ರಂಗಾಯಣ ಚಿಣ್ಣರ ಮೇಳದಲ್ಲಿ ನಟ ಸುಂದರರಾಜ್ ನೀತಿ ಪಾಠ
ಮೈಸೂರು

ರಂಗಾಯಣ ಚಿಣ್ಣರ ಮೇಳದಲ್ಲಿ ನಟ ಸುಂದರರಾಜ್ ನೀತಿ ಪಾಠ

May 4, 2019

ಮೈಸೂರು: ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗದೇ, ನಮ್ಮ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ಉಳಿಸಿ- ಬೆಳೆಸಬೇಕು ಎಂದು ಹಿರಿಯ ನಟ ಸುಂದರ್‍ರಾಜ್ ತಿಳಿಸಿದರು.

ನಗರದ ಕಲಾಮಂದಿರದ ಆವರಣದಲ್ಲಿ ಗುರುವಾರ ರಂಗಾ ಯಣವು ‘ಚಿಣ್ಣರ ಮೇಳದ’ ಅಂಗವಾಗಿ ಆಯೋಜಿಸಿದ್ದ ‘ಜೋಗಿ ಗೊಂದು ಅಂಗಿ’ ಕಾರ್ಯಕ್ರಮವನ್ನು ಜೋಗಿಗೆ ಬಟ್ಟೆಯೊಂದನ್ನು ತೊಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅಂದುಕೊಂಡಂತೆ ಜೀವನ ನಡೆಸಲು ಸಾಧ್ಯವಿಲ್ಲ. ಆದರೆ, ಅಂದುಕೊಳ್ಳದಿರುವುದು ಜೀವನದಲ್ಲಿ ದೊರೆತಾಗ ಅದನ್ನು ಸಂತೋಷದಿಂದ ಸ್ವೀಕರಿಸಬೇಕು. ಹಾಗೇ ಸ್ವೀಕರಿಸುವವರು ಖುಷಿಯಾಗಿರುತ್ತಾರೆ. ಸತ್ಯ ಎನ್ನುವುದು ನಮ್ಮ ದೇಶದ ಪರಂಪರೆಯ ಮಾತಾಗಿದ್ದು, ರಾಷ್ಟ್ರೀಯ ಲಾಂಛನದಲ್ಲಿ ಸತ್ಯ ಮೇವ ಜಯತೇ ಎಂಬ ಸಾಲನ್ನು ನಾವು ಕಾಣಬಹುದಾಗಿದೆ. ಸತ್ಯವನ್ನು ನುಡಿಯುವು ದಲ್ಲದೆ, ಕೊಟ್ಟ ಮಾತಿಗೆ ತಪ್ಪಬಾರದು ಎಂದು ಸಲಹೆ ನೀಡಿದರು.

ಪೋಷಕರೆಲ್ಲರೂ ತಾವು ಹಸಿದರು ತಮ್ಮ ಮಕ್ಕಳ ಹೊಟ್ಟೆ ತುಂಬಿಸುತ್ತಾರೆ. ಅವರಿಗೆ ಒಳ್ಳೆಯ ಬಟ್ಟೆ, ಶಿಕ್ಷಣವನ್ನು ಕೊಡಿಸಲು ಶ್ರಮಿಸುತ್ತಾರೆ. ಹಾಗಾಗಿ, ಮಕ್ಕಳು ಪೋಷಕರ ಶ್ರಮವನ್ನು ಮರೆಯ ಬಾರದು. ಈ ದಿನ ಜೋಗಿಗೆ ನಮ್ಮ ಹಳೆಯ ಬಟ್ಟೆಗಳನ್ನು ಹರಿದು ಒಂದು ಗೂಡಿಸಿ ವಿಶೇಷವಾದ ಬಟ್ಟೆಯೊಂದನ್ನು ತಯಾರಿಸ ಲಾಗಿದೆ. ಅದು ಅನ್ಯೋನ್ಯತೆಯ ಸಂಕೇತವಾಗಿದೆ ಎಂದರು.

ಪೋಷಕರು ಮಕ್ಕಳಿಗೆ ಮೊಬೈಲ್ ಮತ್ತು ಟ್ಯಾಬ್‍ಗಳನ್ನು ನೀಡಬಾರದು. ಟಿವಿಗಳ ಮುಂದೆ ಕೂರಿಸಬಾರದು. ನಾವು ಇರು ವಂತೆಯೇ ತೋರಿಸುವ ರಂಗಾಯಣದಂತೆ ಬದುಕುವುದನ್ನು ಅವರಿಗೆ ಕಲಿಸಬೇಕು. ವೃತ್ತಿ ರಂಗಭೂಮಿಯ ದಿಗ್ಗಜ ಮಾಸ್ಟರ್ ಹಿರಣಯ್ಯ ನಿಧನವು ನೋವಿನ ಸಂಗತಿಯಾಗಿದೆ. ಬಾಲ್ಯದಲ್ಲಿಯೇ ಬಣ್ಣ ಹಚ್ಚಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದವರು ಎಂದು ಸ್ಮರಿಸಿದರು.

ಕಾರ್ಯಕ್ರಮಕ್ಕೂ ಮುನ್ನಾ ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ನಂತರ ಕಿಂದರ ಜೋಗಿ ಮಕ್ಕಳನ್ನು ಕರೆದುಕೊಂಡು ಹೋದ ಕಥೆಯನ್ನು ಅಭಿನಯಿಸುವ ಮೂಲಕ ಮಕ್ಕಳಿಗೆ ಕೊಟ್ಟ ಮಾತನ್ನು ತಪ್ಪ ಬಾರದು ಎಂಬ ಸಂದೇಶವನ್ನು ಸಾರಲಾಯಿತು. ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕಿ ಭಾಗಿರಥಿ ಬಾಯಿ ಕದಂ, ರಂಗಾಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಇತರರು ಉಪಸ್ಥಿತರಿದ್ದರು.

Translate »