ತೊಳಸಿ ಜ್ಯುವೆಲ್ಸ್‍ನಲ್ಲಿ ಫಾರ್ ಎವರ್ ಮಾರ್ಕ್ ವಜ್ರಾಭರಣ ಪ್ರದರ್ಶನ; ರೂಪದರ್ಶಿಯರ ರ್ಯಾಪ್ ವಾಕ್
ಮೈಸೂರು

ತೊಳಸಿ ಜ್ಯುವೆಲ್ಸ್‍ನಲ್ಲಿ ಫಾರ್ ಎವರ್ ಮಾರ್ಕ್ ವಜ್ರಾಭರಣ ಪ್ರದರ್ಶನ; ರೂಪದರ್ಶಿಯರ ರ್ಯಾಪ್ ವಾಕ್

May 4, 2019

ಮೈಸೂರು: ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ತೊಳಸಿ ಜ್ಯುವೆಲ್ಸ್‍ನಲ್ಲಿ ಶುಕ್ರವಾರ ರೂಪ ದರ್ಶಿಯರು ಅತ್ಯಾಕರ್ಷಕ ಫಾರ್ ಎವರ್ ಮಾರ್ಕ್ ವಜ್ರಾಭರಣವನ್ನು ಧರಿಸಿ, ಪ್ರದರ್ಶಿಸಿದರು.

ವಿಶ್ವದ ಅತ್ಯಂತ ಸೂಕ್ಷ್ಮ ಮತ್ತು ಆಯ್ದ ವಜ್ರಾಭರಣಗಳನ್ನು ಗ್ರಾಹಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಏರ್ಪಡಿಸ ಲಾಗಿದ್ದ ಫ್ಯಾಶನ್ ಶೋನಲ್ಲಿ ಫಾರ್ ಎವರ್ ಮಾರ್ಕ್ ವಜ್ರಾಭರಣಗಳನ್ನು ಧರಿಸಿ, ರ್ಯಾಪ್ ಮೇಲೆ ಹೆಜ್ಜೆ ಹಾಕಿದರು. ಸಾಂಪ್ರದಾಯಿಕ ಸೆಟ್ಟಿಂಗ್‍ಗಳು ಮತ್ತು ಟ್ರಿಬ್ಯೂಟ್ ಕಲೆಕ್ಷನ್‍ನ ಅಭರಣಗಳು ಪ್ರೇಕ್ಷಕರ ಗಮನ ಸೆಳೆದವು. ಜ್ಯುವೆಲ್ಸ್‍ನಲ್ಲಿ ಲೇಸರ್ ಲೈಟ್ ಅಳವಡಿಸಿರುವುದರಿಂದ ಗ್ರಾಹಕರಿಗೆ ವಿಶೇಷ ಅನುಭವ ನೀಡುವಂತಿದೆ.

ಈ ಸಂದರ್ಭದಲ್ಲಿ ಜ್ಯುವೆಲ್ಸ್‍ನ ವ್ಯವ ಸ್ಥಾಪಕ ಪಾಲುದಾರ ತಿಲಕ್ ತೊಳಸಿ ಮಾತನಾಡಿ, ವಜ್ರಾಭರಣಗಳ ಪರಿಮಿತ ಸಂಸ್ಥೆಯಾಗಿರುವ ಫಾರ್ ಎವರ್ ಮಾರ್ಕ್‍ನೊಂದಿಗೆ ಸಹಭಾಗಿತ್ವ ಹೊಂದಿ ರುವುದು ನಮಗೆ ಸಂತಸ ತಂದಿದ್ದು, ಉತ್ಕøಷ್ಠವಾದ ವಜ್ರಾಭರಣಗಳನ್ನು ಪೂರೈಕೆ ಮಾಡುವ ಮೂಲಕ ಜನಪ್ರಿಯ ಬ್ರ್ಯಾಂಡ್ ಇದಾಗಿದೆ. ಈ ವಜ್ರಗಳನ್ನು ನಮ್ಮ ವಿನ್ಯಾಸಗಳಿಗೆ ಬಳಸಿಕೊಳ್ಳುತ್ತಿರು ವುದರಿಂದ ಆಭರಣ ಮೌಲ್ಯ ಹೆಚ್ಚುವ ಜತೆಗೆ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆ-ವಿಶ್ವಾಸ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದರು. ಫಾರ್ ಎವರ್ ಇಂಡಿಯಾ ಅಧ್ಯಕ್ಷ ಸಚಿನ್ ಜೈನ್ ಮಾತನಾಡಿ, ಫಾರ್ ಎವರ್ ಮಾರ್ಕ್ ಕೇವಲ ಅಧಿಕೃತ ರೀಟೇಲರ್‍ಗಳೊಂದಿಗೆ ಪಾಲುದಾರಿಕೆ ಹೊಂದಿರುತ್ತದೆ. ಅಂತಹ ಪಾಲುದಾರರು ಆಭರಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕಟ್ಟು ನಿಟ್ಟಾದ ವ್ಯವಹಾರ, ಸಾಮಾಜಿಕ ಮತ್ತು ಪರಿಸರ ಸಮಗ್ರತೆಯಲ್ಲಿ ಮುಂಚೂಣಿ ಯಲ್ಲಿರುತ್ತವೆ. ತೊಳಸಿ ಜ್ಯುವೆಲ್ಸ್ ನಂಬಿಕೆ, ಅಂದವಾದ ಕ್ರಾಫ್ಟ್‍ಮನ್‍ಶಿಪ್ ಮತ್ತು ಆವಿಷ್ಕಾರಕ ಜ್ಯುವೆಲ್ಲರಿ ವಿನ್ಯಾಸಗಳಿಗೆ ಹೆಸರುವಾಸಿ ಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Translate »