ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಓಂಪ್ರಕಾಶ್ ಗನ್‍ಮನ್‍ಗಳಲ್ಲಿನಾಗೇಶ್ ಜೈಲಿಗೆ, ಉಳಿದಿಬ್ಬರೂ ಪೊಲೀಸ್ ವಶಕ್ಕೆ
ಮೈಸೂರು

ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಓಂಪ್ರಕಾಶ್ ಗನ್‍ಮನ್‍ಗಳಲ್ಲಿನಾಗೇಶ್ ಜೈಲಿಗೆ, ಉಳಿದಿಬ್ಬರೂ ಪೊಲೀಸ್ ವಶಕ್ಕೆ

August 20, 2019

ಮೈಸೂರು,ಆ.19(ಆರ್‍ಕೆ)- ತಂದೆ-ತಾಯಿ, ಪತ್ನಿ-ಪುತ್ರನನ್ನು ಗುಂಡಿಕ್ಕಿ ಕೊಂದು, ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದ ಉದ್ಯಮಿ ಓಂಪ್ರಕಾಶ್ ಅವರಿಗೆ ಪಿಸ್ತೂಲ್ ನೀಡಿದ್ದ ಗನ್‍ಮನ್ ಟಿ.ವಿ.ನಾಗೇಶ್‍ನನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗನ್ ಲೈಸೆನ್ಸ್ ಹೊಂದಿರುವ ಓಂಪ್ರಕಾಶ್ ಅವರಿಗೆ 0.32 ಮ್ಯಾಗಜಿನ್ ಪಿಸ್ತೂಲ್ ಕೊಟ್ಟು ಐವರ ಸಾವಿಗೆ ಕಾರಣರಾದರೆಂಬ ಆರೋಪದ ಮೇಲೆ ಪಿಸ್ತೂಲ್ ಮಾಲೀಕ ನಾಗೇಶ್‍ನನ್ನು ಪ್ರಕರಣದ ತನಿಖೆ ನಡೆಸು ತ್ತಿರುವ ಗುಂಡ್ಲುಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಹೆಚ್.ಆರ್. ಬಾಲಕೃಷ್ಣ ಅವರು ಶನಿವಾರ ಸಂಜೆ ವಶಕ್ಕೆ ಪಡೆದು ವಿಚಾರಣೆ ನಡೆ ಸುತ್ತಿದ್ದರು. ಓಂಪ್ರಕಾಶ್ ಕೃತ್ಯಕ್ಕೆ ಬಳಸಿದ್ದು ನಾಗೇಶ್‍ನ ಹೆಸರಿನಲ್ಲಿದ್ದ ಪಿಸ್ತೂಲ್ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬಂಧನ ಪ್ರಕ್ರಿಯೆ ನಡೆಸಿ ಇಂದು ಮಧ್ಯಾಹ್ನ ಆತನನ್ನು ಚಾಮ ರಾಜನಗರ ಜಿಲ್ಲಾ ನ್ಯಾಯಾ ಲಯದ ನ್ಯಾಯಾ ಧೀಶರ ಮುಂದೆ ಹಾಜರು ಪಡಿಸಲಾಗಿ ಆರೋಪಿ ಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಬೆಂಗಳೂರಿಗೆ ಕಳುಹಿಸಿದ್ದರು: ಮೂವರು ಗನ್ ಮನ್‍ಗಳ ಪೈಕಿ ಅತ್ಯಂತ ಆತ್ಮೀಯ ಹಾಗೂ ನಂಬಿ ಕಸ್ಥನಾಗಿದ್ದ ಹಾಸನ ಮೂಲದ ಟಿ.ವಿ. ನಾಗೇಶ್ ನನ್ನು 10 ದಿನಗಳ ಹಿಂದೆಯೇ ಬೆಂಗಳೂರಿಗೆ ಕಳು ಹಿಸಿದ್ದ ಓಂಪ್ರಕಾಶ್, ನಾನು ಡೆಲ್ಲಿಗೆ ಹೋಗ ಬೇಕಿದೆ. ನೀನು ಬೆಂಗಳೂರಿಂದ ಬರುವಾಗ ನನಗೆ 10 ಜೊತೆ ಪ್ಯಾಂಟ್-ಶರ್ಟ್, ನಾಲ್ಕು ಜೊತೆ ಷೂ ಹಾಗೂ 1 ಕಪ್ಪು-ನೀಲಿ ಮಿಶ್ರಿತ ಕೋಟ್ ತರು ವಂತೆ ಹೇಳಿದ್ದರು. ಹಾಗೆಯೇ ಡೆಲ್ಲಿಗೆ ರೈಲ್ವೇ ಮುಂಗಡ ಟಿಕೆಟ್ ಕಾಯ್ದಿರಿಸು ಎಂದು ಹೇಳಿದ್ದ ಓಂಪ್ರಕಾಶ್, ಬಳಿಕ ಬೇಡ ಎಂದಿದ್ದರಂತೆ. ಆಗಸ್ಟ್ 16ಕ್ಕೆ ನೇರವಾಗಿ ಗುಂಡ್ಲುಪೇಟೆಗೆ ಬರುವಂತೆ ಹೇಳಿದ್ದ ಓಂಪ್ರಕಾಶ್, ಅಷ್ಟರಲ್ಲಿ ಕುಟುಂಬದೊಂದಿಗೆ ಇಹಲೋಕ ತ್ಯಜಿಸಿದ್ದರು.

