ಮೈಸೂರು, ಜು.21(ಎಸ್‍ಬಿಡಿ)- ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಬಂದಿದ್ದ ವೃದ್ಧೆಯನ್ನು ವಂಚಿಸಿ, ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕು ಗಂಗರ ಹೊಸಹಳ್ಳಿ ಗ್ರಾಮದ ಪುಟ್ಟಮ್ಮ(65) ವಂಚಕನ ಬಲೆಗೆ ಸಿಲುಕಿ ತಾವು ದರಿಸಿದ್ದ 38ಗ್ರಾಂ ಚಿನ್ನದ ಸರ, 8ಗ್ರಾಂ ಓಲೆ ಹಾಗೂ 1,100ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಮಧುಮೇಹ ಪರೀಕ್ಷೆಗೆಂದು ಜು.12 ರಂದು ಕೆ.ಆರ್.ಆಸ್ಪತ್ರೆಗೆ ಬಂದಿದ್ದ ಪುಟ್ಟಮ್ಮ ಅವರನ್ನು ಸುಮಾರು 40 ವರ್ಷದ ಅಪ ರಿಚಿತನೊಬ್ಬ ಮಾತನಾಡಿಸಿ, ಪರಿಚಯ ಮಾಡಿಕೊಂಡಿದ್ದಾನೆ. ನಿಮಗೆ ಸರ್ಕಾರದ ಕಡೆಯಿಂದ ಹಣಕಾಸು ನೆರವು ಕೊಡಿಸು ತ್ತೇನೆಂದು ನಂಬಿಸಿ, ಜೆ.ಕೆ.ಮೈದಾನದ ಕಡೆಗೆ ಕರೆದುಕೊಂಡು ಬಂದಿದ್ದಾನೆ.
ನೀವು ಚಿನ್ನಾಭರಣ ಹಾಕಿಕೊಂಡಿದ್ದರೆ ಸರ್ಕಾರ ದವರು ಹಣ ಕೊಡುವುದಿಲ್ಲವೆಂದು ಹೇಳಿ ಸರ ಹಾಗೂ ಓಲೆಯನ್ನು ಬಿಚ್ಚಿಸಿ, ಅವರ ಪರ್ಸ್‍ನಲ್ಲಿ ಇಡಿಸಿದ್ದಾನೆ. ಬಳಿಕ ಪರ್ಸ್ ಅನ್ನೂ ತೆಗೆದುಕೊಂಡು ಹೋಗುವಂತಿಲ್ಲ ಚೆಕ್ ಮಾಡಿಸುತ್ತಾರೆ. ಇದನ್ನು ನನ್ನ ಬಳಿ ಕೊಟ್ಟಿರಿ, ಆಮೇಲೆ ನಿಮಗೆ ವಾಪಸ್ಸು ನೀಡುತ್ತೇ ನೆಂದು ಹೇಳಿ ಆಭರಣ ಹಾಗೂ ಹಣವಿದ್ದ ಪರ್ಸ್ ಅನ್ನು ಪಡೆದು, ಪುಟ್ಟಮ್ಮ ಅವರ ಪ್ರಜ್ಞೆ ತಪ್ಪಿಸಿ, ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕೆಲಹೊತ್ತಿನ ಬಳಿಕ ಎಚ್ಚರವಾದ ಪುಟ್ಟಮ್ಮ ಆ ವ್ಯಕ್ತಿಗೆ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ.
ಘಟನೆಯಿಂದ ದಿಕ್ಕು ತೋಚದಂತಾದ ಪುಟ್ಟಮ್ಮ ಊರಿಗೆ ವಾಪಸ್ಸಾಗಿ, ಮನೆಯ ವರಿಗೆ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ತಡವಾಗಿ ದೇವರಾಜ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖ ಲಿಸಿಕೊಂಡಿರುವ ಪೊಲೀಸರು, ಖದೀಮನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ವಯೋವೃದ್ಧರೇ ಟಾರ್ಗೆಟ್: ಮೈಸೂ ರಿನಲ್ಲಿ ವಯೋವೃದ್ಧರನ್ನೇ ಟಾರ್ಗೆಟ್ ಮಾಡುವ ವಂಚಕರ ಜಾಲವಿದ್ದಂತಿದೆ. ಅದರಲ್ಲೂ ಕೆ.ಆರ್.ಆಸ್ಪತ್ರೆಗೆ ಬರುವ ಗ್ರಾಮೀಣ ಪ್ರದೇಶದ ಅಮಾಯಕ ಮಹಿಳೆಯರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ. ರೋಗಿ ಗಳು ಹಾಗೂ ಅವರ ಆರೈಕೆಗೆ ಬರುವ ಮಹಿಳೆಯರನ್ನು ಪರಿಚಯಿಸಿಕೊಂಡು ವಿವಿಧ ರೀತಿಯಲ್ಲಿ ವಂಚಿಸುತ್ತಿದ್ದಾರೆ. ಮಹಿಳಾ ವಂಚಕಿಯರೂ ಈ ಜಾಲದಲ್ಲಿದ್ದಾರೆ.
