ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ: ವಿ.ಸೋಮಣ್ಣ
ಮೈಸೂರು

ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ: ವಿ.ಸೋಮಣ್ಣ

August 31, 2019

ಮೈಸೂರು,ಆ.30-ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸ ಲಾಗುವುದು. ಅದಕ್ಕಾಗಿ ಪ್ರತ್ಯೇಕ ಸಮಿತಿ ಗಳನ್ನು ರಚಿಸಿ, ಅಧಿಕಾರಿಗಳನ್ನು ನೇಮಿಸ ಲಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸಮಿತಿಯಲ್ಲಿ ಕರ್ತವ್ಯ ನಿರ್ವಹಿಸಿ ಹಾಗೂ ವಿಭಿನ್ನ ರೀತಿಯ ಕಾರ್ಯಕ್ರಮ ಗಳನ್ನು ಆಯೋಜಿಸಬೇಕು ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಹೇಳಿದರು.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭಾಂಗಣದಲ್ಲಿ ಇಂದು ಆಯೋಜಿಸ ಲಾಗಿದ್ದ ದಸರಾ ಉಪ ಸಮಿತಿಗಳ ರಚನೆ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದಿನ ದಸರಾ ಮಹೋತ್ಸವಗಳಲ್ಲಿ ನಡೆದ ಲೋಪದೋಷಗಳು ಈ ಬಾರಿ ಮರುಕಳಿಸಬಾರದು. ಪ್ರತಿಯೊಬ್ಬ ಸಮಿ ತಿಯ ಸದಸ್ಯರು ಕೂಡ ಜಿಲ್ಲಾಧಿಕಾರಿಗಳ ಆದೇಶಗಳನ್ನು ಪಾಲನೆ ಮಾಡಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಕರ್ತವ್ಯ ನಿರ್ವಹಿಸುವುದು ಅಧಿಕಾರಿಗಳಿಗೆ ಗೌರವದ ಸಂಕೇತವಾಗಿರುತ್ತದೆ ಎಂದರು.

ಆಯಾ ಸಮಿತಿಗಳಲ್ಲಿ ಈಗಿನಿಂದಲೇ ಕಾರ್ಯಚಟುವಟಿಗೆಗಳು ಚುರುಕಾಗಿ ನಡೆಯಬೇಕು. ಉಪಸಮಿತಿಗಳು ನೀಡುವ ಕಾರ್ಯಕ್ರಮಗಳು ಪ್ರವಾಸಿ ಗರನ್ನು ಆಕರ್ಷಿಸಬೇಕು. ಮೈಸೂರಿಗೆ ಬರುವ ಸಾರ್ವಜನಿಕರು, ಪ್ರವಾಸಿಗರಿಗೆ ಯಾವ ಕಾರ್ಯಕ್ರಮಗಳು ನಿರಾಸೆ ಮೂಡಿಸಬಾರದು ಅಂತಹ ಹೊಸ-ಹೊಸ ರೀತಿಯ ಕಾರ್ಯಕ್ರಮಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಿ ಎಂದರು.

