ಬಿಳಿಕೆರೆ ಚೆಕ್‍ಪೋಸ್ಟ್ ಬಳಿ ಸರ್ಕಾರಿ ಕಾರಿನಲ್ಲಿ  ಚುನಾವಣಾ ಪ್ರಚಾರ ಸಾಮಗ್ರಿ ಪತ್ತೆ
ಮೈಸೂರು

ಬಿಳಿಕೆರೆ ಚೆಕ್‍ಪೋಸ್ಟ್ ಬಳಿ ಸರ್ಕಾರಿ ಕಾರಿನಲ್ಲಿ ಚುನಾವಣಾ ಪ್ರಚಾರ ಸಾಮಗ್ರಿ ಪತ್ತೆ

April 4, 2019

ಮೈಸೂರು: `ಕೇಂದ್ರ ಸರ್ಕಾರ’ ಫಲಕವಿದ್ದ ಇನ್ನೋವಾ ಕಾರಿನಲ್ಲಿ ರಾಜಕೀಯ ಪಕ್ಷವೊಂದರ ಚುನಾವಣಾ ಸಾಮಗ್ರಿಗಳು ಇಂದು ಬೆಳಿಗ್ಗೆ ಹುಣಸೂರು ಹೆದ್ದಾರಿಯ ಬಿಳಿಕೆರೆ ಚೆಕ್‍ಪೋಸ್ಟ್‍ನಲ್ಲಿ ಪತ್ತೆಯಾಗಿವೆ.

ಮೈಸೂರು ಕಡೆಯಿಂದ ತೆರಳುತ್ತಿದ್ದ `ಗವರ್ನ ಮೆಂಟ್ ಆಫ್ ಇಂಡಿಯಾ’ ಫಲಕವಿದ್ದ ಇನ್ನೋವಾ ಕಾರನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ರಾಜ ಕೀಯ ಪಕ್ಷದ ಚುನಾವಣಾ ಪ್ರಚಾರ ಸಾಮಗ್ರಿಗಳು ಪತ್ತೆಯಾದವು ಎಂದು ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಕಾರು ಬೆಂಗಳೂರಿನಿಂದ ಕೇರಳಾಕ್ಕೆ ತೆರಳುತ್ತಿತ್ತು. ಕೇಂದ್ರ ಸರ್ಕಾರದ ಆಹಾರ ಸಚಿವಾ ಲಯಕ್ಕೆ ಸೇರಿದ ಕಾರು ಎಂಬುದು ತಿಳಿದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಅದರಲ್ಲಿ ಪ್ರಚಾರ ಸಾಮಗ್ರಿಗಳನ್ನು ಕೇರಳಾಗೆ ಸಾಗಿಸಲಾಗುತ್ತಿತ್ತು ಎಂಬುದು ಕಂಡು ಬಂದಿದ್ದು, ಇನೋವಾ ಕಾರು, ಚಾಲಕ ಹಾಗೂ ಓರ್ವ ಪ್ರಯಾಣಿಕನನ್ನು ವಶಕ್ಕೆ ಪಡೆದಿರುವ ಚೆಕ್‍ಪೋಸ್ಟ್ ಅಧಿಕಾರಿಗಳು ಬಿಳಿಕೆರೆ ಪೊಲೀಸರಿಗೆ ಅವರನ್ನು ಒಪ್ಪಿಸಿದ್ದಾರೆ ಎಂದು ತಿಳಿಸಿದರು.

ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರು, ಕಾರು ಯಾರಿಗೆ ಸೇರಿದ್ದು, ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು, ಚುನಾವಣಾ ಸಾಮಗ್ರಿಯನ್ನು ಯಾವ ಅಭ್ಯರ್ಥಿಗಳ ಪ್ರಚಾರಕ್ಕೆ ಕೊಂಡೊಯ್ಯಲಾಗುತ್ತಿತ್ತು, ಕಾರು ಸರ್ಕಾರದ್ದೇ ಅಥವಾ ಖಾಸಗಿಯವರ ಕಾರಿಗೆ ಸರ್ಕಾರಿ ನಾಮಫಲಕ ಅಳವಡಿಸಲಾಗಿದೆಯೇ ಎಂಬುದರ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Translate »