ಹಣಕಾಸು ವ್ಯವಹಾರ: ಬೆಂಗಳೂರಿಗೆ ಹೋದಾಗ ಸುಬ್ರಹ್ಮಣ್ಯನಗರ ಪೊಲೀಸ್ ಸ್ಟೇಷನ್‍ಗೆ ಹೋಗಿ ಇನ್ಸ್‍ಪೆಕ್ಟರ್ ಭೇಟಿ ಮಾಡು. ಅವರು ಉದಯ ಶಂಕರ್ ಎಂಬುವರನ್ನು ನನಗೆ ಕೊಡಬೇಕಾದ ಹಣದ ಬಗ್ಗೆ ವಿಚಾರಣೆ ಮಾಡುತ್ತಾರೆ. ಏನಾಯಿ ತೆಂದು ತಿಳಿದುಕೊಂಡು ಹೇಳು ಎಂದು ಓಂಪ್ರಕಾಶ್, ಗನ್‍ಮನ್ ನಾಗೇಶ್‍ಗೆ ತಾಕೀತು ಮಾಡಿದ್ದರಂತೆ. ಬೆಂಗಳೂರಿಗೆ ಹೋಗುತ್ತಿರು ವುದರಿಂದ ಅಲ್ಲಿಗೆಲ್ಲಾ ಪಿಸ್ತೂಲ್ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಅದನ್ನು ಕಾರಿನ ಡ್ಯಾಷ್ ಬೋರ್ಡ್‍ನಲ್ಲಿಡು. ನಾನೇ ನೋಡಿಕೊಳ್ಳುತ್ತೇನೆ ಎಂದಿದ್ದರಿಂದ ಗನ್‍ಮನ್ ಪಿಸ್ತೂಲನ್ನು ಕಾರಿನಲ್ಲೇ ಇಟ್ಟು ಹೋಗಿದ್ದರು.

ಮನೆಯ ಮೇಲಿನಲ್ಲಿ: ತನ್ನ ಜೊತೆ ಬೆಂಗಾ ವಲಿಗೆ ನೇಮಿಸಿಕೊಂಡಿದ್ದ ಗನ್‍ಮನ್ ಗಳಾದ ಹಾಸನದ ಟಿ.ವಿ. ನಾಗೇಶ್, ಬೆಂಗಳೂರು ಮೂಲದ ಮಗೇಶ ಮತ್ತು ಎಂ. ಪ್ರಶಾಂತ ಗನ್‍ಮನ್‍ಗಳಿಗೆ ಮೈಸೂರಿನ ದಟ್ಟಗಳ್ಳಿಯ ತಮ್ಮ ಮನೆಯ ಟೆರೇಸ್ ನಲ್ಲಿದ್ದ ಕೊಠಡಿಯಲ್ಲಿ ತಂಗಲು ಅವಕಾಶ ಕಲ್ಪಿಸಿದ್ದ ಉದ್ಯಮಿ ಓಂಪ್ರಕಾಶ್, ಗನ್‍ಮನ್‍ಗಳು ಊರಿಗೆ ಹೋದಾಗ ಪಿಸ್ತೂಲ್‍ಗಳನ್ನು ಇಲ್ಲಿಯೇ ಇರಿಸುವಂತೆ ತಾಕೀತು ಮಾಡಿದ್ದರು ಎಂದು ತಿಳಿದು ಬಂದಿದೆ.

