ಒಡೆದ ಮನಸುಗಳನ್ನು ಒಗ್ಗೂಡಿಸಿದ ದೇಶಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್
ಮೈಸೂರು

ಒಡೆದ ಮನಸುಗಳನ್ನು ಒಗ್ಗೂಡಿಸಿದ ದೇಶಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್

May 4, 2019

ಮೈಸೂರು: ದೇಶ ದಲ್ಲಿ ಒಡೆದ ಮನಸ್ಸುಗಳನ್ನು ಒಂದು ಗೂಡಿಸಿದ ದೇಶಪ್ರೇಮಿ ಡಾ.ಬಿ.ಆರ್. ಅಂಬೇಡ್ಕರ್ ಎಂದು ಹಿರಿಯ ರಂಗ ಕರ್ಮಿ, ಚಿಂತಕ ಹೆಚ್.ಜನಾರ್ಧನ್ (ಜನ್ನಿ) ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿ ಕಾನೂನು ಶಾಲೆಯಲ್ಲಿ ಶುಕ್ರ ವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಕಾರ್ಯ ಕ್ರಮ ದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಪಡೆ ಯುವ ಸಮಯದಲ್ಲಿ ಜಿನ್ನಾ ಅವರ ನಿಲು ವನ್ನೇ ಅಂಬೇಡ್ಕರ್ ಅನುಸರಿಸಿದ್ದರೆ ಹೊಡೆ ದಾಟ, ರಕ್ತಪಾತಗಳೇ ಆಗುತ್ತಿತ್ತು. ಆದರೆ ಅಂಬೇಡ್ಕರ್ ಅವರ ಇಚ್ಛಾಶಕ್ತಿ, ದೇಶ ಪ್ರೇಮ ಹಾಗೇ ಮಾಡಲಿಲ್ಲ. ಒಡೆದ ಮನಸುಗಳನ್ನು ಒಟ್ಟುಗೂಡಿಸಿದರು. ದೇಶ ಇಬ್ಬಾಗವಾಗ ದಂತೆ ನೋಡಿಕೊಂಡರು ಎಂದು ಹೇಳಿದರು.

ದೇಶ ಕಟ್ಟುವ ಇಚ್ಛಾಸಕ್ತಿ ಮತ್ತು ಬದ್ಧತೆ ಇಲ್ಲದಿದ್ದರೆ ದೇಶ ಮತ್ತು ಸಂಸ್ಕೃತಿ ಎರಡೂ ನಾಶವಾಗುತ್ತದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಜಾತಿ ತೊಲಗದ ಹೊರತು ನಮ್ಮ ದೇಶಕ್ಕೆ ಉಳಿಗಾಲವಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ನೆಲದಲ್ಲಿ ಬದುಕಿ, ಬಾಳಿ, ಸಾಧಿಸಿ ತೋರಿಸಿದ ಡಾ.ಅಂಬೇಡ್ಕರ್, ವಿಶ್ವ ಜ್ಞಾನಿಯಾದರು. ನಾವೆಲ್ಲರೂ ಅವರ ಮಾರ್ಗದಲ್ಲಿ ಸಾಗಬೇಕು. ಅದರಲ್ಲೂ ಕಾನೂನು ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಉಸ್ತುವಾರಿಗಳು ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಕಾನೂನು ಸಚಿವರಾಗಿ ದೇಶದ ಕಾನೂನು ವ್ಯವಸ್ಥೆ ಯನ್ನು ಸುಭದ್ರಗೊಳಿಸಿದರು. ದುಡಿ ಯುವ ವರ್ಗದ ಜನರಿಗೆ ದುಡಿತದ ಅವಧಿ, ಕನಿಷ್ಟ ವೇತನ, ಭವಿಷ್ಯ ನಿಧಿ, ಎಎಸ್‍ಐ ಇನ್ನಿತರ ಸೌಲಭ್ಯಗಳು ದೊರೆಯುವಂತೆ ಮಾಡಿದರು. ಅಲ್ಲದೆ, ಹಿಂದುಳಿದ ವರ್ಗ ಗಳು ಹಾಗೂ ಮಹಿಳೆಯರ ಹಕ್ಕು, ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಾಯ್ದೆ ಜಾರಿಗೆ ಸರ್ಕಾರ ಅಡ್ಡಿ ಉಂಟು ಮಾಡಿದಾಗ ಸಚಿವ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆ ನೀಡಿದ್ದನ್ನು ಸ್ಮರಿ ಸಿದರು. ಕಾರ್ಯಕ್ರಮದಲ್ಲಿ ಕಾನೂನು ಶಾಲೆಯ ಡೀನ್ ಪ್ರೊ.ಸಿ.ಬಸವರಾಜು, ಪತ್ರಕರ್ತ ಆಂಶಿ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

Translate »