ನಗರ ಪೊಲೀಸ್ ಕಮಿಷನರ್ ಕೆ.ಟಿ. ಬಾಲಕೃಷ್ಣ ಅವರು ಮಾತನಾಡಿ, ದಸರಾ ಪ್ರಯುಕ್ತ 2 ಹಂತಗಳಲ್ಲಿ ಪೊಲೀಸ್ ನಿಯೋಜನೆ ಮಾಡಿಕೊಳ್ಳಲಾಗಿದೆ. ಮೊದಲನೇ ಹಂತವಾಗಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 6 ರವರೆಗೆ ಹಾಗೂ ಎರಡನೇ ಹಂತ ಅಕ್ಟೋಬರ್ 7 ಮತ್ತು 8 ರಂದು ಇರುತ್ತದೆ. ಸುಮಾರು ಒಟ್ಟು 6745 ಪೊಲೀಸ್ ನಿಯೋಜನೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಕುಶಾಲ ತೋಪು ಹಾರಿಸಲು ಈಗಾಗಲೇ ಮದ್ದು ಗುಂಡುಗಳನ್ನು ತರಿಸ ಲಾಗಿದ್ದು, ಎಲ್ಲಾ ತಯಾರಿಕೆಗಳನ್ನು ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ ಮತ್ತು ದಸರಾ ಜಂಬೂಸವಾರಿಗೆ ಕಡಿಮೆ ಸಮಯ ವಿರುವದರಿಂದ ಆನೆಗಳಿಗೆ ತಾಲೀಮು ನಡೆಸಲು ಎಲ್ಲಾ ರೀತಿಯ ಸೂಕ್ತ ಬಂದೋ ಬಸ್ತ್ ಮಾಡಿಕೊಳ್ಳಲಾಗಿದೆ ಎಂದರು.

ದಸರಾ ಜಂಬೂಸವಾರಿ ದಿವಸದಲ್ಲಿ ಸ್ತಬ್ಧ ಚಿತ್ರಗಳು ಹಾಗೂ ಕಲಾ ತಂಡಗಳು ನಿಗಧಿಪಡಿಸಿದ ಸಮಯಕ್ಕೆ ಹೊರಡ ಬೇಕು. ಇಲ್ಲವಾದಲ್ಲಿ ಜಂಬೂ ಸವಾರಿ ಆನೆಗಳಿಗೆ ಬನ್ನಿಮಂಟಪ ತಲುಪಲು ಸಮಯ ಸಾಕಾಗುವುದಿಲ್ಲ. ಅರಮನೆ ಯಿಂದ ಬನ್ನಿಮಂಟಪಕ್ಕೆ ಅಂಬಾರಿ ತಲುಪಲು 2 ಗಂಟೆಗಳು ಬೇಕಾಗುವುದ ರಿಂದ ಸಂಜೆ 4-10ಕ್ಕೆ ಪುಷ್ಪಾರ್ಚನೆ ಮಾಡಿ ದರೆ 6-30 ಗಂಟೆಗೆ ಬನ್ನಿಮಂಟಪ ತಲುಪಬಹುದು ಎಂದರು.

ಅರಮನೆಯಲ್ಲಿ ನಡೆಯುವ ಕಾರ್ಯ ಕ್ರಮಗಳು ಹಾಗೂ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಜಂಬೂಸವಾರಿ ಸಾಗುವ ದಾರಿಯಲ್ಲಿ ಸ್ಟೀಲ್ ಬ್ಯಾರಿಕೇಡ್ ಅವಶ್ಯಕತೆ ಇದೆ. ಅದನ್ನು ಕೊಡಿಸಬೇಕಾಗಿ ಸಚಿವರಲ್ಲಿ ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸ್ಟೀಲ್ ಬ್ಯಾರಿಕೇಡ್ ವ್ಯವಸ್ಥೆ ಮಾಡಿಸಿಕೊಡಲಾಗು ವುದು. ಹಾಗೆಯೇ ಈ ಸಮಯದಲ್ಲಿ ಹಲವಾರು ಜೇಬುಗಳ್ಳರು, ಬೀದಿ ಕಾಮ ಣ್ಣರು ಹೆಚ್ಚಾಗುತ್ತಾರೆ ಪ್ರತಿಯೊಂದು ಸರ್ಕಲ್‍ಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಿ ಹೆಚ್ಚಿನ ನಿಗಾ ವಹಿಸಬೇಕು ಎಂದರು.

