ಮಾ.ಹಿರಣ್ಣಯ್ಯ ನಿಧನಕ್ಕೆ ಬ್ರಾಹ್ಮಣ ಸಂಘದಿಂದ ಶ್ರದ್ಧಾಂಜಲಿ
ಮೈಸೂರು

ಮಾ.ಹಿರಣ್ಣಯ್ಯ ನಿಧನಕ್ಕೆ ಬ್ರಾಹ್ಮಣ ಸಂಘದಿಂದ ಶ್ರದ್ಧಾಂಜಲಿ

May 4, 2019

ಮೈಸೂರು: ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ಮೈಸೂರಿನ ಇಟ್ಟಿಗೆಗೂಡಿನಲ್ಲಿ ರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಶ್ರದ್ಧಾಂ ಜಲಿ ಸಲ್ಲಿಸಲಾಯಿತು.
ಮೈಸೂರು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್. ಹಿರಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಸಂಘದ ಪದಾಧಿಕಾರಿಗಳು, ಮುಖಂಡರು ಮೌನಾಚರಣೆ ಮಾಡಿ ಸಂತಾಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಟಿ. ಪ್ರಕಾಶ್, ಸ್ವಾತಂತ್ರ್ಯಾ ನಂತರ ಪ್ರಜಾ ಪ್ರಭುತ್ವದಲ್ಲಿ ರಾಜಕೀಯ ವಿಡಂಬನೆ, ಟೀಕೆ ಗಳ ಮೂಲಕ ಹಿರಣ್ಣಯ್ಯ ಅವರು ಸಾಮಾ ಜಿಕ ನಾಟಕ ಪ್ರದರ್ಶಿಸಿ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಮೂಲತಃ ಮೈಸೂರಿಗರಾದ ಅವರು ಕೆ.ಹಿರಣ್ಣಯ್ಯ ಮಿತ್ರಮಂಡಳಿಯಿಂದ ಪ್ರದರ್ಶಿಸಿದ `ಲಂಚಾವತಾರ’ ನಾಟಕ 11 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ನಾಟಕದ ಮೂಲಕ ಭ್ರಷ್ಟ ರಾಜಕಾರಣಿಗಳು, ಅಧಿ ಕಾರಿಗಳ ಬಣ್ಣ ಬಯಲು ಮಾಡಿ ಜನ ಜಾಗೃತಿ ಉಂಟು ಮಾಡಿದ್ದರು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಸಂಸ್ಥಾಪಕ ಅಧ್ಯಕ್ಷರಾಗಿ ಪ್ರತಿಯೊಂದು ಜಿಲ್ಲೆಯಲ್ಲೂ ಬ್ರಾಹ್ಮಣರನ್ನು ಸಂಘಟಿಸಿ ದ್ದಾರೆ. ಸಾಂಸ್ಕøತಿಕ ಲೋಕಕ್ಕೆ ರಂಗ ಭೂಮಿಗೆ ಸಾಕಷ್ಟು ಕೊಡುಗೆ ನೀಡಿರುವ ಹಿರಣ್ಣಯ್ಯ ಅವರು ನಿಧನರಾದಾಗ ಸರ್ಕಾರಿ ಗೌರವ ಸಿಗದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ನಗರಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಹರೀಶ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ಮಂಜುನಾಥ್, ಹವ್ಯಕ ಸಂಘದ ಅಧ್ಯಕ್ಷ ಎಲ್.ಎನ್.ಹೆಗ್ಡೆ, ಅಪೂರ್ವ ಸುರೇಶ್, ಲತಾ ಬಾಲಕೃಷ್ಣ, ಬ್ರಹ್ಮಣ್ಯತೀರ್ಥ, ಕಡ ಕೊಳ ಜಗದೀಶ್, ಚಕ್ರಪಾಣಿ, ಸುಚೀಂದ್ರ, ಜಯಸಿಂಹ, ವಿಜಯಕುಮಾರ್, ರಂಗ ನಾಥ್, ಶಂಕರ್‍ರಾಜ್, ಸುಬ್ರಹ್ಮಣ್ಯ, ಪ್ರಶಾಂತ್ ಇನ್ನಿತರರು ಭಾಗವಹಿಸಿದ್ದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಿ
ಮೈಸೂರು: ಲೋಕಸಭಾ ಚುನಾ ವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದಂತೆ ಸ್ಥಳೀಯ ಸಂಸ್ಥೆಯಲ್ಲೂ ಹೆಚ್ಚು ಸ್ಥಾನ ಗಳಿಸಲು ಶ್ರಮ ವಹಿಸಿ ಎಂದು ಬಿಎಸ್‍ಪಿ ಮುಖಂಡರೂ ಆದ ಕೊಳ್ಳೇ ಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್, ಪಕ್ಷದ ಕಾರ್ಯ ಕರ್ತರಿಗೆ ಇಂದಿಲ್ಲಿ ಕರೆ ನೀಡಿದರು.

ಮೈಸೂರಿನ ಸರಸ್ವತಿಪುರಂನಲ್ಲಿರುವ ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಾ.ಬಿ.ಚಂದ್ರು ಪರ ಕೆಲಸ ಮಾಡಿದ ಬಿಎಸ್‍ಪಿ ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಚುನಾವಣೆ ಎದುರಿಸುವುದು ಸುಲಭದ ಕೆಲಸವಲ್ಲ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಬಲಪಡಿಸದ ಹೊರತು, ಅಭ್ಯರ್ಥಿಗಳನ್ನು ಗೆಲ್ಲಿಸುವುದು ಕಷ್ಟ. ಪಕ್ಷದ ಧ್ಯೇಯೋದ್ದೇಶಗಳು, ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ನಾಯಕತ್ವವನ್ನು ಮುಂದಿಟ್ಟು ಕೊಂಡು ಕೆಲಸ ಮಾಡಬೇಕೆಂದು ಅವರು ತಿಳಿಸಿದರು.
ನಗರಸಭೆ, ಪುರಸಭೆಗಳಲ್ಲೂ ಬಿಎಸ್‍ಪಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಿದ್ದು, ಎಲ್ಲಾ ಕಾರ್ಯಕರ್ತರು, ಮುಖಂಡರು ಟೊಂಕಕಟ್ಟಿ ನಿಂತು ಅವರ ಗೆಲುವಿಗೆ ಶ್ರಮಿಸಬೇಕಿದೆ ಎಂದು ಮಹೇಶ್ ತಿಳಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿ ಡಾ.ಬಿ.ಚಂದ್ರು, ಮುಖಂಡರಾದ ನಾಗೇಂದ್ರ, ಬೇಗಂ, ಸಿದ್ದರಾಜು, ರಾಹುಲ್, ಮೋಹನ್ ಮೌಳಿ, ಡಾ.ಬಸವರಾಜು, ಶ್ರೀನಿವಾಸ ಪ್ರಸಾದ್, ಕುಮಾರ್ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »