀರು ತುಂಬಿಸುತ್ತೇನೆ ಎಂದರು. ಮಾಜಿ ಶಾಸಕ ಎಲ್.ಆರ್.ಶಿವ ರಾಮೇಗೌಡ ಮಾತನಾಡಿದರು. ಈ ವೇಳೆ ಜೆಡಿಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯ ದರ್ಶಿ ಟಿ.ಕೃಷ್ಣಪ್ಪ ಎಲ್ಲಾ ಶಾಸಕರು ಮತ್ತು ಅತಿಥಿಗಳನ್ನು ಸನ್ಮಾನಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಜವರೇಗೌಡ, ವಕೀಲ ಟಿ.ಕೆ.ರಾಮೇಗೌಡ, ಜಿಪಂ ಸದಸ್ಯರಾದ ಮುತ್ತಣ್ಣ, ರುಕ್ಮೀಣಿ , ಮರಿಹೆಗ್ಗಡೆ, ರೇಣುಮ್ಮ, ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಷೇಖ್ ಅಹಮದ್, ತಮ್ಮಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಕುಮಾರ್, ಯುವ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ರಘು, ತಾಲೂಕು ಘಟಕದ ಅಧ್ಯಕ್ಷ ವಿನೋದ್ ಸೇರಿದಂತೆ ಹಲವರಿದ್ದರು.

Translate »