ಚುನಾವಣಾ ಪ್ರಚಾರಕ್ಕೆ ಬೀದಿಗಿಳಿದ ತೆರೆದ ಜೀಪುಗಳು
ಮೈಸೂರು

ಚುನಾವಣಾ ಪ್ರಚಾರಕ್ಕೆ ಬೀದಿಗಿಳಿದ ತೆರೆದ ಜೀಪುಗಳು

April 4, 2019

ಮೈಸೂರು: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜ ಕಾರಣಿಗಳಿಗೆ ಸುಸಜ್ಜಿತ ಜೀಪುಗಳು ಪ್ರಚಾರಕ್ಕೆ ಸಜ್ಜಾಗಿವೆ.ಮತದಾರರನ್ನು ಆಕರ್ಷಿಸಲು ವಿವಿಧ ಪಕ್ಷಗಳು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಪಕ್ಷಗಳ ನಾಯಕರು ರೋಡ್ ಶೋ ನಡೆಸಲು ಸೂಕ್ತವಾಗುವ ರೀತಿ ಯಲ್ಲಿ ಜಿಪ್ಸಿ ಜೀಪುಗಳು ಬೀದಿಗಿಳಿದಿವೆ.

ಚುನಾವಣಾ ಪ್ರಚಾರಕ್ಕೆಂದೇ ವಿಶೇಷವಾಗಿ ರೂಪಿಸಲಾಗಿರುವ ತೆರೆದ ಜೀಪುಗಳು ದಿನದ ಬಾಡಿಗೆ ಆಧಾರದಲ್ಲಿ ಲಭ್ಯವಿದೆ. ಈಗಾಗಲೇ ಬಿಜೆಪಿ, ಜೆಡಿಎಸ್ ಪಕ್ಷಗಳು ಜೀಪುಗಳನ್ನು ಬಾಡಿಗೆಗೆ ಪಡೆದು ಪಕ್ಷದ ಬಾವುಟ, ಅಭ್ಯರ್ಥಿ, ಚಿಹ್ನೆ, ಪಕ್ಷದ ನಾಯಕರ ಚಿತ್ರಗಳನ್ನು ಅಲಂಕರಿಸಿಕೊಂಡು ಪ್ರಚಾರ ಕಾರ್ಯ ದಲ್ಲಿ ಭಾಗಿಯಾಗಿವೆ.

ಅಷ್ಟೇನು ಎತ್ತರವಿಲ್ಲದಂತೆ ಪಕ್ಷದ ನಾಯಕರು, ಅಭ್ಯರ್ಥಿಗಳು ಹತ್ತಲು, ಇಳಿ ಯಲು ಸರಾಗವಾಗುವಂತೆ ಹಾಗೂ ರೋಡ್ ಶೋ ಸಂದರ್ಭದಲ್ಲಿ ಬೆಂಬಲಿ ಗರು, ಅಭಿಮಾನಿಗಳು ಹಾರ ತುರಾಯಿ ಹಾಕಲು, ಕೈ ಕುಲುಕಲು ಅನುಕೂಲ ವಾಗುವಂತೆ ಜೀಪ್‍ನ ಎತ್ತರ ರೂಪಿಸ ಲಾಗಿದೆ. ಸೇಫ್ ವ್ಹೀಲ್ಸ್‍ನÀ ಓಪನ್ ಜೀಪ್ ಟೂರ್ಸ್ ಈ ಜೀಪುಗಳನ್ನು ಚುನಾವಣೆ ಪ್ರಚಾರಕ್ಕೆಂದೇ ವಿಶೇಷವಾಗಿ ರೂಪಿಸಿದೆ. ಸಾರ್ವಜನಿಕ ಭಾಷಣಕ್ಕೆ ಮೈಕ್ ವ್ಯವಸ್ಥೆ, ಕಾರ್ಪೆಟ್, ವೈಫೈ ಅಳವಡಿಸಲ್ಪಟ್ಟಿದೆ. ಬಾಡಿಗೆ ಆಧಾರದಲ್ಲಿ ಪಡೆದವರಿಗೆ ಚಾಲಕನನ್ನು ಸಂಸ್ಥೆಯೇ ಕಳುಹಿಸಿ ಕೊಡುತ್ತದೆ. ಜೀಪು ಎಲ್ಲಿದೆ ಎಂದು ತಿಳಿಯಲು ಅನುಕೂಲವಾಗುವಂತೆ ಜಿಪಿಎಸ್ ಸಹ ಅಳವಡಿಸಲಾಗಿರುತ್ತದೆ. ಸಣ್ಣ ಹಳ್ಳಿಗಳಲ್ಲೂ ಕಿರಿದಾದ ರಸ್ತೆಯಲ್ಲೂ ಸಂಚರಿಸಬಹುದಾದ ರೀತಿಯಲ್ಲಿ ಜೀಪ್ ಸಿದ್ಧಪಡಿಸಲಾಗಿದೆ. ಈ ಜೀಪಿನಲ್ಲಿ ಅಭ್ಯರ್ಥಿ ಮತ್ತು ನಾಯಕರು ಸೇರಿದಂತೆ 7 ಮಂದಿಗೆ ಮಾತ್ರ ಅವಕಾಶವಿದೆ. ಹೆಚ್ಚು ಜನ ಹೇರಲು ಅವಕಾಶವಿಲ್ಲ.

