ಮೈಸೂರಲ್ಲಿ ಫೆ.8ರಿಂದ 10ರವರೆಗೆ  ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ
ಮೈಸೂರು

ಮೈಸೂರಲ್ಲಿ ಫೆ.8ರಿಂದ 10ರವರೆಗೆ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ

February 7, 2019

ಮೈಸೂರು: ಮೈಸೂರು ನಗರ ಗೋಪಾಲಕರ ಸಂಘವು ಪಶು ಪಾಲನಾ ಇಲಾಖೆ ಸಹಯೋಗದಲ್ಲಿ ಮೈಸೂರಿನಲ್ಲಿ ಫೆ.8ರಿಂದ ಮೂರು ದಿನಗಳ ರಾಜ್ಯಮಟ್ಟದ ಹಸು ವಿನ ಹಾಲು ಕರೆಯುವ ಸ್ಫರ್ಧೆ ಆಯೋಜಿಸಿದೆ.

ದಿ.ತೂಗುದೀಪ ಶ್ರೀನಿವಾಸ್ ಹಾಗೂ ನಟ ರೆಬೆಲ್ ಸ್ಟಾರ್ ಅಂಬರೀಶ್ ಸವಿ ನೆನಪಿಗಾಗಿ ಜೆ.ಕೆ.ಮೈದಾನ ದಲ್ಲಿ ನಡೆಯುವ ಹಾಲು ಕರೆಯುವ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ದಷ್ಟ ಪುಷ್ಟ ಹಸುಗ ಳೊಂದಿಗೆ ಮಾಲೀಕರು ಭಾಗವಹಿಸಲಿದ್ದಾರೆ. ಸ್ಪರ್ಧೆ ಯಲ್ಲಿ ಅತೀ ಹೆಚ್ಚು ಹಾಲು ಕೊಡುವ ಹಸುಗಳಿಗೆ ಬಹುಮಾನಗಳಿವೆ. ಮೊದಲ ಬಹುಮಾನ ಒಂದು ಲಕ್ಷ ರೂ. ಹಾಗೂ ಪಾರಿತೋಷಕ (2 ಕೆಜಿ ಬೆಳ್ಳಿ ದೀಪ), ಎರಡನೇ ಬಹುಮಾನ 75 ಸಾವಿರ ರೂ. ಹಾಗೂ ಪಾರಿತೋಷಕ (1.5 ಕೆಜಿ ಬೆಳ್ಳಿ ದೀಪ), ಮೂರನೇ ಬಹುಮಾನವಾಗಿ 50 ಸಾವಿರ ರೂ. ಹಾಗೂ ಪಾರಿ ತೋಷಕ (1 ಕೆಜಿ ಬೆಳ್ಳಿ ದೀಪ), ನಾಲ್ಕನೇ ಬಹುಮಾನ 30 ಸಾವಿರ ರೂ. ಹಾಗೂ ಪಾರಿತೋಷಕ (1 ಕೆಜಿ ಬೆಳ್ಳಿ ದೀಪ), 5ನೇ ಬಹುಮಾನ 20 ಸಾವಿರ ರೂ. ಹಾಗೂ ಪಾರಿತೋಷಕ (1 ಕೆಜಿ ಬೆಳ್ಳಿ ದೀಪ) ನೀಡಲಾಗುವುದು ಎಂದು ಮೈಸೂರು ನಗರ ಗೋಪಾಲಕರ ಸಂಘದ ಅಧ್ಯಕ್ಷ ಡಿ.ನಾಗಭೂಷಣ್ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

8ರಂದು ಸಂಜೆ 6 ಗಂಟೆಗೆ ದಕ್ಷಿಣ ಭಾರತದ ವಿವಿಧ ಜಾನಪದ ಕಲಾತಂಡಗಳ ಸಮೇತ ಗೋವುಗಳ ಮತ್ತು ಶ್ರೀಕೃಷ್ಣನ ರಥದೊಂದಿಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ಗೋವುಗಳ ಮೆರವಣಿಗೆ ನಡೆಯಲಿದೆ. ಮೇಯರ್ ಪುಷ್ಪಲತಾ ಜಗನ್ನಾಥ್ ಮೆರವಣಿಗೆಗೆ ಚಾಲನೆ ನೀಡುವರು. ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಮಾಜಿ ಶಾಸಕ ಗೋ.ಮಧುಸೂದನ್ ಇನ್ನಿತರರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.

ಫೆ.10ರಂದು ಬೆಳಿಗ್ಗೆ 6.30 ಮತ್ತು ಸಂಜೆ 5.30ಕ್ಕೆ ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ. ನಂತರ ಬಹುಮಾನ ವಿತರಿಸಲಾಗುವುದು. ಮುಡಾ ಮಾಜಿ ಅಧ್ಯಕ್ಷ ಡಿ.ಧ್ರುವಕುಮಾರ್ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಟ ದರ್ಶನ್ ತೂಗುದೀಪ, ಸಚಿವ ಸತೀಶ್ ಜಾರಕಿಹೊಳಿ, ಸಂಸದರಾದ ಆರ್.ಧ್ರುವನಾರಾಯಣ್, ಪ್ರತಾಪ್‍ಸಿಂಹ, ಶಾಸಕರಾದ ಹೆಚ್.ವಿಶ್ವನಾಥ್, ಎಲ್.ನಾಗೇಂದ್ರ, ತನ್ವೀರ್‍ಸೇಠ್, ಡಾ.ಯತೀಂದ್ರ ಮತ್ತು ಮಾಜಿ ಸಚಿವ ಚಲುವರಾಯಸ್ವಾಮಿ ಇನ್ನಿತರರು ಭಾಗವಹಿಸುವರು ಎಂದು ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಸಂಘದ ಕಾರ್ಯದರ್ಶಿ ಮಹದೇವು, ಚಂದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.

Translate »