ಮತ್ತಿಬ್ಬರೂ ವಶಕ್ಕೆ: ನಾಗೇಶ್ ಜೈಲಿಗೆ ಹೋಗು ತ್ತಿದ್ದಂತೆಯೇ ಉಳಿದಿಬ್ಬರು ಗನ್‍ಮನ್‍ಗಳಾದ ಮಗೇಶ ಮತ್ತು ಪ್ರಶಾಂತರನ್ನೂ ಇಂದು ಮಧ್ಯಾಹ್ನ ವಶಕ್ಕೆ ಪಡೆದಿರುವ ಗುಂಡ್ಲುಪೇಟೆ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಓಂಪ್ರಕಾಶ್ ಪರಿಚಯವಾಗಿದ್ದು ಹೇಗೆ? ಎಷ್ಟು ವರ್ಷಗಳಿಂದ ಗನ್‍ಮನ್‍ಗಳಾಗಿ ಕೆಲಸ ಮಾಡು ತ್ತಿದ್ದೀರಿ? ಅವರಿಗೆ ಯಾರಿಂದ ಬೆದರಿಕೆಗಳಿದ್ದವು? ಯಾರೊಟ್ಟಿಗೆ ನಿರಂತರ ಸಂಪರ್ಕವಿತ್ತು? ಬೆದರಿಕೆ ಸಂಬಂಧ ದೂರು ನೀಡಿದ್ದರೆ? ಹಣಕಾಸು ವ್ಯವ ಹಾರ ಸಂಬಂಧ ಜಗಳವಾಗಿತ್ತೆ? ಅವರ ನಿಜವಾದ ವೃತ್ತಿ ಯಾವುದು? ಪ್ರಕರಣ ನಡೆದ ಸಮಯದಲ್ಲಿ ನೀವು ಓಂಪ್ರಕಾಶ್ ಜೊತೆ ಏಕೆ ಇರಲಿಲ್ಲ? ಎಂಬಿತ್ಯಾದಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಮಾಹಿತಿ ಕಲೆ ಹಾಕಲಾಗುತ್ತಿದೆ.

ಬ್ಯಾಂಕ್ ಅಕೌಂಟ್ ಪರಿಶೀಲನೆ: ನಾಳೆ (ಆ. 20)ಯಿಂದ ಓಂಪ್ರಕಾಶ್ ಖಾತೆ ಹೊಂದಿದ್ದರು ಎನ್ನಲಾದ ಹೆಚ್‍ಡಿಎಫ್‍ಸಿ, ಎಸ್‍ಬಿಐ ಮತ್ತು ಕೆನರಾ ಬ್ಯಾಂಕ್‍ನ ಶಾಖೆಗಳಿಗೆ ತೆರಳಲಿರುವ ತನಿಖಾಧಿಕಾರಿಗಳು, ಹಣದ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಪೊಲೀಸ್ ಗಸ್ತು: ತನಿಖೆ ನಡೆಯುತ್ತಿರುವುದ ರಿಂದ ಬೀಗ ಹಾಕಿ ಗುಂಡ್ಲುಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಓಂಪ್ರಕಾಶ್ ಮನೆ ಬಳಿ ಕುವೆಂಪುನಗರ ಠಾಣೆ ಪೊಲೀಸರ ಕಣ್ಗಾವಲಿದೆ.

Translate »