ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಇದೇ ತಿಂಗಳ 15 ರಿಂದ ಪಾಸ್‍ಪೋರ್ಟ್ ಸೇವಾ ಕೇಂದ್ರ ಕಾರ್ಯಾ ರಂಭವಾಗಲಿದೆ. ಈ ಮೂಲಕ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಲಿದೆ.
ಚಾಮರಾಜನಗರ ಸಂತೇಮರಹಳ್ಳಿ ವೃತ್ತದ ಬಳಿ ಇರುವ ಮುಖ್ಯ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭವಾಗಲಿದ್ದು ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿದೆ.
ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ತೆರೆಯಬೇಕು. ಈ ಮೂಲಕ ಜಿಲ್ಲೆಯ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಂಸದ ಆರ್.ಧ್ರುವನಾರಾ ಯಣ್ ಕಳೆದ 6 ವರ್ಷಗಳೀಂದ ಸತತವಾಗಿ ಶ್ರಮಿಸುತ್ತಿದ್ದರು. ಈ ಶ್ರಮದ ಪ್ರತಿಫಲವಾಗಿ ಶೀಘ್ರದಲ್ಲಿಯೇ ಕೇಂದ್ರ ಆರಂಭವಾಗಿ ತನ್ನ ಸೇವೆಯನ್ನು ಕಲ್ಪಿಸಲಿದೆ. ಇದರಿಂದ ಉನ್ನತ ಶಿಕ್ಷಣಕ್ಕೆ, ವ್ಯವಹಾರಗಳ ಉದ್ದೇಶಕ್ಕೆ ವಿದೇಶಕ್ಕೆ ತೆರಳುವವರಿಗೆ ಅನುಕೂಲ ಆಗಲಿದೆ.
ಜಿಲ್ಲೆಯ ನಾಗರೀಕರು ಪಾಸ್‍ಪೋರ್ಟ್ ಮಾಡಿ ಸಲು ಇಲ್ಲಿಯವರೆಗೆ ಮೈಸೂರು ಇಲ್ಲವೇ ಬೆಂಗ ಳೂರಿಗೆ ಹೋಗಬೇಕಾದಿತ್ತು. ಪಾಸ್‍ಪೋರ್ಟ್ ಪಡೆಯಲು ಇರುವ ನಿಯಮಾವಳಿಗಳು ಬಿಗಿ ಇರುವ ಕಾರಣ ಬಹಳ ಸಮಯ ಬೇಕಾಗಿತ್ತು. ಇದರಿಂದ ನಾಗರಿಕರು ನಾಲ್ಕೈದು ಬಾರಿ ಆದರೂ ತಾವು ಪಾಸ್‍ಪೋರ್ಟ್ ಪಡೆಯಲು ಕೇಂದ್ರಕ್ಕೆ ತೆರಳಬೇಕಾಗಿತ್ತು. ಆದರೆ ಈಗ ನಗರದಲ್ಲಿಯೇ ಕೇಂದ್ರ ಆರಂಭ ಆಗುತ್ತಿರುವುದರಿಂದ ಇಂತಹ ವರಿಗೆ ಅನುಕೂಲ ಆಗಲಿದೆ.
ಎಸ್.ಎಂ.ಕೃಷ್ಣ ಅವರು ವಿದೇಶಾಂಗ ಸಚಿವ ರಾಗಿದ್ದ ಸಂದರ್ಭದಲ್ಲಿ ಮೈಸೂರು ಮತ್ತು ಚಾಮ ರಾಜನಗರದಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ತೆರೆಯುವಂತೆ ಮನವಿ ಮಾಡಲಾಗಿತ್ತು. ಆಗ ಮೈಸೂರಿನಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಮಂಜೂರಾಗಿತ್ತು. ಕಳೆದ ಎರಡು ವರ್ಷಗಳಿಂದ ಮೈಸೂರಿನಲ್ಲಿ ಪಾಸ್‍ಪೋರ್ಟ್ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಇದಾದ ಎರಡೇ ವರ್ಷಕ್ಕೆ ಚಾಮರಾಜನಗರಕ್ಕೆ ಪಾಸ್‍ಪೋರ್ಟ್ ಸೇವಾ ಕೇಂದ್ರ ಮಂಜೂರಾಗಿ ಅದರ ಕಾರ್ಯಾರಂಭಕ್ಕೆ ದಿನಾಂಕ ನಿಗದಿಗೊಂಡಿರುವುದರಿಂದ ಜಿಲ್ಲೆಯ ಜನತೆ ಹರ್ಷಗೊಂಡಿದ್ದಾರೆ.
ಕೇಂದ್ರ ತೆರೆಯಲು ಸರ್ಕಾರದಿಂದ ಅನುಮತಿ ದೊರೆಯುತ್ತಿದ್ದಂತೆಯೇ ಸಂಸದ ಆರ್.ಧ್ರುವನಾರಾ ಯಣ್ ಉಪ ಪ್ರಾದೇಶಿಕ ಪಾಸ್‍ಪೋರ್ಟ್ ಅಧಿಕಾರಿ ರಾಜೇಶ್‍ನಾಯಕ್ ಅವರನ್ನು ನಗರಕ್ಕೆ ಖುದ್ದು ಆಹ್ವಾನಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ತೆರೆಯಲು ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ ನಂತರ ಕೇಂದ್ರ ಆರಂಭಕ್ಕೆ ಸಿದ್ಧತೆಗಳು ಭರದಿಂದ ನಡೆದಿದೆ.