ನೋಂದಾಯಿತ 580 ಅಭ್ಯರ್ಥಿಗಳ ಪೈಕಿ 436 ಮಂದಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗದ ಭರವಸೆ
ಮೈಸೂರು

ನೋಂದಾಯಿತ 580 ಅಭ್ಯರ್ಥಿಗಳ ಪೈಕಿ 436 ಮಂದಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗದ ಭರವಸೆ

July 30, 2019

ಮೈಸೂರು,ಜು.29(ಆರ್‍ಕೆಬಿ)- ಪ್ರಧಾನ ಮಂತ್ರಿ ಕೌಶಲ ಕೇಂದ್ರ (ಪಿಎಂಕೆಕೆ)ದ ವತಿಯಿಂದ ಮೈಸೂರಿನ ಇಲವಾಲದಲ್ಲಿ ಸೋಮವಾರ ನಡೆದ 3ನೇ ರೋಜ್ಗಾರ್ ಮೇಳ (ಉದ್ಯೋಗ ಮೇಳ)ದಲ್ಲಿ ನೋಂದಾ ಯಿಸಿಕೊಂಡ 580 ಅಭ್ಯರ್ಥಿಗಳ ಪೈಕಿ 436 ಜನರಿಗೆ ವಿವಿಧ ಕಂಪನಿ ಮತ್ತು ಸಂಸ್ಥೆಗಳಲ್ಲಿ ಉದ್ಯೋಗ ಲಭಿಸಲಿದೆ.

ಇಲವಾಲ ಬಸ್ ನಿಲ್ದಾಣದ ಕಟ್ಟಡ ದಲ್ಲಿ ನಿರುದ್ಯೋಗಿಗಳಿಗಾಗಿಯೇ ಸ್ಥಾಪಿಸ ಲಾಗಿರುವ ಪ್ರಧಾನಮಂತ್ರಿ ಕೌಶಲ ಕೇಂದ್ರ ದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 25ಕ್ಕೂ ಹೆಚ್ಚು ಕಂಪನಿಗಳು ಹಾಜರಿದ್ದು, ಅಭ್ಯರ್ಥಿಗಳ ಕೌಶಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡರು.

ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸದ ದಾಖಲೆಗಳೊಂದಿಗೆ ಕಂಪನಿಗಳು ನಡೆ ಸಿದ ಸಂದರ್ಶನದಲ್ಲಿ ಭಾಗವಹಿಸಿದ್ದರು. ಇಡೀ ದಿನ ಕೇಂದ್ರದ ಆವರಣ ಉದ್ಯೋಗ ಅರಸಿ ಬಂದಿದ್ದ ಹಾಗೂ ಪಿಎಂಕೆಕೆ ಕೇಂದ್ರ ದಲ್ಲಿ ತರಬೇತಿ ಹೊಂದಿದ ಅಭ್ಯರ್ಥಿ ಗಳಿಂದ ಗಿಜಿಗುಡುತ್ತಿತ್ತು. ಕಂಪನಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, 2-3 ದಿನಗಳಲ್ಲಿ ತಮ್ಮ ಕಂಪನಿಗಳಿಗೆ ನಿಯೋಜಿಸಿಕೊಳ್ಳಲಿ ದ್ದಾರೆ ಎಂದು ಪಿಎಂಕೆಕೆ ಕೇಂದ್ರದ ವ್ಯವ ಸ್ಥಾಪಕ ಕೆ.ಎಲ್.ಪರಮೇಶ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

2018ರ ಮಾರ್ಚ್‍ನಲ್ಲಿ ನಡೆದ ಮೊದಲ ಉದ್ಯೋಗ ಮೇಳದಲ್ಲಿ 464 ಅಭ್ಯರ್ಥಿ ಗಳು ಭಾಗವಹಿಸಿ, 274 ಮಂದಿಗೆ ಹಾಗೂ 2019ರ ಜನವರಿಯಲ್ಲಿ ನಡೆದ 2ನೇ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 500 ಅಭ್ಯರ್ಥಿಗಳ ಪೈಕಿ 352 ಮಂದಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಲಭಿಸಿತ್ತು. ಅದೇ ರೀತಿ ಇಂದು ನಡೆದ ಮೇಳದಲ್ಲಿ ವಿವಿಧ ಕಂಪನಿಗಳು ಮಾಡಿಕೊಂಡಿರುವ ಆಯ್ಕೆ ಪಟ್ಟಿಯಲ್ಲಿ ಬಹುತೇಕ ಎಲ್ಲರಿಗೂ ಉದ್ಯೋಗ ದೊರೆಯಲಿದೆ ಎಂದರು.

ಉಚಿತ ಕೌಶಲ ತರಬೇತಿ, ಉದ್ಯೋಗ ಸಹಾಯ: ಮೈಸೂರಿನ ಹೊರವಲಯ ದಲ್ಲಿರುವ ಇಲವಾಲ ಬಸ್ ನಿಲ್ದಾಣದ ಕಟ್ಟಡದಲ್ಲಿರುವ ಪ್ರಧಾನ ಮಂತ್ರಿ ಕೌಶಲ ಕೇಂದ್ರ (ಪಿಎಂಕೆಕೆ)ದಲ್ಲಿ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಎಸ್‍ಎಸ್ ಎಲ್‍ಸಿ, ಪಿಯುಸಿ, ಡಿಪ್ಲೊಮಾ ಮತ್ತು ಯಾವುದೇ ಪದವಿ ಪಡೆದ 18ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಕೌಶಲ ತರಬೇತಿ ಹಾಗೂ ಉದ್ಯೋಗ ಸಹಾಯ ದೊರೆಯ ಲಿದೆ. ಅಸಿಸ್ಟೆಂಟ್ ಎಲೆಕ್ಟ್ರಿಷಿಯನ್ (55 ದಿನ), ಫುಡ್ ಅಂಡ್ ಬೆವರೇಜಸ್-ಸ್ಟಿವಾರ್ಡ್ (45 ದಿನ), ರಿಟೇಲ್ ಸೇಲ್ಸ್ ಅಸೋಸಿ ಯೇಷನ್ (40 ದಿನ), ಡೊಮೆಸ್ಟಿಕ್ ಐಟಿ ಹೆಲ್ಪ್‍ಡೆಸ್ಕ್ ಅಟೆಂಡೆಂಟ್ (55 ದಿನ), ಫೀಲ್ಡ್ ಟೆಕ್ನಿಷಿಯನ್- ಅದರ್ ಹೋಮ್ ಅಪ್ಲೈಯನ್ಸಸ್ (50 ದಿನ), ಫೀಲ್ಡ್ ಟೆಕ್ನಿಷಿ ಯನ್- ಕಂಪ್ಯೂಟರ್ ಅಂಡ್ ಫೆರಿಫೆರಲ್ಸ್ (55 ದಿನ) ತರಬೇತಿ ದೊರೆಯಲಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ ಬೇಸಿಕ್ ಕಂಪ್ಯೂ ಟರ್ ಹಾಗೂ ಸ್ಪೋಕನ್ ಇಂಗ್ಲಿಷ್ ತರ ಬೇತಿಯನ್ನೂ ನೀಡಲಾಗುತ್ತದೆ. ಆಸಕ್ತ ಯುವಕ -ಯುವತಿಯರು ವಿಳಾಸ ದಾಖಲೆ, ಶೈಕ್ಷ ಣಿಕ ದಾಖಲೆ, ಬ್ಯಾಂಕ್ ಖಾತೆ ವಿವರ ಗಳೊಂದಿಗೆ ಇಲವಾಲದ ಪ್ರಧಾನಮಂತ್ರಿ ಕೌಶಲ ಕೇಂದ್ರದಲ್ಲಿ ಹೆಸರು ನೋಂದಾ ಯಿಸಿಕೊಳ್ಳಬಹುದು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು. ಮಾಹಿತಿಗೆ ದೂ.0821-2403671, 9731061142, 9482820081 ಸಂಪರ್ಕಿಸಬಹುದು.
ಇಲವಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯೆ ಇಂದಿರಮ್ಮ, ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾ ಯಕ ನಿರ್ದೇಶಕಿ ಡಿ.ಎಂ.ರಾಣಿ, ಪಿಎಂ ಕೆಕೆ ಕೇಂದ್ರದ ವ್ಯವಸ್ಥಾಪಕ ಕೆ.ಎಲ್.ಪರ ಮೇಶ್ ಹಾಗೂ ಎಕ್ಸಲಸ್ ಸಂಸ್ಥೆಯ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು

ಯಾವುದೇ ಕೆಲಸ ಮೇಲೂ ಅಲ್ಲ.. ಕೀಳೂ ಅಲ್ಲ..
ಉದ್ಯೋಗ ಮೇಳಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಸಂಸದ ಪ್ರತಾಪ ಸಿಂಹ ಅವರ ಪತ್ನಿ ಅರ್ಪಿತಾ ಪ್ರತಾಪ ಸಿಂಹ ಮಾತನಾಡಿ, ಪದವೀಧರರು, ಪದವಿ ವಂಚಿತ ನಿರುದ್ಯೋಗಿಗಳಿಗಾ ಗಿಯೇ ನರೇಂದ್ರ ಮೋದಿ ಸ್ಥಾಪಿಸಿದ ಪ್ರಧಾನಮಂತ್ರಿ ಕೌಶಲ ಕೇಂದ್ರವನ್ನು ಮೈಸೂರು ಮತ್ತು ಕೊಡಗಿನಲ್ಲಿ ಸ್ಥಾಪಿಸ ಲಾಗಿದೆ. ಅರ್ಹತೆ ಜೊತೆಗೆ ಅನು ಭವವೂ ಉದ್ಯೋಗಕ್ಕೆ ಪರಿಗಣಿಸಲ್ಪಡು ತ್ತದೆ. ಹೀಗಾಗಿ ಅಭ್ಯರ್ಥಿಗಳು ಸಿಕ್ಕಿದ ಅವ ಕಾಶವನ್ನು ಬಳಸಿಕೊಳ್ಳಬೇಕು. ನಿಮ್ಮ ಪ್ರತಿಭೆ ಮತ್ತು ಅನುಭವ ಉತ್ತಮ ಜೀವನ ವನ್ನು ರೂಪಿಸುತ್ತದೆ ಎಂದರು.

ಮೈಸೂರು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿ ಕಾರಿ ಶಿವಣ್ಣ ಮಾತ ನಾಡಿ, ಕಳೆದ ಫೆಬ್ರವರಿ ಯಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಹಲವು ಕಂಪನಿಗಳು ಉದ್ಯೋಗ ನೀಡಲು ಮುಂದೆ ಬಂದಿದ್ದರೂ ಬಹುತೇಕ ಮಂದಿ ಉದ್ಯೋಗಾಕಾಂಕ್ಷಿಗಳು ಮತ್ತು ಪೋಷ ಕರು ಮೈಸೂರಿನಲ್ಲಿಯೇ ಉದ್ಯೋಗ ಬೇಕೆಂಬ ಮನಸ್ಥಿತಿ ಹೊಂದಿದ್ದುದು ಕಂಡು ಬಂದಿತು. ಅಭ್ಯರ್ಥಿಗಳು ಎಲ್ಲಿ ಬೇಕಾದರೂ ಕೆಲಸ ಮಾಡಲು ಸಿದ್ಧವಿರ ಬೇಕು. ದೊಡ್ಡ ದೊಡ್ಡ ಕಂಪನಿಗಳು ಹೆಚ್ಚು ವೇತನ ನೀಡಿ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲು ಸಿದ್ಧವಿರುವಾಗ ಅಭ್ಯರ್ಥಿ ಗಳು ಕೆಲಸಕ್ಕೆ ಸೇರಲು ಮುಂದಾಗ ಬೇಕು. ಉದ್ಯೋಗ ಸಿಕ್ಕಿದಾಗ ಯಾವ ಕಂಪನಿಯಾದರೂ ಸರಿ ಒಪ್ಪಿಕೊಂಡು ಜೀವನ ರೂಪಿಸಿಕೊಳ್ಳಬೇಕು. ನಿಮ್ಮ ಪ್ರತಿಭೆ ಯನ್ನು ನೋಡಿ ಕಂಪನಿಗಳು ನಿಮ್ಮ ಸಂಬಳ ಇನ್ನಿತರ ಬೆನಿಫಿಟ್ ಹೆಚ್ಚು ನೀಡುತ್ತಾರೆ ಎಂದು ಸಲಹೆ ನೀಡಿದರು.

Translate »