ಜೀಪ್ ಬಾಡಿಗೆಗೆ ಪಡೆದ ಪಕ್ಷಗಳೇ ಚುನಾವಣಾ ಪ್ರಚಾರಕ್ಕೆ ಜೀಪ್ ಬಳಸುವ ಕುರಿತಂತೆ ಚುನಾವಣಾ ಅಧಿಕಾರಿಯಿಂದ ಅನುಮತಿ ಪಡೆದುಕೊಳ್ಳಬೇಕು. ಬಳಿಕ ಆಯಾ ಪಕ್ಷಕ್ಕೆ ತಕ್ಕಂತೆ ಅವರ ನಿರ್ದೇ ಶನದಂತೆಯೇ ಬಾವುಟದ ಬಣ್ಣ, ನಾಯಕರು ಮತ್ತು ಅಭ್ಯರ್ಥಿಯ ಭಾವ ಚಿತ್ರ, ಪಕ್ಷದ ಚಿಹ್ನೆಯನ್ನು ಒಳಗೊಂಡಂತೆ ಸಂಸ್ಥೆಯೇ ಜೀಪ್‍ನ್ನು ಸಿದ್ಧಪಡಿಸಿಕೊಡು ತ್ತದೆ. ಜೊತೆಗೆ ಚಾಲಕನನ್ನೂ ಕಳುಹಿಸಿ ಕೊಡಲಾಗುತ್ತದೆ.

ಈಗಾಗಲೇ ಇಂತಹ 6 ಜೀಪ್‍ಗಳು ಚುನಾವಣಾ ಪ್ರಚಾರಕ್ಕೆ ಸಿದ್ಧವಾಗಿದ್ದು, ಈ ಪೈಕಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಗಳು ಚುನಾವಣಾ ಪ್ರಚಾರಕ್ಕೆ ತಲಾ ಒಂದೊಂದು ಜೀಪ್‍ಗಳನ್ನು ಬಾಡಿಗೆಗೆ ಪಡೆದುಕೊಂಡು, ಪ್ರಚಾರದಲ್ಲಿ ನಿರತವಾಗಿವೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಮ್ಮ ಸಂಸ್ಥೆಯ ತೆರೆದ ಜೀಪ್‍ನಲ್ಲಿಯೇ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡಿದ್ದಾರೆ. ಅಲ್ಲದೆ ಜೆಡಿಎಸ್ ಸಹ ಮಂಡ್ಯದಲ್ಲಿ ಅಭ್ಯರ್ಥಿ ಪರ ಪ್ರಚಾರಕ್ಕೆ ನಮ್ಮ ಜೀಪು ಬಳಸುತ್ತಿದೆ. ಅಲ್ಲದೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಸಹ ಇದೇ ಜೀಪನ್ನು ಪ್ರಚಾರಕ್ಕೆ ಬಳಸಿದ್ದಾರೆ ಎಂದು ಓಪನ್ ಜೀಪ್ ಟೂರ್ಸ್‍ನ ಸಂಚಾಲಕ ಹಾಗೂ ಸೇಫ್ ವ್ಹೀಲ್ಸ್ ನಿರ್ದೇಶಕ ಬಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.

Translate »