ಕಾಯಕ ಸೇವಾ ಪ್ರಶಸ್ತಿ ಪ್ರದಾನ
ಮೈಸೂರು

ಕಾಯಕ ಸೇವಾ ಪ್ರಶಸ್ತಿ ಪ್ರದಾನ

May 4, 2019

ಮೈಸೂರು: ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರು ಶರಣ ಮಂಡಲಿ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರಿಗೆ ಶುಕ್ರವಾರ ಕಾಯಕ ಸೇವಾ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ `ಮೈಸೂರು ಮಿತ್ರ’ ಹಿರಿಯ ವರದಿಗಾರ ಎಸ್.ಟಿ. ರವಿಕುಮಾರ್, ಮಹಾಲಕ್ಷ್ಮೀ ಟಿಫಾನೀಸ್ ಮಾಲೀಕ ಮಲ್ಲೇಶ್, ಮುಡಾ ಸಹಾಯಕ ಕಾರ್ಯಪಾಲಕ ಸಿ.ಎನ್.ಲಕ್ಷ್ಮೀಶ್, ಪಬ್ಲಿಕ್ ಟಿವಿಯ ಕೆ.ಪಿ.ನಾಗರಾಜು, ಸೋಮಶೇಖರ್, ಛಾಯಾಗ್ರಾಹಕ ರವಿ ಗವಿಮಠ, ಸಂದೇಶ್ ದಿ ಪ್ರಿನ್ಸ್ ಪಿಆರ್‍ಓ ಎಂ.ಎಲ್. ಶಿವಪ್ರಕಾಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ.ಎಸ್.ಕಾಂತರಾಜ್ ಮಾತನಾಡಿ, ಕಾಯಕಕ್ಕೆ ವಿಶೇಷ ಅರ್ಥವಿದೆ. ಪ್ರತಿಯೊಬ್ಬರ ಜೀವನದಲ್ಲಿ ಕಾಯಕ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಪರಿಕಲ್ಪನೆಯು 12ನೇ ಶತಮಾನದ ಬಸ ವಣ್ಣನವರಿಂದಲೇ ಉದಯವಾಯಿತು. ಅಂದಿನಿಂದಲೂ ಕಾಯಕಕ್ಕೆ ತನ್ನದೇ ಆದ ಮಹತ್ವವಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದವರನ್ನು ಗುರುತಿಸಿ, ಸನ್ಮಾನಿಸುವ ಕಾರ್ಯ ಶ್ಲಾಘನೀಯ ವಾಗಿದ್ದು, ಇದರಿಂದ ಇತರರಿಗೆ ಉತ್ತಮವಾಗಿ ಕಾರ್ಯ ನಿರ್ವ ಹಿಸಲು ಪ್ರೇರೇಪಿಸಿದಂತಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ.ಕೆ.ರಘುರಾಂ, ಯುವ ಮುಖಂಡ ವರುಣಾ ಮಹೇಶ್, ಶರಣ ಮಂಡಲಿ ಪ್ರಧಾನ ಸಂಚಾಲಕ ಎಂ.ಚಂದ್ರ ಶೇಖರ್, ಗೌರವಾಧ್ಯಕ್ಷ ಯು.ಎಸ್.ಶೇಖರ್, ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »