ಇಂದಿನಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ
ಮೈಸೂರು

ಇಂದಿನಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ

July 17, 2018

ಮೈಸೂರು:  ಮೈಸೂರಿನ ಲಷ್ಕರ್ ಮೊಹಲ್ಲಾ (ಬೆಂಗಳೂರು ಪೇಟೆ)ದಲ್ಲಿ ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ಯುವಕರ ಭಕ್ತ ಮಂಡಳಿ ಆಶ್ರಯದಲ್ಲಿ ಜು.17ರಿಂದ 21ರವರೆಗೆ 78ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಆಯೋಜಿಸಲಾಗಿದೆ.

ಜು.17ರಂದು ಮಧ್ಯಾಹ್ನ 12 ಗಂಟೆಗೆ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನು ಮರಾಠ ರಾಮಮಂದಿರದಿಂದ ಕಬೀರ್ ರಸ್ತೆ ಮೂಲಕ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಗುವುದು. 18ರಂದು ಸಂಜೆ 6 ಗಂಟೆಗೆ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿಯಿಂದ ಭಜನೆ, 7 ಗಂಟೆಗೆ ಮಕ್ಕಳಿಂದ ವೇಷಭೂಷಣ ಸ್ಪರ್ಧೆ ನಡೆಯಲಿದೆ.

19ರಂದು ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6.30ಕ್ಕೆ ಪುಷ್ಪರಾಗಾಸ್ ತಂಡದಿಂದ ಆರ್ಕೆಸ್ಟ್ರಾ, ಸಂಜೆ 7 ಗಂಟೆಗೆ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ ಯುವ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ.ಯೋಗೇಂದ್ರ ವರ್ಣೆ ಹಾಗೂ ಸಮಾಜ ಭೂಷಣ ಮತ್ತು ಜೀವನ್ ಗೌರವ್ ಪ್ರಶಸ್ತಿ ಪುರಸ್ಕøತ ಸಮಾಜದ ಮುಖಂಡರನ್ನು ಸನ್ಮಾನಿಸಲಾಗುವುದು.

20ರಂದು ಸಂಜೆ 7 ಗಂಟೆಗೆ ವಿದ್ವಾನ್ ಶಿವಕುಮಾರ್ ಶಾಸ್ತ್ರಿ ಅವರಿಂದ ಚಾಮುಂಡೇಶ್ವರಿ ಮಹಾತ್ಮೆ ಹರಿಕಥೆ, ರಾತ್ರಿ 7.30ಕ್ಕೆ ಬಹುಮಾನ ವಿತರಣೆ, ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣೆ ನಡೆಯಲಿದೆ. ಜು.21ರಂದು ಮಧ್ಯಾಹ್ನ 12 ಗಂಟೆಗೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಭಕ್ತ ಮಂಡಳಿ ಅಧ್ಯಕ್ಷ ಜೈಕುಮಾರ್ ಲಾಳಿಗೆ, ಸಹ ಕಾರ್ಯದರ್ಶಿ ಮಂಜುನಾಥರಾವ್ ಲಾಳಿಗೆ ತಿಳಿಸಿದ್ದಾರೆ.

Translate »