ಆಹಾರ ಮೇಳವನ್ನು ಈ ಬಾರಿ ಸೆಪ್ಟೆಂ ಬರ್ 29 ರಿಂದ ಅಕ್ಟೋಬರ್ 16 ರವ ರೆಗೆ ಆಯೋಜಿಸಲಾಗುವುದು. ಕರ್ನಾಟಕ ಹೊರರಾಜ್ಯ ಹಾಗೂ ಅಂತರಾಷ್ಟ್ರೀಯ, ಬುಡಕಟ್ಟು ಶೈಲಿಯ ಆಹಾರ ಪದಾರ್ಥ ಗಳ ಅಂಗಡಿ ತೆರೆಯಲು ವ್ಯವಸ್ಥೆ ಮಾಡ ಲಾಗುತ್ತಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಆಹಾರ ಮೇಳವು ಪ್ರಮುಖವಾದ ಕಾರ್ಯಕ್ರಮವಾಗಿದ್ದು ಹಲವಾರು ಸಂಖ್ಯೆ ಯಲ್ಲಿ ಪ್ರವಾಸಿಗರು ಭಾಗವಹಿಸುತ್ತಾರೆ ಅವರಿಗೆ ವಿಶೇಷವಾದ ತಿನಿಸುಗಳನ್ನು ಹೊಸ ಬಗೆಯಲ್ಲಿ ಮಾಡಿಕೊಡಬೇಕೆಂದು ಮತ್ತು ಸಿರಿಧಾನ್ಯಗಳು, ಅವರೆಕಾಳು ಮುಂತಾದ ಧಾನ್ಯಗಳನ್ನು ಬಳಸಿಕೊಂಡು ಹೊಸ ಬಗೆಯ ಆಹಾರ ಉತ್ಪನ್ನ ಮಾಡ ಬೇಕು ಮತ್ತು ಕೈಗೆಟುಕುವ ದರದಲ್ಲಿ ನೀಡ ಬೇಕು. ಆಹಾರಮೇಳದಲ್ಲಿ ಮುಖ್ಯವಾಗಿ ಸ್ವಚ್ಛತೆ ಇರಬೇಕು, ಕಲಬೆರಕೆ ಆಗ ಕೂಡದು, ಪ್ಲಾಸ್ಟಿಕ್ ಬಳಸಬಾರದು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದರು.

ವಿದ್ಯುತ್ ದೀಪಾಲಂಕಾರ ಪ್ರಮುಖ ಆಕರ್ಷಣೆಯಾಗಿದ್ದು, ಎಲ್ಲಾ ನಗರ ಭಾಗದ ವೃತ್ತಗಳು ಹಾಗೂ ರಸ್ತೆಗಳಿಗೆ ಹೊಸತನದ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಬೇಕು. ಹಿಂದಿನ ರೀತಿಯ ಲೈಟಿಂಗ್ಸ್ ರೀತಿ ಇರಬಾರದು. ಕಲ್ಕತ್ತಾದ ದುರ್ಗಾ ಪೂಜೆಯರೀತಿ ವಿಶೇಷವಾಗಿ ದೀಪಾ ಲಂಕಾರ ಮಾಡಲಾಗುವುದು. ಅದರ ಬಗ್ಗೆ ತಿಳಿದುಕೊಳ್ಳಿ ಎಂದರು.

ಫಲಪುಷ್ಪ ಪ್ರದರ್ಶನ ಕೂಡ ವಿಭಿನ್ನ ರೀತಿಯಲ್ಲಿ ಹೊಸ ಆಲೋಚನೆ ಬಳಸಿ ಕೊಂಡು ಮಾಡಬೇಕು. ಚಂದ್ರಯಾನ, ಟೈಗರ್, ರಾಜರ ಪ್ರತಿಮೆಗಳು ಹೀಗೆ ಹೂವುಗಳಿಂದ ವಿನೂತನವಾಗಿ ಯಾವ-ಯಾವ ಆಕರ್ಷಣೀಯ ವಸ್ತುಗಳನ್ನು ತಯಾರಿಸಬಹುದು ಎಂಬುದನ್ನು ಸಂಗ್ರ ಹಿಸಿ ಎಂದರು.

ಸಭೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾ ಹಕ ಅಧಿಕಾರಿ ಕೆ.ಜ್ಯೋತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »