ಮೈಸೂರಲ್ಲಿ ಬಿಡಾಡಿ ಹಂದಿ ಹಿಡಿಯುವ ಕಾರ್ಯಾಚರಣೆ ಆರಂಭ
ಮೈಸೂರು

ಮೈಸೂರಲ್ಲಿ ಬಿಡಾಡಿ ಹಂದಿ ಹಿಡಿಯುವ ಕಾರ್ಯಾಚರಣೆ ಆರಂಭ

May 4, 2019

ಮೈಸೂರು: ಸ್ವಚ್ಛತೆ ಹಾಳು ಮಾಡಿ, ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುವ ಬಿಡಾಡಿ ಹಂದಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಮೈಸೂರು ಮಹಾ ನಗರಪಾಲಿಕೆಯು ಇಂದಿನಿಂದ ಆರಂಭಿಸಿದೆ.

ರಸ್ತೆ ಬದಿ, ಕೊಳಚೆ ತಗ್ಗು ಪ್ರದೇಶ, ಶಾಲೆ, ಅಂಗನವಾಡಿಗಳಂತಹ ಸಾರ್ವಜನಿಕ ಸ್ಥಳ ದಲ್ಲಿ ಅಡ್ಡಾಡಿ ಅನೈರ್ಮಲ್ಯ ಉಂಟು ಮಾಡಿ ಅನಾರೋಗ್ಯಕ್ಕೆ ಕಾರಣವಾಗುವುದಲ್ಲದೆ, ವಾಹನ ಸಂಚಾರಕ್ಕೂ ಈ ಹಂದಿಗಳು ತೊಂದರೆ ಮಾಡುತ್ತಿವೆ ಎಂಬ ದೂರು ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರ ಪಾಲಿಕೆಯ ಪಶುಪಾಲನಾ ವಿಭಾಗವು ಹಂದಿ ಹಿಡಿಯುವ ಕಾರ್ಯಾ ಚರಣೆ ಯನ್ನು ಆರಂಭಿಸಿದೆ.

ಮಧುರೈನಿಂದ 20 ಮಂದಿಯನ್ನು ಹಂದಿ ಹಿಡಿಯಲು ಕರೆ ತಂದಿದ್ದು, ಮೊದಲ ದಿನವಾದ ಇಂದು ರಿಂಗ್ ರಸ್ತೆಯ ವಿಶ್ವೇ ಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕಾಲೇಜು ಬಳಿ, ಸಾತಗಳ್ಳಿ ಬಡಾವಣೆ, ಮಹ ದೇವ ಪುರ, ಡಾ.ರಾಜ್‍ಕುಮಾರ್ ರಸ್ತೆ, ತ್ರಿವೇಣಿ ಸರ್ಕಲ್, ಕೈಲಾಸಪುರಂ ಹಾಗೂ ರಾಜೀವ್ ನಗರ ಸುತ್ತಮುತ್ತ ಕಾರ್ಯಾಚರಣೆ ನಡೆಸಿ 37 ಹಂದಿಗಳನ್ನು ಸೆರೆ ಹಿಡಿಯಲಾಯಿತು ಎಂದು ಪಾಲಿಕೆ ಪಶುವೈದ್ಯ ಡಾ. ಸುರೇಶ್ ತಿಳಿಸಿದ್ದಾರೆ. ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯ ಸಿಬ್ಬಂದಿಗಳ ಭದ್ರತೆ ನಡುವೆ ಕಾರ್ಯಾಚರಣೆ ಮಾಡಿ ಒಂದು ತಿಂಗ ಳೊಳಗಾಗಿ ಮೈಸೂರು ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುವ ಹಂದಿಗಳನ್ನು ಹಿಡಿಯಲಾಗುವುದು ಎಂದು ಡಾ. ಸುರೇಶ್ ತಿಳಿಸಿದರು.

ಮೈಸೂರಲ್ಲಿ ಸೆರೆ ಹಿಡಿದ ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡು ತ್ತೇವೆ. ಹತ್ತಿರದಲ್ಲಿ ಬಿಟ್ಟರೆ ಅದರ ಮಾಲೀ ಕರು ಮತ್ತೆ ತರಬಹುದು ಅಥವಾ ಸಮೀ ಪದ ವಸತಿ ಪ್ರದೇಶಕ್ಕೆ ಬಂದು ನೆಲೆಸುತ್ತವೆ ಯಾದ್ದರಿಂದ ಈ ಕ್ರಮ ಕೈಗೊಳ್ಳಲಾಗು ವುದು ಎಂದು ಅವರು ಹೇಳಿದರು.

ತಮ್ಮ ವಾಸ ಸ್ಥಳದಲ್ಲಿ ಆಶ್ರಯ ಕಲ್ಪಿಸಿ, ಸಾಕುವ ಹಂದಿಗಳನ್ನು ನಾವು ಸೆರೆ ಹಿಡಿ ಯುವುದಿಲ್ಲ. ಬೀದಿಗೆ ಬಿಟ್ಟರೆ ಮಾತ್ರ ಅಂತಹ ಹಂದಿಗಳನ್ನು ಹಿಡಿಯದೇ ಬಿಡುವುದಿಲ್ಲ. ಈಗಾಗಲೇ ಹಲವು ಬಾರಿ ಹಂದಿ ಮಾಲೀ ಕರು ಹಾಗೂ ಸಂಘದ ಪದಾಧಿಕಾರಿಗಳಿಗೆ ತಿಳುವಳಿಕೆ ಹೇಳಿದರೂ ಅವರು ಸಾರ್ವ ಜನಿಕವಾಗಿ ಬಿಡುತ್ತಿರುವುದರಿಂದ ಅನಿ ವಾರ್ಯವಾಗಿ ಸೆರೆ ಹಿಡಿಯಬೇಕಾಗಿದೆ ಎಂದು ಅವರು ತಿಳಿಸಿದರು. ಹಂದಿಗಳಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಈ ಹಿಂದೆ ಹಂಚ್ಯಾ-ಸಾತಗಳ್ಳಿ ಬಳಿ ಜಾಗ ಗುರ್ತಿಸಿದ್ದೆವು. ಅಲ್ಲಿ ಪುನರ್ವಸತಿ ಕೇಂದ್ರ ಮಾಡಲು ಭೈರಪ್ಪ ಅವರು ಮೇಯರ್ ಆಗಿದ್ದಾಗ ಪ್ರಯತ್ನ ಮಾಡಿದ್ದರಾದರೂ, ಯೋಜನೆ ವಿಫಲವಾದ ಕಾರಣ, ಹಿಡಿದ ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಬೇಕಾ ಗಿದೆ ಎಂದು ಡಾ. ಸುರೇಶ್ ತಿಳಿಸಿದರು.

Translate »