ಮೇ 5, 6ರಂದು ಅಕ್ಕ ಮಹಾದೇವಿ, ಬಸವ ಜಯಂತಿ ಆಚರಣೆ
ಮೈಸೂರು

ಮೇ 5, 6ರಂದು ಅಕ್ಕ ಮಹಾದೇವಿ, ಬಸವ ಜಯಂತಿ ಆಚರಣೆ

May 4, 2019

ಮೈಸೂರು: ಮೈಸೂರಿನ ಶ್ರೀ ಹೊಸಮಠದ ಶ್ರೀ ನಟರಾಜ ಸಭಾ ಭವನ ದಲ್ಲಿ ಮೇ 5 ಮತ್ತು 6ರಂದು ಅಕ್ಕ ಮಹಾದೇವಿ ಮತ್ತು ಬಸವ ಜಯಂತಿ ಕಾರ್ಯಕ್ರಮ ಏರ್ಪ ಡಿಸಲಾಗಿದೆ. ಮೇ 5 ರಂದು ಬೆಳಿಗ್ಗೆ 7 ಗಂಟೆಗೆ ವಿದ್ವಾನ್ ಶ್ರೀ ಗುರುಶಾಂತ ಸ್ವಾಮಿಗಳ 24ನೇ ಪುಣ್ಯಾರಾಧನೆ ನಡೆಯಲಿದ್ದು, ನಂತರ ಬೆಳಿಗ್ಗೆ 9 ಗಂಟೆಗೆ ಲಿಂಗಾ ಯಿತ ಹೆಣ್ಣು ಮಕ್ಕಳಿಗೆ ಲಿಂಗದೀಕ್ಷಾ ಸಂಸ್ಕಾರ ಕಾರ್ಯಕ್ರಮ ನಡೆಯಲಿದೆ. ಕಾರ್ಯ ಕ್ರಮದ ನೇತೃತ್ವವನ್ನು ಹುಣಸೂರು ತಾಲೂಕು ಮಾದಳ್ಳಿ ಉಕ್ಕಿನಕಂತೆ ಮಠದ ಅಧ್ಯಕ್ಷ ಶ್ರೀ ಸಾಂಬಸದಾಶಿವಸ್ವಾಮಿಗಳು ವಹಿಸುವರು. ವಿದ್ಯಾರ್ಥಿಗಳಲ್ಲಿ ಶಿವಶರಣರ ಚಿಂತನೆಗಳ ಅರಿವು ಮೂಡಿಸಲು ಒಂದನೇ ತರಗತಿಯಿಂದ ಕಾಲೇಜು ಮಟ್ಟದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಬಸವಣ್ಣನವರ ಚಿತ್ರಕ್ಕೆ ವರ್ಣ ಸಂಯೋಜನೆ ಮತ್ತು ವಚನಗಾಯನ ಸ್ಪರ್ಧೆಯನ್ನು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.

ಅದೇ ದಿನ ಸಂಜೆ 6 ಗಂಟೆಗೆ ನಡೆಯುವ ಅಕ್ಕಮಹಾದೇವಿ ಜಯಂತಿ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಕವಯಿತ್ರಿ ಡಾ. ಲತಾ ರಾಜಶೇಖರ್ ವಹಿಸುವರು. ಮೈಸೂರು ಜಿಪಂ ಸಿಇಓ ಕೆ.ಜ್ಯೋತಿ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕ ಶ್ರೀಮತಿ ರೂಪ ಕುಮಾರಸ್ವಾಮಿ ‘ಅಕ್ಕನ ವಚನಗಳಲ್ಲಿ ಜೀವನ ಮೌಲ್ಯಗಳು’ ವಿಷಯ ಕುರಿತು ಉಪನ್ಯಾಸ ನೀಡುವರು.

ಮೇ 6ರಂದು ಬೆಳಿಗ್ಗೆ 10.30 ಗಂಟೆಗೆ ಬಸವ ಜಯಂತಿ ಕಾರ್ಯಕ್ರಮ ನಡೆಯ ಲಿದ್ದು, ಉದ್ಘಾಟನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಶುಭಚಂದ್ರ ನೆರವೇರಿಸುವರು. ಅಧ್ಯಕ್ಷತೆ ಯನ್ನು ಮೈಸೂರು ವಿವಿಯ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ. ಎಸ್.ಶಿವರಾಜಪ್ಪ ವಹಿಸಲಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಂ. ನೀಲಗಿರಿ ತಳವಾರರವರು ‘ಸವiಕಾಲೀನ ಸಂದರ್ಭದ ಹಿನ್ನೆಲೆಯಲ್ಲಿ ಬಸವಣ್ಣನವರ ವಚನಗಳ ಅಧ್ಯಯನದ ಅಗತ್ಯತೆ’ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಇದಲ್ಲದೆ ಎಲ್. ಶಿವಲಿಂಗಪ್ಪನವರು ಸಂಯೋಜಿಸಿರುವ ಶರಣರ ಹಾಗೂ ಕವಿಗಳ ದೃಷ್ಟಿಯಲ್ಲಿ ಬಸವಣ್ಣ ಮತ್ತು ವಚನಾಧಾರಿತ ಚಿತ್ರಗಳ ಪ್ರದರ್ಶನವನ್ನು ಏರ್ಪ ಡಿಸಲಾಗಿದೆ. ಅದೇ ದಿನ ಸಂಜೆ 6.30 ಗಂಟೆಗೆ ಅಕ್ಕಮಹಾದೇವಿ, ಶ್ರೀ ಬಸವೇಶ್ವರರ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಮೈಸೂರಿನ ಶ್ರೀ ನೀಲಕಂಠೇಶ್ವರ ಮಠದ ವಿದ್ವಾನ್ ಶ್ರೀ ಸಿದ್ದಮಲ್ಲಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡುವರು. ಮೆರ ವಣಿಗೆಯು ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ರಸ್ತೆಗಳ ಮೂಲಕ ಮಂಗಳವಾದ್ಯ, ನಂದಿಧ್ವಜ ಹಾಗೂ ಜನಪದ ಕಲಾ ತಂಡಗಳೊಂದಿಗೆ ಸಾಗಿ ಶ್ರೀ ಮಠಕ್ಕೆ ತಲುಪಲಿದೆ. ಎರಡೂ ದಿನಗಳು ಸಂಜೆ 5.30 ಗಂಟೆಗೆ ಕು. ಚೂಡಾಮಣಿ ಮತ್ತು ವೃಂದದವರಿಂದ ವಚನಗಾಯನವಿರುತ್ತದೆ ಶ್ರೀ ಹೊಸಮಠದ ಜಯಂತಿ ಮತ್ತು ಉತ್ಸವ ಸಮಿತಿ ಸಂಚಾಲಕ ಡಾ. ಜಿ. ಪ್ರಸಾದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »