ಮಜ್ಜಿಗೆ ಸೇವಿಸಿ ಗುಂಡ್ಲುಪೇಟೆಯ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ
ಮೈಸೂರು

ಮಜ್ಜಿಗೆ ಸೇವಿಸಿ ಗುಂಡ್ಲುಪೇಟೆಯ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ

May 4, 2019

ಮೈಸೂರು: ಜಮೀನಿನಲ್ಲಿ ಊಟದ ನಂತರ ಮಜ್ಜಿಗೆ ಸೇವಿ ಸಿದ್ದ ಒಂದೇ ಕುಟುಂಬದ 9 ಮಂದಿ ಅಸ್ವಸ್ಥರಾದ ಘಟನೆ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಗ್ರಾಮದ ಮಹದೇವಶೆಟ್ಟಿ(40), ನಾಗ ಶೆಟ್ಟಿ(40), ಸುಂದರಮ್ಮ(22), ಬೆಳ್ಳಮ್ಮ (50), ಅಖಿಲ್(4), ಸುಭಾಷ್(7), ಕಿಶೋರ್(2), ಸೇರಿದಂತೆ ಅಸ್ವಸ್ಥರಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಚಿಕ್ಕತಮ್ಮ ಎಂಬುವರ ಜಮೀನಿನಲ್ಲಿ ಜೋಳ ಬಿತ್ತನೆ ಮಾಡುತ್ತಿದ್ದಾಗ ಎಲ್ಲರೂ ಮಧ್ಯಾಹ್ನ 2.30 ಗಂಟೆ ವೇಳೆಗೆ ಊಟ ಮಾಡಿದ ನಂತರ ಬಿಸಿಲಿನ ತಾಪವಿದ್ದ ಕಾರಣ ಮನೆಯಿಂದ ತಂದಿದ್ದ ಮಜ್ಜಿಗೆ ಸೇವಿ ಸಿದ್ದರು. ಸುತ್ತಲಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೂ ಮಜ್ಜಿಗೆ ಕೊಟ್ಟಿದ್ದರು.

ಸುಮಾರು 15 ನಿಮಿಷದ ನಂತರ ಚಿಕ್ಕ ತಮ್ಮ ಕುಟುಂಬದ ಮೂವರು ಮಕ್ಕಳೂ ಸೇರಿ 9 ಮಂದಿಗೆ ತಲೆ ಸುತ್ತು ವಾಂತಿ ಕಾಣಿಸಿಕೊಂಡಿತು. ತಕ್ಷಣ ಅವರನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆ ದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ರಾತ್ರಿ ಮೈಸೂರಿಗೆ ಕರೆತಂದು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಆಸ್ಪತ್ರೆಯ ಐಪಿಡಿ-ಓಪಿಡಿ ಬ್ಲಾಕ್ (ಹೊಸಕಟ್ಟಡ)ನ ಮೊದಲನೇ ಮಹಡಿಯ ಜನರಲ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಎಲ್ಲಾ 9 ಮಂದಿ ಚೇತರಿಸಿ ಕೊಂಡಿದ್ದಾರೆ. ಸೇವಿಸಿದ ಆಹಾರದಲ್ಲಿ ತುಸು ವ್ಯತ್ಯಯವಾಗಿದ್ದರಿಂದ ಆರೋಗ್ಯ ದಲ್ಲಿ ಏರುಪೇರಾಗಿದೆಯೇ ಹೊರತು, ಜೀವಕ್ಕೆ ಅಪಾಯವಿಲ್ಲ, ಇಂದು ಸಂಜೆ ಅಥವಾ ನಾಳೆ(ಮೇ 4) ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Translate »