ಗಣ್ಯರು, ಸರ್ಕಾರಿ ಅಧಿಕಾರಿಗಳ ವಾಹನಗಳ ತಪಾಸಣೆಗೆ ಸೂಚನೆ
ಮೈಸೂರು

ಗಣ್ಯರು, ಸರ್ಕಾರಿ ಅಧಿಕಾರಿಗಳ ವಾಹನಗಳ ತಪಾಸಣೆಗೆ ಸೂಚನೆ

April 4, 2019

ಮೈಸೂರು:ಸ್ಟ್ಯಾಟಿಕ್ ಚೆಕ್‍ಪೋಸ್ಟ್‍ಗಳಲ್ಲಿ ಗಣ್ಯರು, ಸರ್ಕಾರಿ ಅಧಿಕಾರಿಗಳ ವಾಹನ ಗಳನ್ನು ತೀವ್ರ ತಪಾಸಣೆ ಗೊಳಪಡಿಸುವಂತೆ ಸೂಚಿಸ ಲಾಗಿದೆ ಎಂದು ಜಿಲ್ಲಾ ಚುನಾ ವಣಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು, ಸರ್ಕಾರಿ ವಾಹನಗಳಲ್ಲಿ ಹಣ ಹಾಗೂ ಪ್ರಚಾರ ಸಾಮಗ್ರಿಗಳನ್ನು ಸಾಗಿಸಲಾಗು ತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಾಪಿಸಿ ರುವ ಎಲ್ಲಾ ಸ್ಟ್ಯಾಟಿಕ್ ಚೆಕ್‍ಪೋಸ್ಟ್ ಗಳಲ್ಲಿ ಸಾರ್ವಜನಿಕರ ವಾಹನಗಳಂತೆಯೇ ವಿವಿಐಪಿ ಹಾಗೂ ಪೊಲೀಸ್ ಸೇರಿದಂತೆ ಸರ್ಕಾರಿ ವಿವಿಧ ಇಲಾಖೆಗಳ ವಾಹನ ಗಳನ್ನೂ ತಡೆದು ತಪಾಸಣೆ ಮಾಡ ಲಾಗುತ್ತಿದೆ ಎಂದ ಅವರು, ಸಂಶಯ ಬಂದರೆ ಆಂಬು ಲೆನ್ಸ್ ಸಹ ತೀವ್ರ ಪರಿಶೀ ಲನೆ ನಡೆಸಿ ಎಂದು ಅಧಿ ಕಾರಿಗಳಿಗೆ ಸೂಚಿಸಿದ್ದೇನೆ ಎಂದೂ ತಿಳಿಸಿದರು.

ಬೆಂಗಳೂರು-ಮೈಸೂರು ಹೆದ್ದಾರಿ, ಹುಣಸೂರು ರಸ್ತೆ, ನಂಜನಗೂಡು ರಸ್ತೆಗಳಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಪ್ರತಿಯೊಂದು ವಾಹನವನ್ನು ತಡೆದು ತಪಾಸಣೆ ನಡೆಸಿದರೆ, ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರಿಗೆ ತೊಂದರೆ ಉಂಟಾ ಗುವುದರಿಂದ ಸಂಶಯ ಬಂದ ವಾಹನ ತಪಾಸಣೆ ಮಾಡಲಾಗುತ್ತಿದೆ ಎಂದೂ ಚುನಾವಣಾಧಿಕಾರಿಗಳು ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ 10,79,300 ರೂ. ನಗದು ವಶ
ಮೈಸೂರು: ನೀತಿ ಸಂಹಿತೆ ಜಾರಿಗೆ ಬಂದ ನಂತರ ಈವರೆಗೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 10,79,300 ರೂ. ನಗದನ್ನು ಸ್ಟ್ಯಾಟಿಕ್ ಚೆಕ್‍ಪೋಸ್ಟ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

1,22,87,992 ರೂ. ಬೆಲೆ ಬಾಳುವ 24,064 ಲೀಟರ್ ಮದ್ಯ ಸಾಗಣೆ ಮಾಡುತ್ತಿದ್ದ 70 ವಾಹನಗಳನ್ನೂ ಚುನಾ ವಣಾ ಕರ್ತವ್ಯದಲ್ಲಿರುವ ಅಧಿಕಾರಿ ಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಚೆಕ್‍ಪೋಸ್ಟ್‍ಗಳ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ವಿಜಿಲೆನ್ಸ್ ಟೀಂ ಹಾಗೂ ಪೊಲೀಸ್ ಅಧಿ ಕಾರಿಗಳು ಚುನಾವಣಾ ಅಕ್ರಮ ಚಟು ವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸಿ, ಕಟ್ಟೆಚ್ಚರ ವಹಿಸಿದ್ದಾರೆ.

Translate »