ರಸ್ತೆಯಲ್ಲಿ ಪರ್ಸ್ ಸಿಕ್ಕಿದೆ ಇದರಲ್ಲಿರುವ ಹಣವನ್ನು ಹಂಚಿಕೊಳ್ಳೋಣವೆಂದು ನಂಬಿಸಿ, ಜನ ಸಂದಣಿ ಇಲ್ಲದ ಜಾಗಕ್ಕೆ ಕರೆದೊಯ್ಯುವುದು, ಅಷ್ಟರಲ್ಲಿ ವ್ಯಕ್ತಿಯೊಬ್ಬ ಓಡಿ ಬಂದು ನೀವು ನನ್ನ ಪರ್ಸ್ ಕದ್ದಿದ್ದೀರಿ ಎಂದು ನಟಿಸುವುದು, ಈ ವೇಳೆ ತಾಳಿ ಬಿಚ್ಚಿ ಬಟ್ಟೆಯೊಂದರಲ್ಲಿ ಹಾಕಿ ಆಣೆ ಪ್ರಮಾಣ ಮಾಡುವುದು, ಅದೇ ರೀತಿ ಅಮಾಯಕ ಮಹಿಳೆಯಿಂದಲೂ ಆಣೆ ಮಾಡಿಸುವ ನೆಪದಲ್ಲಿ ಚಿನ್ನಾಭರಣ ದೋಚಿರುವ ಉದಾಹರಣೆಯಿದೆ. ಹೆಚ್ಚು ಪ್ರಮಾಣದ ನಕಲಿ ಚಿನ್ನಾಭರಣ ನೀಡಿ, ಅಸಲಿ ಚಿನ್ನಾಭರಣವನ್ನು ಪಡೆದು ವಂಚಿಸಿರುವ ಪ್ರಕರಣವೂ ನಡೆದಿದೆ.
ಗ್ರಾಮೀಣ ಪ್ರದೇಶದ ವೃದ್ಧ ಮಹಿಳೆ ಯರಿಗೆ ಈ ರೀತಿ ನಂಬಿಸಿ, ವಂಚಿಸುವ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಪರಿ ಚಯವಾದವರನ್ನು ಬಹುಬೇಗ ನಂಬು ತ್ತಾರೆ. ನಗರ ಪ್ರದೇಶದ ಬಗ್ಗೆ ಗೊತ್ತಿರು ವುದಿಲ್ಲ. ಇದನ್ನೇ ಬಂಡವಾಳ ಮಾಡಿ ಕೊಂಡಿರುವ ವಂಚಕರು, ವಿವಿಧ ರೀತಿ ಯಲ್ಲಿ ದುಷ್ಕøತ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಎಚ್ಚರವಹಿಸಿದ್ದರೂ ಪ್ರಯೋಜನವಾಗಿಲ್ಲ. 4 ತಿಂಗಳ ಹಿಂದಷ್ಟೇ ಹೀಗೆ ಆಸ್ಪತ್ರೆಗೆ ಬರುವ ವೃದ್ಧರನ್ನು ವಂಚಿಸಿದ್ದ ಖದೀಮನನ್ನು ದೇವರಾಜ ಪೊಲೀಸರು ಬಂಧಿಸಿ, ಸುಮಾರು 15 ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದರು. ಆದರೂ ಕಳ್ಳರ ಕೈಚಳಕ ಮುಂದುವರೆದಿದೆ. ಇತ್ತ ಸಾರ್ವಜ ನಿಕರೂ ಅಪರಿಚಿತರ ಬಗ್ಗೆ ಎಚ್ಚೆತ್ತು ಕೊಳ್ಳದೆ ವಂಚನೆಗೆ ಬಲಿಯಾಗುತ್ತಿದ್ದಾರೆ.