`ಕೈ ತೋರಿದಲ್ಲಿ ನಿಲ್ಲುವೆ’ ಮಾದರಿ ಬಸ್ ಸಂಚಾರ
ಮೈಸೂರು

`ಕೈ ತೋರಿದಲ್ಲಿ ನಿಲ್ಲುವೆ’ ಮಾದರಿ ಬಸ್ ಸಂಚಾರ

May 4, 2019

ಮೈಸೂರು:ಮೈಸೂರು ನಗರ ಸಾರಿಗೆ ವಿಭಾಗವು ಸಾರ್ವಜನಿಕರ ಪ್ರಯಾಣಕ್ಕಾಗಿ `ಕೈ ತೋರಿದಲ್ಲಿ ನಿಲ್ಲುವೆ’ ಮಾದರಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ `ಕೈ ತೋರಿದಲ್ಲಿ ನಿಲ್ಲುವೆ’ ಎಂಬ ಮಾರ್ಗ ಸಂಖ್ಯೆ 244ರ 10ವಾಹನಗಳ ಸಂಚಾರಕ್ಕೆ ಹೆಚ್.ಡಿ.ಕೋಟೆ ಮಾರ್ಗದ ಮಹಿಳಾ ಪ್ರಯಾಣಿಕರು ಚಾಲನೆ ನೀಡಿದರು.

ಈ ವಾಹನಗಳು ನಗರ ಬಸ್ ನಿಲ್ದಾಣ-ಜಯಪುರ-ಹಂಪಾಪುರ-ಹೊಮ್ಮರಗಳ್ಳಿ-ಕೊಳಗಾಲ-ಕೋಟೆ ಹ್ಯಾಂಡ್ ಪೋಸ್ಟ್ ತಲುಪಿ, ಮತ್ತೆ ಅದೇ ಮಾರ್ಗವಾಗಿ ನಗರ ಬಸ್ ನಿಲ್ದಾಣ ತಲುಪಲಿವೆ. ಪ್ರಯಾಣಿಕರು, ವಿದ್ಯಾರ್ಥಿಗಳು, ವಿಕಲಚೇತನರು, ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈ ವೇಳೆ ಮೈಸೂರು ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎನ್. ಸತೀಶ್‍ಕುಮಾರ್, ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

Translate »